ಹ್ಯೂಸ್ ಸಾವಿಗೆ ಕಂಬಿನಿ ಮಿಡಿದ ಟ್ವೀಟ್ ಲೋಕ
ಬೆಂಗಳೂರು, ನ.27: ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ಆಟಗಾರ ಫಿಲ್ ಹ್ಯೂಸ್ ದುರಂತ ಸಾವಿಗೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ. ಬೌನ್ಸರ್ ದಾಳಿ ತುತ್ತಾಗಿ ಆಸ್ಪತ್ರೆ ಸೇರಿದ್ದ ಹ್ಯೂಸ್ ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಕ್ರಿಕೆಟರ್ ಗಳು, ಅಭಿಮಾನಿಗಳು ಹ್ಯೂಸ್ ಅಕಾಲಿಕ ಸಾವಿಗೆ ಕಂಬನಿ ಮಿಡಿದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.
ನವೆಂಬರ್ 30 ರಂದು 26ನೇ ವಸಂತಕ್ಕೆ ಕಾಲಿರಿಸುತ್ತಿದ್ದರು. ಡಿ.4ರಿಂದ ನಡೆಯುವ ಟೆಸ್ಟ್ ಸರಣಿಗೆ ಆರಂಭಿಕ ಆಟಗಾರನಾಗಿ ಹ್ಯೂಸ್ ಅವರನ್ನು ಆಡಿಸಲು ನಾಯಕ ಮೈಕಲ್ ಕ್ಲಾರ್ಕ್ ನಿರ್ಧರಿಸಿದ್ದರು. ಅದರೆ, ವಿಧಿಯಾಟ ಬೇರೆಯಾಗಿತ್ತು.[ಕ್ರಿಕೆಟರ್ ಫಿಲ್ ಹ್ಯೂಸ್ ದುರಂತ ಸಾವು]
ಮಂಗಳವಾರ(ನ.25) ಸೀನ್ ಅಬಾಟ್ ಎಸೆತ ಚೆಂಡು ಹ್ಯೂಸ್ ತಲೆಗೆ ಬಡಿದು ಮರಣಶಯ್ಯೆಗೆ ಕೊಂಡೊಯ್ದಿತ್ತು. ಬುಧವಾರ ಸಿಡ್ನಿಯ ಸೈಂಟ್ ವಿನ್ಸೆಂಟ್ ಆಸ್ಪತ್ರೆಯಲ್ಲಿ ಸರ್ಜರಿ ಮಾಡಲಾಯಿತು. ಅದರೆ, ಹ್ಯೂಸ್ ಗೆ ಪ್ರಜ್ಞೆ ಮರಳಲೇ ಇಲ್ಲ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಷೆಫಿಲ್ಡ್ ಶೀಲ್ಡ್ ಪಂದ್ಯವೇ ಅವರ ಕೊನೆ ಪಂದ್ಯವಾಗಿಬಿಟ್ಟಿತು ಎಂದು ಆಸ್ಟ್ರೇಲಿಯಾ ಟೀಂ ಡಾಕ್ಟರ್ ಪೀಟರ್ ಬ್ರಂಕ್ನರ್ ಹೇಳಿದ್ದಾರೆ.
ವಿವಿಧ ಕ್ರಿಕೆಟ್ ಸಂಸ್ಥೆಗಳು, ಹಾಲಿ, ಮಾಜಿ ಆಟಗಾರರು, ಅಭಿಮಾನಿಗಳು ಹ್ಯೂಸ್ ನಿಧನಕ್ಕೆ ಸಲ್ಲಿಸಿರುವ ಅಂತಿಮ ನಮನ ಹಾಗೂ ಸಂತಾಪ ಸೂಚಕ ಟ್ವೀಟ್ ಸಂಗ್ರಹ ಇಲ್ಲಿದೆ...

ಸಂತಾಪ ಸೂಚಕ ಟ್ವೀಟ್ ಸಂಗ್ರಹ ಇಲ್ಲಿದೆ
'25 ವರ್ಷ ವಯಸ್ಸಿನ ಎಡಗೈ ಆಟಗಾರ ಫಿಲ್ ಹ್ಯೂಸ್ ಅವರು ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ' ಎಂದು ಕ್ರಿಕೆಟ್ ಆಸ್ಟ್ರೇಲಿಯಾ(CA) ಟ್ವೀಟ್ ಮಾಡಿ ಅಧಿಕೃತ ಹೇಳಿಕೆ ಹೊರಡಿಸಿದೆ. ಗುರುವಾರ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ವಿವರಣೆ ನೀಡಲಿದೆ.
ಟೀಂ ಇಂಡಿಯಾ ನಾಯಕ ಕೊಹ್ಲಿ ಸಂದೇಶ
ಟೀಂ ಇಂಡಿಯಾ ನಾಯಕ ಕೊಹ್ಲಿ ಅವರು ಸಾವಿನ ಸುದ್ದಿಗೆ ಪ್ರತಿಕ್ರಿಯಿಸಿ ಸಂದೇಶ ಕಳಿಸಿದ್ದಾರೆ.
ಎಡಗೈ ಆಟಗಾರ ಸುರೇಶ್ ರೈನಾ ಟ್ವೀಟ್
ಟೀಂ ಇಂಡಿಯಾದ ಎಡಗೈ ಆಟಗಾರ ಸುರೇಶ್ ರೈನಾ ಟ್ವೀಟ್ ಮಾಡಿ ವಿಶ್ವ ಕ್ರಿಕೆಟ್ ನ ದುರಂತದ ದಿನ ಎಂದಿದ್ದಾರೆ.
ಮಾಜಿ ನಾಯಕ ಆನಿಲ್ ಕುಂಬ್ಳೆ ಸಂತಾಪ
ಮಾಜಿ ನಾಯಕ ಆನಿಲ್ ಕುಂಬ್ಳೆ ಅವರು ಹ್ಯೂಸ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಮುಂಬೈ ಇಂಡಿಯನ್ ತಂಡದಲ್ಲಿದ್ದಾಗ ಅತನನ್ನು ಹತ್ತಿರದಿಂದ ಕಂಡಿದ್ದೆ. ಪ್ರತಿಭಾವಂತ ಕ್ರಿಕೆಟರ್, ಆತನ ಸಾವು ಕ್ರಿಕೆಟ್ ಲೋಕಕ್ಕೆ ಶೋಕದ ದಿನ ಎಂದಿದ್ದಾರೆ.
ಶಿಶಿರ್ ಹಟ್ಟಂಗಡಿಯವರಿಂದ ಸಂತಾಪ ಸಂದೇಶ
ಫಿಲ್ ಹ್ಯೂಸ್ ನಮಗೆ ಅಷ್ಟು ಪರಿಚಿತನಲ್ಲ. ಅದರೆ, ಈ ರೀತಿ ದುರಂತ ಸಾವಿಗೆ ಕಂಬನಿ ಮಿಡಿಯದೆ ಇರಲು ಸಾಧ್ಯವಿಲ್ಲ, ಕ್ರಿಕೆಟ್ ನಮಗೆ ನಲಿವಿನ ಜೊತೆಗೆ ನೋವನ್ನು ನೀಡಿದೆ ಎಂದು ಶಿಶಿರ್ ಹಟ್ಟಂಗಡಿಯವರಿಂದ ಸಂತಾಪ ಸಂದೇಶ
ಆಲ್ ರೌಂಡರ್ ಶಾನ್ ಪೊಲ್ಲಾಕ್
ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಶಾನ್ ಪೊಲ್ಲಾಕ್ ಅವರು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಬೌಲರ್ ಸೀನ್ ಅಬಾಟ್ ಅವರಿಗೂ ಧೈರ್ಯ ಹೇಳಿದ್ದಾರೆ.
ಜಯವರ್ಧನೆ ಅವರಿಂದ ಸಂತಾಪ ಸಂದೇಶ
ಶ್ರೀಲಂಕಾದ ಆಟಗಾರ ಮಹೇಲ ಜಯವರ್ಧನೆ ಅವರಿಂದ ಸಂತಾಪ ಸಂದೇಶ.
ಮಾಜಿ ವೇಗಿ ಗೆನ್ ಮೆಗ್ರಾಥ್ ಟ್ವೀಟ್
ಆಸ್ಟ್ರೇಲಿಯಾದ ಮಾಜಿ ವೇಗಿ ಗೆನ್ ಮೆಗ್ರಾಥ್ ಟ್ವೀಟ್ ಮಾಡಿ ಶೋಕ ಸಂದೇಶ ಹಾಕಿದ್ದಾರೆ.
ವಿಕೆಟ್ ಕೀಪರ್ ಗಿಲ್ ಕ್ರಿಸ್ಟ್ ಶಾಕ್
ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಗಿಲ್ ಕ್ರಿಸ್ಟ್ ಶಾಕ್ ವ್ಯಕ್ತಪಡಿಸಿದ್ದಾರೆ.
ಮಾಜಿ ಕ್ರಿಕೆಟರ್ ಇಯಾನ್ ಬೋಥಂ
ಮಾಜಿ ಕ್ರಿಕೆಟರ್, ಇಂಗ್ಲೆಂಡಿನ ಆಲ್ ರೌಂಡರ್ ಇಯಾನ್ ಬೋಥಂ ಅವರ ಸಂದೇಶ
ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ಹೇಡನ್
ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ಹೇಡನ್ ಟ್ವೀಟ್ ಮಾಡಿದ್ದು ಹೀಗೆ
ದಕ್ಷಿಣ ಆಫ್ರಿಕಾದ ಆಟಗಾರ ಎಬಿಡಿ ಟ್ವೀಟ್
ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಿಲೆಯರ್ಸ್ ಟ್ವೀಟ್ ಮಾಡಿ ಹೃದಯವಿದ್ರಾವಕಸುದ್ದಿ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications