ರಹಾನೆ ಹೊರಗಿಟ್ಟ ಧೋನಿ, ಜಡೇಜ ಬೆನ್ನು ತಟ್ಟಿದ್ರು
ಢಾಕಾ, ಜೂ.22: ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ ಸತತ ಎರಡು ಏಕದಿನ ಪಂದ್ಯಗಳಲ್ಲಿ ಹೀನಾಯವಾಗಿ ಸೋಲಲು ಏನು ಕಾರಣ ಎಂಬುದನ್ನು ಟೀಂ ಮ್ಯಾನೇಜ್ಮೆಂಟ್ ಇನ್ನೂ ಹುಡುಕುತ್ತಿದೆ. ಈ ನಡುವೆ ಧೋನಿ ನಾಯಕತ್ವದಿಂದ ಕೆಳಗಿಳಿಯುವ ಮಾತನ್ನಾಡಿದ್ದಾರೆ. ಜೊತೆಗೆ ಮತ್ತೊಂದು ವಿವಾದವೂ ಬೆನ್ನು ಹತ್ತಿದೆ.
ಎರಡನೇ ಏಕದಿನ ಪಂದ್ಯದ ಟಾಸ್ ಸಮಯಕ್ಕೆ ಎಂಎಸ್ ಧೋನಿ ಎಲ್ಲರಿಗೂ ಶಾಕ್ ನೀಡಿದ್ದರು. ಉತ್ತಮ ಲಯದಲ್ಲಿರುವ ಅಜಿಂಕ್ಯ ರಹಾನೆ ಅವರನ್ನು ಆಡುವ XI ನಿಂದ ಕೈಬಿಡಲಾಗಿತ್ತು. []
ರಹಾನೆ, ಮೋಹಿತ್ ಶರ್ಮ, ಉಮೇಶ್ ಯಾದವ್ ಬದಲಿಗೆ ಅಂಬಟಿ ರಾಯುಡು, ಅಕ್ಷರ್ ಪಟೇಲ್ ಹಾಗೂ ಧವಳ್ ಕುಲಕರ್ಣಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. [ಧೋನಿಯಿಂದ 'ಪದತ್ಯಾಗ'ದ ಬೆದರಿಕೆ]
ಮೊದಲ ಪಂದ್ಯವನ್ನು 79ರನ್ ಗಳಿಂದ ಸೋತ್ತಿದ್ದ ಭಾರತ, ಎರಡನೇ ಪಂದ್ಯವನ್ನು 6 ವಿಕೆಟ್ ಗಳಿಂದ ಸೋತು ಏಕದಿನ ಸರಣಿಯನ್ನು ಕಳೆದುಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಮೊದಲ ಪಂದ್ಯದಲ್ಲಿ ಮೋಹಿತ್ ಹಾಗೂ ಉಮೇಶ್ ದುಬಾರಿ ಎನಿಸಿದ್ದರಿಂದ ಅವರನ್ನು ಕೈಬಿಟ್ಟಿರಬಹುದು ಎಂಬ ಸಮರ್ಥನೆ ಸಿಗುತ್ತದೆ. [ಹಳದಿ ಕಪ್ಪು ಮಿಂಚಿನ ಹೊಡೆತಕ್ಕೆ ಭಾರತ ಬಲಿ]
ಅದರೆ, ಆಜಿಂಕ್ಯ ರಹಾನೆ ಅವರನ್ನು ಕಡೆಗಣಿಸಿದ್ದೇಕೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಇದಕ್ಕೆ ಸಮರ್ಥನೆ ನೀಡಿರುವ ಧೋನಿ, ಜಡೇಜ ಉತ್ತಮ ಆಲ್ ರೌಂಡರ್ ಎಂದಿದ್ದಾರೆ. ರಹಾನೆ ಬದಲಿಗೆ ರಾಯುಡುಗೆ ಏಕೆ ಸ್ಥಾನ ಸಿಕ್ಕಿತು ಎಂಬುದಕ್ಕೆ ಉತ್ತರ ಸಿಕ್ಕಿಲ್ಲ...

ರಹಾನೆ, ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ
ಮೊದಲ ಪಂದ್ಯದಲ್ಲಿ ರಹಾನೆ 9 ರನ್ ಗಳಿಸಿ ಔಟ್ ಆಗಿದ್ದರು. ಅದರೆ, 55 ಏಕದಿನ ಪಂದ್ಯವಾಡಿರುವ ರಹಾನೆ 1,593 ರನ್ (2 ಶತಕ, 9 ಅರ್ಧಶತಕ) ಗಳಿಸಿದ್ದು, ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಜಡೇಜ ಆಯ್ಕೆ ಸಮರ್ಥಿಸಿಕೊಂಡ ಧೋನಿ
ಜಡೇಜ ಆಯ್ಕೆ ಸಮರ್ಥಿಸಿಕೊಂಡ ಧೋನಿ, ಆತ ಆಲ್ ರೌಂಡರ್, 7ನೇ ಸ್ಥಾನದಲ್ಲಿ ಆಡುವುದಲ್ಲದೆ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡುತ್ತಾರೆ ಎಂದಿದ್ದಾರೆ. ಅದರೆ, ಮೊದಲ ಪಂದ್ಯದಲ್ಲಿ ಜಡೇಜ 19 ರನ್ ಮಾತ್ರ ಗಳಿಸಿದ್ದಲ್ಲದೆ 7 ಓವರ್ ಗಳಲ್ಲಿ ವಿಕೆಟ್ ಕೀಳಲಿಲ್ಲ.
ಡ್ರೆಸಿಂಗ್ ರೂಮಿನಲ್ಲಿ ಎಲ್ಲವೂ ಸರಿಯಿಲ್ಲ
ಡ್ರೆಸಿಂಗ್ ರೂಮಿನಲ್ಲಿ ಎಲ್ಲವೂ ಸರಿಯಿಲ್ಲ, ಜಡೇಜ ಆಯ್ಕೆ ಮಾಡಿದ್ದು ಏಕೆ?
ಧೋನಿಯಿಂದ ಮೂರ್ಖತನದ ಆಯ್ಕೆ
ರಹಾನೆ ತಂಡದಿಂದ ಕೈಬಿಡಲು ಯಾರ ಒತ್ತಡವಿದೆಯೋ ಕಾಣೆ. ಇದಂತೂ ಮೂರ್ಖತನದ ನಿರ್ಣಯ.
2015ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರಹಾನೆ
2015ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರಹಾನೆ ಆಯ್ಕೆ ಆಗಿಲ್ಲ ಎಂಬುದು ಆಶ್ಚರ್ಯಕರ.
ಧೋನಿ ಅಥವಾ ಕೊಹ್ಲಿ ಚಮಚಾ ಅಲ್ಲ
ಧೋನಿ ಅಥವಾ ಕೊಹ್ಲಿ ಚಮಚಾ ಅಲ್ಲ, ಸಿಎಸ್ ಕೆ ಪರ ಆಡಿಲ್ಲ ಅದಕ್ಕೆ ರಹಾನೆ ಕೈಬಿಡಲಾಗಿದೆ.
ಧೋನಿಯಿಂದ 3 ಬದಲಾವಣೆ ನಿರೀಕ್ಷಿಸಿರಲಿಲ್ಲ
ಧೋನಿಯಿಂದ 3 ಬದಲಾವಣೆ ನಿರೀಕ್ಷಿಸಿರಲಿಲ್ಲ ಎಂದ ಮಂಜ್ರೇಕರ್
ರಹಾನೆ ಬೆಂಚ್ ನಲ್ಲಿ ಕೂರಿಸುವುದೇ?
ರಹಾನೆ ಬೆಂಚ್ ನಲ್ಲಿ ಕೂರಿಸುವುದೇ? ನನ್ನಿಂದ ನಂಬಲಾಗುತ್ತಿಲ್ಲ ಎಂದ ಆಕಾಶ್ ಛೋಪ್ರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications