ಪಾಕಿಸ್ತಾನ ತಂಡಕ್ಕೆ ಕೋಚ್ ಆಗುವ ಆಸೆ ವ್ಯಕ್ತಪಡಿಸಿದ ಟೀಮ್ ಇಂಡಿಯಾ ಮಾಜಿ ಆಟಗಾರ!
ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಿಂದ ಹೊರನಡೆದ ನಂತರ ಆತಿಥೇಯ ಪಾಕಿಸ್ತಾನ ತಂಡವು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಕಳಪೆ ಪ್ರದರ್ಶನದಿಂದಾಗಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ಮತ್ತು ಭಾರತ ವಿರುದ್ಧ ಸೋತು ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದೆ. ಇತ್ತೀಚೆಗೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಎದುರಿಸುತ್ತಿರುವ ಪಾಕಿಸ್ತಾನ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಕೇವಲ ಒಂದು ವರ್ಷದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಸರಿಪಡಿಸಿ, ಆಟಗಾರರನ್ನು ಉತ್ತಮಗೊಳಿಸುತ್ತೇನೆ ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಹೇಳಿದ್ದಾರೆ. ಯೋಗರಾಜ್ ಸಿಂಗ್ ಬೇರೆ ಯಾರು ಅಲ್ಲ, ಮಾಜಿ ವಿಶ್ವ ಚಾಂಪಿಯನ್ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ. ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ ಹೊರ ಬಿದ್ದ ನಂತರ ಪಾಕಿಸ್ತಾನದ ಮಾಜಿ ಆಟಗಾರರಾದ ವಾಸಿಮ್ ಅಕ್ರಮ್ ಮತ್ತು ಶೋಯೆಬ್ ಅಖ್ತರ್ ಅವರನ್ನು ಯೋಗರಾಜ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಶೋಯೆಬ್ ಅಖ್ತರ್ ಮತ್ತು ವಾಸಿಂ ಅಕ್ರಮ್ ಅವರನ್ನು ಗುರಿಯಾಗಿಸಿಕೊಂಡು ಕಾಮೆಂಟರಿ ಬಾಕ್ಸ್‌ನಿಂದ ಹೊರಬಂದು ಮೈದಾನದಲ್ಲಿ ಪಾಕಿಸ್ತಾನಿ ಆಟಗಾರರಿಗೆ ಸಹಾಯ ಮಾಡುವಂತೆ ಯೋಗರಾಜ್ ಸಿಂಗ್ ಹೇಳಿದ್ದಾರೆ. ವಾಸಿಮ್ ಅಕ್ರಮ್ ಅವರಂತಹ ದೊಡ್ಡ ಆಟಗಾರ ಇಷ್ಟೊಂದು ಅಸಹ್ಯಕರ ಮಾತುಗಳನ್ನು ಹೇಳುತ್ತಿದ್ದಾರೆಯೇ? ಅವನ ಸುತ್ತಲಿನ ಜನರು ನಗುತ್ತಿದ್ದಾರೆ. ಅವರಿಗೆ ಅವಮಾನ. ಶೋಯೆಬ್ ಅಖ್ತರ್, ಎಂತಹ ಅದ್ಭುತ ಆಟಗಾರ, ನೀವು ಪಾಕಿಸ್ತಾನ ಆಟಗಾರರನ್ನು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯೊಂದಿಗೆ ಹೋಲಿಸುತ್ತಿದ್ದೀರಾ? ಎಂದು ಯೋಗರಾಜ್ ಸಿಂಗ್ ಕಿಡಿಕಾರಿದ್ದಾರೆ.
ವಾಸಿಂ ಜೀ, ನೀವು ಅಲ್ಲಿ ಕುಳಿತು ಹಣ ಸಂಪಾದಿಸುತ್ತಿದ್ದೀರಿ, ಸರಿಯೇ?' ನಿಮ್ಮ ದೇಶಕ್ಕೆ ಹಿಂತಿರುಗಿ ಹೋಗಿ ಶಿಬಿರ ಸ್ಥಾಪಿಸಿ. ನಿಮ್ಮಲ್ಲಿ ಯಾವ ಶ್ರೇಷ್ಠ ಆಟಗಾರ ಪಾಕಿಸ್ತಾನ ತಂಡವನ್ನು ವಿಶ್ವಕಪ್ ಗೆಲ್ಲಿಸಬಲ್ಲರು ಎಂದು ನಾನು ನೋಡಬೇಕು. ಇಲ್ಲದಿದ್ದರೆ, ರಾಜೀನಾಮೆ ನೀಡಿ. ನೀವು ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತು ದೊಡ್ಡ ದೊಡ್ಡ ವಿಷಯಗಳನ್ನು ಹೇಳಿದರೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
ಕೋಚ್ ಆಗುವ ಬಯಕೆ
ಕೇವಲ ಒಂದು ವರ್ಷದಲ್ಲಿ ಪಾಕಿಸ್ತಾನ ಕ್ರಿಕೆಟ್ ಅನ್ನು ಸರಿಪಡಿಸಬಲ್ಲೆ. ಅಲ್ಲಿನ ಆಟಗಾರರನ್ನು ಉತ್ತಮಗೊಳಿಸಬಲ್ಲೆ ಎಂದು ಯೋಗರಾಜ್ ಸಿಂಗ್ ದೊಡ್ಡ ಹೇಳಿಕೆ ನೀಡಿದ್ದಾರೆ. 'ನಾನು ಪಾಕಿಸ್ತಾನಕ್ಕೆ ಹೋದರೆ, ಒಂದು ವರ್ಷದೊಳಗೆ ತಂಡವನ್ನು ಉತ್ತಮಗೊಳಿಸುತ್ತೇನೆ. ನೀವೆಲ್ಲರೂ ನನ್ನನ್ನು ನೆನಪಿಸಿಕೊಳ್ಳುತ್ತೀರಿ. ಇದೆಲ್ಲವೂ ಉತ್ಸಾಹದ ವಿಷಯ. ಯೋಗರಾಜ್ ಸಿಂಗ್ ದಿನಕ್ಕೆ 12 ಗಂಟೆಗಳ ಕಾಲ ತರಬೇತಿಗೆ ಮೀಸಲಿಡುತ್ತಾರೆ. ನೀವು ನಿಮ್ಮ ದೇಶವಾಸಿಗಳಿಗಾಗಿ, ನಿಮ್ಮ ಆಟಗಾರರಿಗಾಗಿ ನಿಮ್ಮ ರಕ್ತ ಮತ್ತು ಬೆವರನ್ನು ಅರ್ಪಿಸಬೇಕು ಎಂದು ಪಾಕಿಸ್ತಾನ ಮಾಜಿ ಆಟಗಾರರಿಗೆ ಸಲಹೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications