
ಒಂದೆಡೆ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಸರಣಿಗಳಿಗೆ ಭಾರತ ಅಂತರರಾಷ್ಟ್ರೀಯ ಕ್ರಿಕೆಟ್ ತಂಡ ಪ್ರಕಟವಾಗಿದ್ದರೆ, ಮತ್ತೊಂದೆಡೆ ಮುಂಬರುವ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಟಿ ಟ್ವೆಂಟಿ ಅಂಧರ ತ್ರಿಕೋನ ಸರಣಿಗೆ ಭಾರತ ಅಂತರರಾಷ್ಟ್ರೀಯ ತಂಡ ಪ್ರಕಟವಾಗಿದೆ.
ಹೌದು, ಮುಂಬರುವ ಮಾರ್ಚ್ 12ರಿಂದ 19ರವರೆಗೆ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಅಂಧರ ತಂಡಗಳ ನಡುವೆ ತ್ರಿಕೋನ ಟಿ ಟ್ವೆಂಟಿ ಸರಣಿ ನಡೆಯಲಿದೆ. ಹೀಗೆ ನಡೆಯಲಿರುವ ತ್ರಿಕೋನ ಟಿ ಟ್ವೆಂಟಿ ಸರಣಿಯಲ್ಲಿ ಒಟ್ಟು 6 ಲೀಗ್ ಪಂದ್ಯಗಳು ನಡೆಯಲಿದ್ದು ಎಲ್ಲ ಪಂದ್ಯಗಳು ಸಹ ಶಾರ್ಜಾದ ಸ್ಕೈಲೈನ್ ಯೂನಿವರ್ಸಿಟಿ ಕಾಲೇಜು ಕ್ಯಾಂಪಸ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಹೀಗೆ ಮಾರ್ಚ್ 12ರಿಂದ ಆರಂಭವಾಗಲಿರುವ ಈ ಅಂಧರ ತ್ರಿಕೋನ ಟಿ ಟ್ವೆಂಟಿ ಸರಣಿಗಾಗಿ ಭಾರತ ಅಂಧರ ಕ್ರಿಕೆಟ್ ಸಂಸ್ಥೆ 17 ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಿದೆ. ಹೀಗೆ ಪ್ರಕಟಿಸಲಾಗಿರುವ ಭಾರತ ಅಂಧರ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಎಲ್ಲಾ ಆಟಗಾರರು ಕೂಡ ಮಾರ್ಚ್ 1ರಿಂದ ಬೆಂಗಳೂರಿನಲ್ಲಿ ನಡೆಯಲಿರುವ 10 ದಿನಗಳ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗೆ ನಡೆಯಲಿರುವ 10 ದಿನಗಳ ತರಬೇತಿ ಶಿಬಿರದಲ್ಲಿ ಆಟಗಾರರಿಗೆ ಬೇಕಾದ ಹೆಚ್ಚಿನ ತರಬೇತಿಗಳನ್ನು ನುರಿತ ತರಬೇತುದಾರರು ನೀಡಲಿದ್ದಾರೆ.
ಹೀಗೆ ಮುಂಬರುವ ಅಂಧರ ಟಿ ಟ್ವೆಂಟಿ ತ್ರಿಕೋನ ಸರಣಿಗೆ ಭಾರತ ಅಂಧರ ಕ್ರಿಕೆಟ್ ಸಂಸ್ಥೆ ಒಟ್ಟು 3 ವಿಭಾಗಗಳಲ್ಲಿ ಆಟಗಾರರನ್ನು ಪ್ರಕಟಿಸಿದ್ದು, ಸ್ಥಾನ ಪಡೆದುಕೊಂಡಿರುವ ಆಟಗಾರರ ವಿವರ ಈ ಕೆಳಕಂಡಂತಿದೆ..
ಬಿ1 ವಿಭಾಗ: ಕಲ್ಪೇಶ್ ನಿಂಬಾಡ್ಕರ್ (ಗುಜರಾತ್), ವೆಂಕಟೇಶ್ವರ ರಾವ್ (ಆಂಧ್ರ ಪ್ರದೇಶ), ಸುಜಿತ್ ಮುಂಡಾ (ಜಾರ್ಖಂಡ್), ಬಸಪ್ಪ ವಡ್ಡಗೋಳ್ (ಕರ್ನಾಟಕ), ಪ್ರೇಮ್ ಕುಮಾರ್ (ಆಂಧ್ರಪ್ರದೇಶ), ಪ್ರವೀಣ್ ಕುಮಾರ್ ಶರ್ಮಾ (ಹರಿಯಾಣ)
ಬಿ 2 ವಿಭಾಗ: ಡಿ ವೆಂಕಟೇಶ್ವರ ರಾವ್ (ಆಂಧ್ರ ಪ್ರದೇಶ), ಎ ಮನೀಶ್ (ಕೇರಳ), ಇರ್ಫಾನ್ ದಿವಾನ್ (ದೆಹಲಿ), ನಕುಲ್ ಬಡನಾಯಕ (ಒಡಿಶಾ), ಲೋಕೇಶ (ಕರ್ನಾಟಕ)
ಬಿ 3 ವಿಭಾಗ: ದೀಪಕ್ ಮಲಿಕ್ (ಹರಿಯಾಣ), ಪ್ರಕಾಶ ಜಯರಾಮಯ್ಯ (ಕರ್ನಾಟಕ), ಸುನಿಲ್ ರಮೇಶ್ (ಕರ್ನಾಟಕ), ದುರ್ಗಾ ರಾವ್ (ಆಂಧ್ರ ಪ್ರದೇಶ), ಚಂದನ್ (ಉತ್ತರ ಪ್ರದೇಶ), ರಂಬೀರ್ (ಹರಿಯಾಣ).
ಸ್ಥಾನ ಪಡೆದ ಕರ್ನಾಟಕದ ನಾಲ್ವರು ಆಟಗಾರರು:
ಹೀಗೆ ಮಾರ್ಚ್ ತಿಂಗಳಿನಲ್ಲಿ ಯುಎಇಯಲ್ಲಿ ನಡೆಯಲಿರುವ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಅಂಧರ ಟಿ ಟ್ವೆಂಟಿ ಕ್ರಿಕೆಟ್ ತ್ರಿಕೋನ ಸರಣಿಗೆ ಪ್ರಕಟವಾಗಿರುವ 17 ಸದಸ್ಯರ ಭಾರತ ತಂಡದಲ್ಲಿ ಕರ್ನಾಟಕದ ನಾಲ್ವರು ಅಂಧ ಕ್ರಿಕೆಟಿಗರು ಸ್ಥಾನ ಪಡೆದುಕೊಂಡಿದ್ದಾರೆ. ಬಿ 1 ವಿಭಾಗದಲ್ಲಿ ಕರ್ನಾಟಕ ಮೂಲದ ಬಸಪ್ಪ ವಡ್ಡಗೋಳ ಸ್ಥಾನ ಪಡೆದುಕೊಂಡಿದ್ದರೆ, ಬಿ 2 ವಿಭಾಗದಲ್ಲಿ ಕರ್ನಾಟಕ ಮೂಲದ ಲೋಕೇಶ ಎಂಬ ಆಟಗಾರ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಹಾಗೂ ಬಿ 3 ವಿಭಾಗದಲ್ಲಿ ಕರ್ನಾಟಕ ಮೂಲದ ಜಯರಾಮಯ್ಯ ಮತ್ತು ಸುನೀಲ್ ರಮೇಶ್ ಎಂಬ ಇಬ್ಬರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ.