Women's Asia Cup 2024: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಉಚಿತ ಪ್ರವೇಶ; ಯಾವಾಗ, ಎಲ್ಲಿ?
ಜುಲೈ 13 ಶನಿವಾರ, ಭಾರತ ಮತ್ತು ಪಾಕಿಸ್ತಾನ ಉಭಯ ತಂಡಗಳ ಪಂದ್ಯಕ್ಕೆ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುತ್ತದೆ. ಅಷ್ಟರ ಮಟ್ಟಿಗೆ ಉಭಯ ತಂಡದಗಳ ಹೈವೋಲ್ಟೇಜ್ ಪಂದ್ಯ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಇತ್ತೀಚೆಗೆ ಮುಕ್ತಾಯವಾದ 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಎಂದಿಗೂ ಭಾರತೀಯರು ಮರೆಯುವುದಿಲ್ಲ. ಏಕೆಂದರೆ ಸೋಲುವ ಪಂದ್ಯದ ಮೇಲೆ ಹಿಡಿದ ಸಾಧಿಸಿದ ಭಾರತ ತಂಡವು ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತ್ತು.

ಭಾರತ ಮತ್ತು ಪಾಕಿಸ್ತಾನ ಪಂದ್ಯ ನೋಡಲು ಅಭಿಮಾನಿಗಳು ಸಾಕಷ್ಟು ಖರ್ಚು ಮಾಡಿ ಮೈದಾನ ಬರುತ್ತಾರೆ. ಆದರೆ ಈಗ ಅಭಿಮಾನಿಗಳು ಒಂದು ವಾರದ ಬಳಿಕ ನಡೆಯಲಿರುವ 2024ರ ಏಷ್ಯಾ ಕಪ್ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವನ್ನು ಸಂಪೂರ್ಣವಾಗಿ ಉಚಿತವಾಗಿ ಲೈವ್ ಆಗಿ ನೋಡಬಹುದಾಗಿದೆ.
ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ?
ಏಷ್ಯಾ ಕಪ್ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯವು ಜುಲೈ 19ರಂದು ಶ್ರೀಲಂಕಾದ ದಂಬುಲಾದಲ್ಲಿ ನಡೆಯಲಿದೆ.
ಜುಲೈ 19 ರಂದು ಏಷ್ಯಾಕಪ್‌ನಲ್ಲಿ ಎರಡು ಪಂದ್ಯಗಳು ನಡೆಯಲಿವೆ. ನೇಪಾಳ ಹಾಗೂ ಯುಎಇ ವಿರುದ್ಧದ ಮೊದಲ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಅದೇ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಸಂಜೆ 7 ರಿಂದ ನಡೆಯಲಿದೆ.
ಏಷ್ಯಾಕಪ್‌ಗೂ ಮುನ್ನ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಸರಣಿ 1-1ರಲ್ಲಿ ಸಮಬಲವಾಗಿತ್ತು. ಹೀಗಿರುವಾಗ ಇಲ್ಲಿಯೂ ಪಾಕಿಸ್ತಾನದ ಮೇಲೆ ಭಾರತವೇ ಮೇಲುಗೈ ಸಾಧಿಸಿದಂತಿದೆ ಕಾಣಿಸುತ್ತಿದೆ.
ಶ್ರೀಲಂಕಾ ಆತಿಥ್ಯ
2024ರ ಮಹಿಳಾ ಏಷ್ಯಾಕಪ್‌ನ ಆತಿಥ್ಯ ಶ್ರೀಲಂಕಾ ಕೈಯಲ್ಲಿದೆ. ಶ್ರೀಲಂಕಾ ಕ್ರಿಕೆಟ್ ಮೆಗಾ ಟೂರ್ನಿಗಾಗಿ ದೊಡ್ಡ ಘೋಷಣೆ ಮಾಡಿದೆ. ಎಲ್ಲಾ ಪಂದ್ಯಗಳನ್ನು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳಿಗೆ ಅಧಿಕೃತವಾಗಿ ಶುಭ ಸುದ್ದಿ ನೀಡಲಾಗಿದೆ. ಇಷ್ಟೇ ಅಲ್ಲ, ಅಭಿಮಾನಿಗಳು ಕ್ರೀಡಾಂಗಣಕ್ಕೆ ಹೋಗಿ ಉಚಿತವಾಗಿ ಪಂದ್ಯವನ್ನು ಆನಂದಿಸಬಹುದಾಗಿದೆ.
ಟೂರ್ನಿಯಲ್ಲಿ 8 ತಂಡಗಳು ಭಾಗಿ
ಮಹಿಳೆಯರ ಏಷ್ಯಾಕಪ್‌ನಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ತಲಾ ನಾಲ್ಕು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಟೀಮ್ ಇಂಡಿಯಾ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ.
ಭಾರತವಲ್ಲದೆ, ಪಾಕಿಸ್ತಾನ, ಯುಎಇ ಮತ್ತು ನೇಪಾಳ ತಂಡಗಳು ಈ ಗುಂಪಿನಲ್ಲಿ ಸೇರಿವೆ. 'ಬಿ' ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ ಮತ್ತು ಥಾಯ್ಲೆಂಡ್ ತಂಡಗಳಿವೆ. ಇಡೀ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications