ಸೆಮೀಸ್ ತಲುಪಿದ ಎಬಿಡಿ ತಂಡಕ್ಕೆ ಟ್ವೀಟ್ ಹೊಗಳಿಕೆ
ಸಿಡ್ನಿ, ಮಾ.18: ವಿಶ್ವಕಪ್ ಟೂರ್ನಿಯ ಮಾಜಿ ಚಾಂಪಿಯನ್ ಏಷ್ಯಾ ಸಿಂಹಗಳೆನಿಸಿರುವ ಶ್ರೀಲಂಕಾ ತಂಡವನ್ನು 133 ರನ್ ಗಳ ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ ದಕ್ಷಿಣ ಆಫ್ರಿಕಾ ತಂಡ ಸುಲಭ ಜಯ ದಾಖಲಿಸಿದೆ. ಎಬಿ ಡಿವಿಲೆಯರ್ಸ್ ಪಡೆ 18 ಓವರ್ ಗಳಲ್ಲಿ ಗುರಿ ತಲುಪಿ 9 ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ.
ನಾಕೌಟ್ ಹಂತ ಸುಲಭವಾಗಿ ದಾಟಿದ ಎಬಿ ಡಿ ವಿಲೆಯರ್ಸ್ ತಂಡದ ಸಾಧನೆಗೆ ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು ಪ್ರಶಂಸೆಯ ಸುರಿಮಳೆಗೆರೆದಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾಭಿಮಾನಿಗಳು, ಕ್ರಿಕೆಟರ್ಸ್ ಗಳು ದಕ್ಷಿಣ ಆಫ್ರಿಕಾಕ್ಕೆ ಬಹುಪರಾಕ್ ಹೇಳಿ, ಇನ್ನಾದರೂ ಚೋಕರ್ಸ್ ಎಂಬ ಹಣೆಪಟ್ಟಿ ಕಳಚಲಿ ಎಂದು ಹಾರೈಸಿದ್ದಾರೆ. [ಶ್ರೀಲಂಕಾ ಮಣಿಸಿ ಸೆಮಿಫೈನಲ್ ತಲುಪಿದ ದಕ್ಷಿಣ ಆಫ್ರಿಕಾ]
ಟೂರ್ನಿಯ ಲೀಗ್ ಪಂದ್ಯದುದ್ದಕ್ಕೂ ಕಳಪೆ ಪ್ರದರ್ಶನ ನೀಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಡಿ ಕಾಕ್ ಅಮೋಘ ಬ್ಯಾಟಿಂಗ್ 57 ಎಸೆತಗಳಲ್ಲಿ 78ರನ್ ಚೆಚ್ಚಿದ್ದು ಹಾಗೂ ಮೊದಲ ಬಾರಿಗೆ ವೇಗಿಗಳ ಬದಲಿಗೆ ಸ್ಪಿನ್ನರ್ ಗಳು ವಿಜೃಂಭಿಸಿದ್ದು (ಪಂದ್ಯ ಶ್ರೇಷ್ಠ ಇಮ್ರಾನ್ ತಾಹೀರ್ 4 ಹಾಗೂ ಡುಮಿನಿ 3) ಈ ಪಂದ್ಯದ ಮುಖ್ಯಾಂಶವಾಗಿತ್ತು. ಜೊತೆಗೆ ಕುಮಾರ್ ಸಂಗಕ್ಕಾರ ಅವರ ಕೊನೆಯ ವಿಶ್ವಕಪ್ ಹಾಗೂ ಏಕದಿನ ಅಂತಾರಾಷ್ಟ್ರೀಯ ಪಂದ್ಯವೂ ಹೌದು
ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಂದಿರುವ ಶುಭ ಹಾರೈಕೆ ಸಂದೇಶಗಳ ಸಂಗ್ರಹ ಇಲ್ಲಿದೆ ನೋಡಿ:

ಲಂಕಾಕ್ಕೆ ತಿರುಮಂತ್ರ ಹಾಕಿದ ಆಫ್ರಿಕಾದ ಸ್ಪಿನ್ನರ್ಸ್
* ಸ್ಪಿನ್ನರ್ ಇಮ್ರಾನ್ ತಾಹೀರ್ ಅದ್ಭುತ ಬೌಲಿಂಗ್ 8.2-0-26-4
* ಜೆಪಿ ಡುಮಿನಿ 9-1-29-3 ಉತ್ತಮ ಬೌಲಿಂಗ್
* ಸ್ಟೇನ್, ಅಬಾಟ್, ಮಾರ್ಕೆಲ್ ಗೆ ತಲಾ 1 ವಿಕೆಟ್

ದಕ್ಷಿಣ ಆಫ್ರಿಕಾದ ನಾಕೌಟ್ ಈ ಮುಂಚಿನ ಸಾಧನೆ
1992 - ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು
1996 - ಕ್ವಾರ್ಟರ್ ಫೈನಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು
1999 - ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಟೈ(ಸೂಪರ್ ಸಿಕ್ಸ್ ನಲ್ಲಿ ಸೋಲು ಕಂಡಿದ್ದರಿಂದ ಟೂರ್ನಿಯಿಂದ ಔಟ್)
2007 - ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು
2011 - ಕ್ವಾರ್ಟರ್ ಫೈನಲಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು
ಮಾಜಿ ಕ್ರಿಕೆಟರ್ ಮಹಮ್ಮದ್ ಕೈಫ್
ಮಾಜಿ ಕ್ರಿಕೆಟರ್ ಮಹಮ್ಮದ್ ಕೈಫ್ ರಿಂದ ದಕ್ಷಿಣ ಆಫ್ರಿಕಾಕ್ಕೆ ಹೊಗಳಿಕೆ
ಕುಮಾರ್ ಮಹೇಲ ನೆನದ ಅಭಿಮಾನಿಗಳು
ದಕ್ಷಿಣ ಆಫ್ರಿಕಾ ಗೆಲುವಿನ ಜೊತೆಗೆ ಕುಮಾರ್ ಸಂಗಕ್ಕಾರ, ಮಹೇಲ ಜಯವರ್ದನೆ ವಿದಾಯವನ್ನು ನೆನದ ಅಭಿಮಾನಿಗಳು.
ನಟ ಬೋಮನ್ ಇರಾನಿ ಅವರ ಟ್ವೀಟ್
ನಟ ಬೋಮನ್ ಇರಾನಿ ಅವರು ಟ್ವೀಟ್ ಮಾಡಿ ಕ್ರಿಕೆಟರ್ಸ್ ಗಳ ನಡವಳಿಕೆಯನ್ನು ಪ್ರಶಂಸೆ ಮಾಡಿದ್ದಾರೆ.
ನನಗೇನೋ ಅಚ್ಚರಿ ಏನಿಸುತ್ತಿದೆ
ನನಗೇನೋ ಅಚ್ಚರಿ ಏನಿಸುತ್ತಿದೆ 17 ರನ್ 34 ಚೆಂಡು ಬೇಕಿದೆ ಎಂಬ ಸ್ಕೋರ್ ನಿಜವೇ!
ಮಳೆ ಬಂದಿದ್ದರೆ ದಕ್ಷಿಣ ಆಫ್ರಿಕಾದವರನ್ನು ನೋಡ್ಬೇಕಿತ್ತು
ಮಳೆ ಬಂದಿದ್ದರೆ ದಕ್ಷಿಣ ಆಫ್ರಿಕಾದವರನ್ನು ನೋಡ್ಬೇಕಿತ್ತು
ಮಹೇಲ ವೀ ಮಿಸ್ ಯೂ ಎಂದ ಫ್ಯಾನ್ಸ್
ಕುಮಾರ್ ಹಾಗೂ ಮಹೇಲ ವೀ ಮಿಸ್ ಯೂ ಎಂದ ಫ್ಯಾನ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications