ಮಂಕಡಿಂಗ್ ವಿವಾದಕ್ಕೆ ಆರ್ ಅಶ್ವಿನ್ ಸೂಪರ್ ಸಲಹೆ: ಫ್ರೀಹಿಟ್ ರೀತಿಯಲ್ಲೇ ಫ್ರೀ ಬಾಲ್!

ಟೀಮ್ ಇಂಡಿಯಾದ ಹಿರಿಯ ಆಟಗಾರ ಆರ್ ಅಶ್ವಿನ್ ಐಪಿಎಲ್‌ನಲ್ಲಿ ಮಂಕಡಿಂಗ್ ಮೂಲಕ ಔಟ್ ಮಾಡಿ ಸಾಕಷ್ಟು ಸುದ್ಧಿಯಾಗಿದ್ದರು. ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿರುವ ಆರ್ ಅಶ್ವಿನ್‌ಗೆ ಕಳೆದ ವಾರ ಡೆಲ್ಲಿ ತಂಡದ ಕೋಚ್ ರಿಕಿ ಪಾಂಟಿಂಗ್ ತನ್ನ ಉಪಸ್ಥಿತಿಯಲ್ಲಿ ಮಂಕಡಿಂಗ್‌ಗೆ ಅವಕಾಶವಿಲ್ಲ ಎಂದು ಬಹಿರಂಗವಾಗಿ ಹೇಳಿಕೆಯನ್ನು ನೀಡಿದ ನಂತರ ವಿಚಾರ ಮತ್ತೊಮ್ಮೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಈ ಚರ್ಚೆಗೆ ಸ್ವತಃ ಆರ್ ಅಶ್ವಿನ್ ಮತ್ತೊಂದು ಪ್ರಆಯಾಮವನ್ನು ನೀಡಿದ್ದಾರೆ. ಬೌಲರ್‌ಗಳ ದೃಷ್ಠಿಕೋನದಿಂದ ಆಟದಲ್ಲಿ ಒಂದು ಬದಲಾವಣೆ ಆಗಬೇಕು ಎಂದು ಅವರು ಹೇಳಿಕೊಂಡಿದ್ದಾರೆ. ಬೌಲರ್ ಬೌಲಿಂಗ್ ಮಾಡುವ ಮುನ್ನವೇ ನಾನ್‌ಸ್ಟ್ರೈಕ್ ಬ್ಯಾಟ್ಸ್‌ಮನ್ ಕೀಸ್ ಬಿಟ್ಟು ಮುಂದೆ ಓಡಿದಾಗ ಅದಕ್ಕೆ ಬ್ಯಾಟ್ಸ್‌ಮನ್ ತಂಡಕ್ಕೆ ಪೆನಾಲ್ಟಿಯನ್ನು ನೀಡಬೇಕು. ಅದರ ಇದು ಬೌಲರ್‌ಗಳಿಗೆ ಪೂರವವಾಗಿರಲಿದೆ ಎಂಬುದು ಆರ್ ಅಶ್ವಿನ್ ಅವರ ವಾದವಾಗಿದೆ.
ಹಾಗಾದರೆ ಆರ್ ಅಶ್ವಿನ್ ಈ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಯಾವ ರೀತಿಯಾಗಿ ವ್ಯಕ್ತಡಿಸಿದ್ದಾರೆ. ಅವರು ಹೇಳಿರುವ ವಿಚಾರವೇನಿ ಎಂಬುದನ್ನು ಮುಂದೆ ಓದಿ..

ಮಂಕಡಿಂಗ್‌ಗೆ ದಿನೇಶ್ ಕಾರ್ತಿಕ್ ಬೆಂಬಲ
ಮಂಕಡಿಂಗ್ ಬಗ್ಗೆ ನಡೆಯುತ್ತಿರುವ ಚರ್ಚೆಗೆ ದಿನೇಶ್ ಕಾರ್ತಿಕ್ ಬೆಂಬಲವನ್ನು ವ್ಯಕ್ತಪಡಿಸಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ದಿನೇಶ್ ಕಾರ್ತಿಕ್ "ಡಾನ್ ಬ್ರಾಡ್ಮನ್‌ರಿಂದ ಹಿಡಿದು ಸುನಿಲ್ ಗವಾಸ್ಕರ್‌ವರೆಗೆ ಪ್ರತಿಯೊಬ್ಬರು ಇದು ನಿಯಮದೊಳಗೆ ಬರುತ್ತದೆ ಎಂದಿದ್ದಾರೆ. ಐಸಿಸಿ ಹಾಗೂ ಎಂಸಿಸಿ ಕೂಡ ಈ ಬಗ್ಗೆ ಒಪ್ಪಿಗೆಯ ನಿಲುವನ್ನು ತೆಗೆದುಕೊಂಡಿದೆ. ಆದರೆ ಇದನ್ನು ಎಲ್ಲಾ ತಂಡಗಳು ನಕಾರಾತ್ಮಕವಾಗಿ ಯಾಕೆ ನೋಡುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ದಿನೇಶ್ ಕಾರ್ತಿಕ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಅಭಿಪ್ರಾಯವನ್ನು ಕೇಳಿದ್ದ ದಿನೇಶ್ ಕಾರ್ತಿಕ್
ಇಷ್ಟು ಮಾತ್ರವಲ್ಲದೆ, ದಿನೇಶ್ ಕಾರ್ತಿಕ್ ತಮ್ಮ ಹೇಳಿಕೆಯ ಬಗ್ಗೆ ಒಂದಷ್ಟು ತಜ್ಞರ ಅಭಿಪ್ರಾಯವನ್ನೂ ಟ್ವಟ್ಟರ್‌ನಲ್ಲೇ ಕೇಳಿದ್ದಾರೆ. ಈ ಅಭಿಪ್ರಾಯಕ್ಕೆ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯೆಯನ್ನು ನೀಡುತ್ತಾ ತಮ್ಮ ಸಲಹೆಯನ್ನು ಮುಂದಿಟ್ಟಿದ್ದಾರೆ. ಫ್ರೀ ಬಾಲ್ ಅವಕಾಶ ಬೌಲರ್‌ಗೆ ಸಿಗಲಿ ಎಂದಿದ್ದಾರೆ.

ಅಶ್ವಿನ್ ಹೇಳಿದ "ಫ್ರೀ ಬಾಲ್"
ತಮ್ಮ ಟ್ವೀಟ್‌ನಲ್ಲಿ ಆರ್ ಅಶ್ವಿನ್ "ಮಂಕಡಿಂಗ್‌ಅನ್ನು ಬೌಲರ್‌ಗೆ ಫ್ರೀ ಎಸೆತದಂತೆ ಮಾಡಿ. ಆ ಚೆಂಡಿನಿಂದ ಬ್ಯಾಟ್ಸ್‌ಮನ್ ಔಟಾಗಿ ಹೊರ ಬಂದರೆ ಐದು ರನ್‌ಗಳ ಕಡಿತವಾಗಲಿ. ಫ್ರೀ ಹಿಟ್ ಬ್ಯಾಟ್ಸ್‌ಮನ್‌ಗಳಿಗೆ ಪೂರಕವಾಗಿದೆ. ಹಾಗೆಯೇ ಬೌಲರ್‌ಗಳಿಗೂ ಅವಕಾಶ ಸಿಗಲಿ. ಈಗ ಎಲ್ಲರೂ ಬೌಲರ್‌ಗಳು ಹೊಡೆತವನ್ನು ಸಿನ್ನುತ್ತಾರೆ ಎಂಬ ಆಶಯದೊಂದಿಗೇ ಪಂದ್ಯವನ್ನು ನೋಡುತ್ತಾರೆ" ಎಂದು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ.

ಕಳೆದ ಆವೃತ್ತಿಯಲ್ಲಿ ಮಂಕಡಿಂಗ್ ಬಗ್ಗೆ ದೊಡ್ಡ ಚರ್ಚೆ
ಆರ್ ಅಶ್ವಿನ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ಭಾಗವಾಗಿದ್ದರು. ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರನ್ನು ಆರ್ ಅಶ್ವಿನ್ ಮಂಕಡಿಂಗ್ ಮೂಲಕ ವಿಕೆಟ್ ಪಡೆದಿದ್ದರು. ಬಳಿಕ ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಕೆಲವರು ಇದು ಕ್ರೀಡಾಸ್ಪೂರ್ತಿಯಿಲ್ಲದ ವಿಧಾನ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ನಿಯಮದ ಪ್ರಕಾರ ಅಶ್ವಿನ್ ಮಾಡಿದ್ದು ಸರಿಯಾಗಿಯೇ ಇದೆ ಎಂದು ವಾದಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications