ಶ್ರೀಲಂಕಾ ಕ್ರಿಕೆಟ್ ಟೀಂ ಬೌಲಿಂಗ್ ಸ್ಟ್ರಾಟರ್ಜಿ ಕೋಚ್ ಆಗಿ ಲಸಿತ್ ಮಾಲಿಂಗ ಸೇರ್ಪಡೆ

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ರಾಷ್ಟ್ರೀಯ ತಂಡದ ಪರ ಕೋಚ್ ಆಗಿ ಪದಾರ್ಪಣೆ ಮಾಡಿದ್ದಾರೆ. ತಂಡದ ಬೌಲಿಂಗ್ ಸ್ಟ್ರಾಟರ್ಜಿ ಕೋಚ್ ಆಗಿ ಆಯ್ಕೆಗೊಂಡಿರುವ ಮಾಲಿಂಗ ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.
ಲಸಿತ್ ಮಾಲಿಂಗ ತಾತ್ಕಾಲಿಕವಾಗಿ ಶ್ರೀಲಂಕಾ ತಂಡಕ್ಕೆ ಬೌಲಿಂಗ್ ಸ್ಟ್ರಾಟರ್ಜಿ ಕೋಚ್ ಆಯ್ಕೆಗೊಂಡಿದ್ದಾರೆ. ಇದೇ ವರ್ಷ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಲಂಕನ್ನರು 1-4ರಿಂದ ಹೀನಾಯ ಸೋಲು ಕಂಡ ಬಳಿಕ ತಂಡದಲ್ಲಿ ಮಹತ್ತರ ಬದಲಾವಣೆ ಆಗಿದೆ.
"ಮಾಲಿಂಗ, ಪ್ರವಾಸದ ಸಮಯದಲ್ಲಿ, ಶ್ರೀಲಂಕಾದ ಬೌಲರ್‌ಗಳನ್ನು ಬೆಂಬಲಿಸುತ್ತಾರೆ, ಗೇಮ್ ಪ್ಲಾನ್ ಒಳನೋಟ ಮತ್ತು ತಾಂತ್ರಿಕ ಪರಿಣತಿಯನ್ನು ಒದಗಿಸುವ ಮೂಲಕ ಕಾರ್ಯತಂತ್ರದ ಯೋಜನೆಗಳನ್ನು ಮೈದಾನದಲ್ಲಿ ಸ್ಟ್ರಾಟರ್ಜಿಗಳಿಗೆ ಸಹಾಯ ಮಾಡುತ್ತಾರೆ."
"ಮಾಲಿಂಗ ಅವರ ಅಪಾರ ಅನುಭವ ಮತ್ತು ವಿಶೇಷವಾಗಿ ಟಿ20 ಮಾದರಿಯಲ್ಲಿ ಹೆಸರಾಂತ ಡೆತ್-ಬೌಲಿಂಗ್ ಪರಿಣಿತಿ, ಈ ಎಲ್ಲಾ ಪ್ರಮುಖ ಸರಣಿಗೆ ತಂಡಕ್ಕೆ ಸಹಾಯ ಮಾಡುತ್ತದೆ ಎಂದು ಶ್ರೀಲಂಕಾ ಕ್ರಿಕೆಟ್ ವಿಶ್ವಾಸ ಹೊಂದಿದೆ" ಎಂದು SLC ಪ್ರಕಟಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು 18 ಸದಸ್ಯರನ್ನೊಳಗೊಂಡ ತಂಡವನ್ನ ಆಯ್ಕೆ ಮಾಡಿದ್ದಾರೆ. ದಾಸುನ್ ಶನಕ ಅವರನ್ನು ಮುನ್ನಡೆಸಲಿದ್ದಾರೆ.
ಮೊದಲ ಟಿ20 ಪಂದ್ಯವು ಜೂನ್ 07 ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದ್ದು, ಎರಡನೇ ಟಿ20 ಪಂದ್ಯವು ಮರುದಿನ ಜೂನ್ 8 ರಂದು ನಡೆಯಲಿದೆ. ಅಂತಿಮ ಪಂದ್ಯ ಜೂನ್ 11 ರಂದು ಪಲ್ಲೆಕೆಲೆಯ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಶ್ರೀಲಂಕಾ ತಂಡ:
ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ದನುಷ್ಕ ಗುಣತಿಲಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ನುವಾನಿದು ಫೆರ್ನಾಂಡೋ, ಲಹಿರು ಮಧುಶಂಕ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಕಸುನ್ ರಜಿತ, ನುವಾನ್‌ಶ ಮೆನೇಶ ಥೇಸ್ಹಾನ, ಆರ್. , ಪ್ರವೀಣ್ ಜಯವಿಕ್ರಮ, ಲಕ್ಷಣ ಸಂದಕನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications