
ಕೆರಿಬಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳು ಮಾತ್ರವೇ ಉಳಿದಿದೆ. ಈ ಲೀಗ್ ಟೂರ್ನಿಯ ಮೂಲಕ ಟಿ20 ಕ್ರಿಕೆಟ್ ಲೀಗ್ ಮರಳುತ್ತಿದೆ. ಈ ಖುಷಿ ಕ್ರಿಕೆಟ್ ಅಭಿಮಾನಿಗಳಿಗಾಗದರೆ ಈ ಟೂರ್ನಿಯನ್ನು ಬಳಸಿಕೊಂಡು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಇರಾದೆ ಆಟಗಾರರದ್ದು.
ಹೌದು, ಲೀಗ್ ಟೂರ್ನಿಗಳ ಮೂಲಕ ರಾಷ್ಟ್ರೀಯ ತಂಡಗಳಲ್ಲಿ ಸ್ಥಾನವನ್ನು ಪಡೆದ ಆಟಗಾರರು ಸಾಕಷ್ಟಿದ್ದಾರೆ. ಈಗ ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಡ್ಯಾರೆನ್ ಸಮಿ ಕೂಡ ಈ ಟೂರ್ನಿಯ ಮೂಲಕ ರಾಷ್ಟ್ರೀಯ ತಂಡಕ್ಕೆ ಮರು ಆಯ್ಕೆಯಾಗುವ ಗುರಿಯಿಟ್ಟುಕೊಂಡಿದ್ದಾರೆ.
2016ರಲ್ಲಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಎನಿಸಿದ ಕೆಲವೇ ತಿಂಗಳಲ್ಲಿ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕನಾಗಿರುವ ಡ್ಯಾರನ್ ಸಮಿ ತಂಡದಿಂದ ಹೊರಬಿದ್ದರು. 2016ರ ಆಗಸ್ಟ್ ತಿಂಗಳಿನಿಂದ ಸಮಿ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡವನ್ನು ಮತ್ತೆ ಸೇರಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಡ್ಯಾರನ್ ಸಮಿ ರಾಷ್ಟ್ರೀಯ ತಂಡಕ್ಕೆ ಮರಳಿ ಭಾರತದಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಸೈಂಟ್ ಲೂಸಿಯಾ ಝೌಕ್ಸ್ ತಂಡದ ನಾಯಕನಾಗಿರುವ ಡ್ಯಾರೆ್ ಸಮಿಗೆ ಈ ಬಾರಿಯ ಸಿಪಿಎಲ್ ಅದಕ್ಕೆ ಅವಕಾಸವ್ನು ಮಾಡಿಕೊಡಲಿದೆ ಎಂದು ಭಾವಿಸಿದ್ದಾರೆ.
ನಾನಿನ್ನೂ ಕೂಡ ನಿವೃತ್ತಿಯನ್ನು ಹೇಳಿಲ್ಲ. ನನ್ನ ಪಾಲಿಗೆ ಇನ್ನೂ ಬಾಗಿಲು ಮುಚ್ಚಿಲ್ಲ. ಈ ಬಾರಿಯ ಸಿಪಿಎಲ್‌ನಲ್ಲಿ ಸೈಂಟ್ ಲೂಸಿಯೂ ಝೌಕ್ಸ್ ತಂಡಕ್ಕೆ ನಾನು ಏನು ಮಾಡಬೇಕೆಂದುಕೊಂಡಿದ್ದೇನೋ ಅದನ್ನು ಮಾಡಲು ನನ್ನ ಅತ್ಯುತ್ತಮ ಪ್ರದರ್ಸನದ ಮೂಲಕ ಫ್ಲೇ ಆಫ್‌ಗೆ ಪ್ರವೇಶವನ್ನು ಪಡೆದು ವಿಶ್ವಕಪ್ ಆಯ್ಕೆಗಾರರ ಗಮನವನ್ನು ಸೆಳೆಯುತ್ತೇನೆ ಎಂದು ಡ್ಯಾರೆನ್ ಸಮಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.