ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಉನ್ಮುಕ್ತ್ ಚಾಂದ್‌ಗೆ ಗಂಭೀರ ಗಾಯ!

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಅಂಡರ್-19 ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಾಂದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಉನ್ಮುಕ್ತ್ ಎಲ್ಲಿ ಈ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ ಎಂಬುದು ತಿಳಿದುಬಂದಿಲ್ಲ. ಉನ್ಮುಕ್ತ್ ಕಣ್ಣಿಗೆ ತುಂಬಾ ಪೆಟ್ಟಾಗಿದ್ದು ಈ ವಿಷಯವನ್ನು ಅವರು ಟ್ವಿಟ್ಟರ್ ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಗಾಯಗೊಂಡಿರುವ ಸುದ್ದಿ ಜೊತೆಗೆ ಅವರು ತಮ್ಮ ಕಣ್ಣಿನ ಗಾಯದ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ಎಡಗಣ್ಣು ಸಂಪೂರ್ಣವಾಗಿ ಊದಿಕೊಂಡು ಮುಚ್ಚಿದೆ. ಚೆಂಡು ಅವರ ಎಡಗಣ್ಣಿಗೆ ಬಲವಾಗಿ ಬಡಿದಿದೆ ಎಂದು ತಿಳಿದುಬಂದಿದೆ. ಅಥ್ಲೀಟ್‌ಗಳ ಜೀವನ ಸುಗಮವಾಗಿ ಸಾಗುವುದಿಲ್ಲ ಎಂಬುದಕ್ಕೆ ಅವರ ಗಾಯವೇ ಸಾಕ್ಷಿ ಎಂದು ಉನ್ಮುಕ್ತ್ ಹೇಳಿದ್ದಾರೆ.
ಸ್ವಲ್ಪದರಲ್ಲೇ ದೊಡ್ಡ ಅನಾಹುತದಿಂದ ಪಾರು
''ಕ್ರೀಡಾಪಟು ಎಂದರೆ ಜೀವನ ತುಂಬಾ ಸುಗಮವಾಗಿ ಸಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಅದು ಸ್ವಲ್ಪವೂ ನಿಜವಲ್ಲ. ಕೆಲವೊಮ್ಮೆ ನಾವು ವಿಜಯಗಳೊಂದಿಗೆ ಹಿಂತಿರುಗುತ್ತೇವೆ. ಇನ್ನು ಕೆಲವು ದಿನಗಳ ನಿರಾಸೆ, ಸೋಲಿನ ಹೊರೆಯನ್ನು ಹೊತ್ತು ಮನೆಗೆ ಗಾಯಗಳೊಂದಿಗೆ ಬರುತ್ತೇವೆ. ದೊಡ್ಡ ಅಪಘಾತವನ್ನು ತಪ್ಪಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಷ್ಟಪಟ್ಟು ಕೆಲಸ ಮಾಡಿ, ಆದರೆ ಜಾಗರೂಕರಾಗಿರಿ. ಸ್ವಲ್ಪ ಸಮಯದಲ್ಲೇ ಅನಾಹುತ ತಪ್ಪಿದೆ, ಹಾರೈಸಿದ ಎಲ್ಲರಿಗೂ ಧನ್ಯವಾದಗಳು'' ಎಂದು ಉನ್ಮುಕ್ತ್ ಟ್ವೀಟ್ ಮಾಡಿದ್ದಾರೆ.
ಇಂಡೋನೇಷ್ಯಾ ಫುಟ್ಬಾಲ್ ದುರಂತ: ಅಭಿಮಾನಿಗಳ ಕಾಲ್ತುಳಿತಕ್ಕೆ 129 ಜನರ ಸಾವು, 22 ಜನರಿಗೆ ಗಾಯ

ಅಂಡರ್-19 ಚಾಂಪಿಯನ್ ಉನ್ಮುಕ್ತ್ ಚಾಂದ್
ಅಂಡರ್ 19 ವಿಶ್ವಕಪ್ ಗೆಲುವಿನೊಂದಿಗೆ ಭಾರತೀಯ ಕ್ರಿಕೆಟ್ ಗೆ ಎಂಟ್ರಿಕೊಟ್ಟ ಉನ್ಮುಕ್ತ್ ಚಾಂದ್ ಅಷ್ಟೇ ಬೇಗ ತೆರೆಮರೆಗೆ ಸರಿದರು. 2012 ರ ಅಂಡರ್-19 ವಿಶ್ವಕಪ್ ವಿಜೇತ ಭಾರತದ ತಂಡದ ನಾಯಕ ಉನ್ಮುಕ್ತ್ ಚಾಂದ್ ಅವರು ಕ್ರಿಕೆಟಿಗರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ಸುರೇಶ್ ರೈನಾ ಅವರೊಂದಿಗೆ ಜಾಹೀರಾತಿನಲ್ಲಿ ನಟಿಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ಅಪಾರ ಹಣ ಕಂಡಿದ್ದ ಉನ್ಮುಕ್ತ್ ಕ್ರಮೇಣ ಆಟದಲ್ಲಿ ಆಸಕ್ತಿ ಕಳೆದುಕೊಂಡರು. ಐಪಿಎಲ್‌ನಲ್ಲಿ ವಿಫಲವಾದ ನಂತರ, ಅವರು ಭಾರತೀಯ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ತ್ಯಜಿಸಬೇಕಾಯಿತು.
IND vs SA: ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಭಾರತ

ಪ್ರಸ್ತುತ ಅಮೆರಿಕಾ ಕ್ರಿಕೆಟ್ ತಂಡವನ್ನ ಪ್ರತಿನಿಧಿಸುತ್ತಿರುವ ಪ್ಲೇಯರ್
ಟೀಂ ಇಂಡಿಯಾ ಪರ 67 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 120 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಉನ್ಮುಕ್ತ್ ಚಂದ್, ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಆಡಿದ್ದರು. 2016ರ ನಂತರ ಹರಾಜಿನಲ್ಲಿ ಉನ್ಮುಕ್ತ್ ಚಾಂದ್ ಅವರನ್ನು ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಲಿಲ್ಲ. ಅದರೊಂದಿಗೆ, ಆಗಸ್ಟ್ 2021 ರಲ್ಲಿ ಭಾರತೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಗೆ ನಿವೃತ್ತಿ ಘೋಷಿಸಿದ ಉನ್ಮುಕ್ತ್ ಚಂದ್ ಅವರು ಅಮೆರಿಕಕ್ಕೆ ತೆರಳಿದರು.
ಅವರು ಕೋರಿ ಆಂಡರ್ಸನ್, ಲಿಯಾಮ್ ಪ್ಲಂಕೆಟ್, ಜುವಾನ್ ಥರಾನ್ ಮತ್ತು ಸಾಮಿ ಅಸ್ಲಾಮ್ ಅವರಂತಹ ಆಟಗಾರರೊಂದಿಗೆ ಯುಎಸ್ಎ ಕ್ರಿಕೆಟ್ ತಂಡದ ಪ್ರಮುಖ ಸದಸ್ಯರಾಗಿ ಮುಂದುವರೆದಿದ್ದಾರೆ. ಭಾರತದಲ್ಲಿ ನಡೆಯಲಿರುವ 2023ರ ವಿಶ್ವಕಪ್‌ಗೆ ಉನ್ಮುಕ್ತ್ ತಯಾರಿ ನಡೆಸುತ್ತಿದ್ದಾರೆ. ಉನ್ಮುಕ್ತ್ ಚಾಂದ್ ಅವರು ಬಿಬಿಎಲ್‌ನಲ್ಲಿ ಆಡಿದ ಭಾರತದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications