Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ವರ್ನಾನ್ ಫಿಲಾಂಡರ್ ಸಹೋದರನ ಮೇಲೆ ಗುಂಡಿನ ದಾಳಿ, ಕೊಲೆ!

Former South Africa Pacer Vernon Philanders Brother Shot Dead

ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ವರ್ನಾನ್ ಫಿಲಾಂಡರ್ ಅವರ ಕಿರಿಯ ಸಹೋದರನನ್ನು ಕೇಪ್ ಟೌನ್‌ನ ರಾವೆನ್ಸ್ಮೀಡ್‌ನಲ್ಲಿ ಬುಧವಾರ ಮಧ್ಯಾಹ್ನ ಅವರ ಮನೆಯಿಂದ ಕೆಲವೇ ಅಂತರದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

ಸ್ಥಳೀಯ ಮಾಧ್ಯಮಗಳ ವರದಿಗಳಿಂದ ಈ ಬೆಳವಣಿಗೆಯನ್ನು ದೃಢ ಪಡಿಸಲಾಯಿತು. ಟೈರೋನ್ ನೆರೆಯ ಮನೆಯವರಿಗೆ ಟ್ರಾಲಿಯಲ್ಲಿ ನೀರನ್ನು ಸಾಗಿಸುತ್ತಿದ್ದಾಗ ಆತನ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ.

ಆಫ್ರಿಕನ್ ನ್ಯೂಸ್ ಏಜೆನ್ಸಿ (ಎಎನ್ಎ) ವರದಿಗಾರರ ಪ್ರಕಾರ, ಘಟನೆ ನಡೆದ ನಂತರ, ಅವನ ತಾಯಿ ಬೊನಿತಾ ಮತ್ತು ಕುಟುಂಬದ ಸದಸ್ಯರು, ತನ್ನ ಮಗನ ದೇಹ ಬೀದಿಯಲ್ಲಿ ಬಿದ್ದಿದ್ದನ್ನು ನೋಡಿ ಆಘಾತಗೊಂಡಿದ್ದಾರೆ. ವೆಸ್ಟರ್ನ್ ಕೇಪ್ ಪೊಲೀಸ್ ವಕ್ತಾರ ಕ್ಯಾಪ್ಟನ್ ಎಫ್‌ಸಿ ವ್ಯಾನ್ ವೈಕ್ ಈ ವಿಷಯದಲ್ಲಿ ತನಿಖೆ ನಡೆಸುವುದನ್ನು ಮತ್ತಷ್ಟು ಖಚಿತಪಡಿಸಿದ್ದಾರೆ.

ರಾವೆನ್ಸ್ಮೀಡ್‌ನ 7 ನೇ ಅವೆನ್ಯೂ ಮತ್ತು ವೆಬ್ನರ್ ರಸ್ತೆಯ ಮೂಲೆಗಳಲ್ಲಿ ಮಧ್ಯಾಹ್ನ 1.10 ರ ಸುಮಾರಿಗೆ ಈ ಘಟನೆ ನಡೆದಿದ್ದು, ಅಲ್ಲಿ 32 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಮಾರಣಾಂತಿಕವಾಗಿ ಗಾಯಗೊಳಿಸಲಾಗಿದೆ ಎಂದು ಮಾಧ್ಯಮ ವರದಿಗಾರರು ತಿಳಿಸಿದ್ದಾರೆ. ವರ್ನಾನ್ ಫಿಲಾಂಡರ್ ಅವರ ಟ್ವಿಟರ್ ಅಕೌಂಟ್‌ನಲ್ಲಿ ಈ ಕುರಿತು ಅವರ ಕುಟುಂಬವು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರಿಂದ ಈ ಘಟನೆಯ ಬಗ್ಗೆ ದೃಢವಾಗಿದೆ.

Story first published: Thursday, October 8, 2020, 17:54 [IST]
Other articles published on Oct 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+