'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ 34, ಅಭಿಮಾನಿಗಳಿಂದ ಟ್ವೀಟ್ಸ್
ರಾಂಚಿ, ಜುಲೈ 07: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರಿಗೆ ಜುಲೈ 7ರಂದು 34ನೇ ಹುಟ್ಟುಹಬ್ಬದ ಸಂಭ್ರಮ. ಸಾಮಾಜಿಕ ಜಾಲ ತಾಣಗಳಲ್ಲಿ ಧೋನಿ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹೆಮ್ಮೆಯಿಂದ ಆಚರಿಸುತ್ತಿದ್ದಾರೆ. Happy Birthday Dhoni ಎಂಬ ಟ್ಯಾಗ್ ಕಳೆದ ರಾತ್ರಿ 12 ಗಂಟೆ ನಂತರದಿಂದ ಚಾಲ್ತಿಯಲ್ಲಿದೆ.
ಎಂಎಸ್ ಧೋನಿ ಅವರ 34ನೇ ಹುಟ್ಟುಹಬ್ಬಕ್ಕೆ ಒಂದು ವಾರ ಮುಂಚಿತವಾಗಿ ಅಭಿಮಾನಿಗಳು ಧೋನಿಗೆ ಬಹು ಪರಾಕ್ ಎಂದು ಹೇಳಲು ಶುರು ಮಾಡಿದ್ದು ನಿಮಗೆ ನೆನಪಿರಬಹುದು. ಕಳೆದವಾರವೇ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೆದಿತ್ತು. [ಟ್ವಿಟ್ಟರ್ ನಲ್ಲಿ ಧೋನಿ ಕ್ರೇಜ್]
ಈ ಬಾರಿ ಪತ್ನಿ ಸಾಕ್ಷಿ ಹಾಗೂ ಪುತ್ರಿ ಝೀವಾ ಜೊತೆಯಲ್ಲಿ ಸಂಭ್ರಮದಿಂದ ಕಾಲ ಕಳೆಯಲಿದ್ದಾರೆ. ತನ್ನೂರಿನಲ್ಲಿರುವ ಮನೆ ದೇವತೆ ಮಂದಿರಕ್ಕೆ ತೆರಳು ಯೋಜಿಸಿದ್ದಾರೆ. ಬಾಂಗ್ಲಾ ದೇಶ ಪ್ರವಾಸದ ಕಹಿ ಅನುಭವ ಮರೆತು ಉತ್ಸಾಹದಿಂದ ಧೋನಿ ತಮ್ಮ ಆಪ್ತರೊಂದಿಗೆ ಕಾಲ ಕಳೆಯಲು ಇಚ್ಛಿಸಿದ್ದಾರೆ.
ಜಿಂಬಾಬ್ವೆ ಪ್ರವಾಸಕ್ಕೆ ತೆರಳುವ ಭಾರತ ತಂಡಕ್ಕೆ ಧೋನಿ ಅವರನ್ನು ಆಯ್ಕೆ ಮಾಡದೆ ಬಿಸಿಸಿಐ ಅವರಿಗೆ ವಿಶ್ರಾಂತಿ ನೀಡಿದೆ. ಅಜಿಂಕ್ಯ ರಹಾನೆ ಅವರು ಟೀಂ ಇಂಡಿಯಾವನ್ನು 3 ಏಕದಿನ ಪಂದ್ಯ ಹಾಗೂ 2 ಟಿ20 ಪಂದ್ಯಗಳಲ್ಲಿ ಮುನ್ನಡೆಸಲಿದ್ದಾರೆ. ಒನ್ ಇಂಡಿಯಾ ತಂಡ ಕೂಡಾ ಧೋನಿ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆ.

Happy Birthday Dhoni ಎಂಬ ಟ್ಯಾಗ್
Happy Birthday Dhoni ಎಂಬ ಟ್ಯಾಗ್ ಕಳೆದ ರಾತ್ರಿ 12 ಗಂಟೆ ನಂತರದಿಂದ ಚಾಲ್ತಿಯಲ್ಲಿದೆ.
ಧೋನಿ ಹೊಗಳಲು ಬಳಸುವ ಪದಗಳು
ಧೋನಿ ಹೊಗಳಲು ಬಳಸುವ ಪದಗಳನ್ನು ಪಟ್ಟಿ ಮಾಡಿದ ಅಭಿಮಾನಿಗಳು.
ವಾರಿಯರ್ ಧೋನಿಗೆ ಬಹುಪರಾಕ್
ವಾರಿಯರ್ ಧೋನಿಗೆ ಬಹುಪರಾಕ್ ಎಂದು ದಿಗ್ಗಜರು ಹೇಳಿದ್ದು ಹೀಗೆ
ಧೋನಿಯನ್ನು ತೆಗಳುವವರಿಗೆ ಗುದ್ದು
ಧೋನಿಯನ್ನು ತೆಗಳುವವರಿಗೆ ಗುದ್ದು ನೀಡಿದ ಅಭಿಮಾನಿಗಳು
ಕೊನೆ ತನಕ ಎಲ್ಲರನ್ನು ಕಾಯಿಸಬೇಡಿ
ಕೊನೆ ತನಕ ಎಲ್ಲರನ್ನು ಕಾಯಿಸಬೇಡಿ ಬೇಗ ಎಲ್ಲಾ ಕ್ಯಾಂಡಲ್ಸ್ ಊದಿ ಬಿಡಿ.
ಬ್ಯಾಟಿಂಗ್ ಪವರ್ ಪ್ಲೇಗೆ ಇದು ಸಕಾಲ
ಬ್ಯಾಟಿಂಗ್ ಪವರ್ ಪ್ಲೇಗೆ ಇದು ಸಕಾಲ ಮುಂದಿನ 5 ವರ್ಷ ನಿಮ್ಮ ಬ್ಯಾಟಿಂಗ್ ಆಟ ನೋಡೋಣ.
ಹ್ಯಾಪಿ ಬರ್ಥ್ ಡೇ ಧೋನಿ
ಹ್ಯಾಪಿ ಬರ್ಥ್ ಡೇ ಧೋನಿ ಎಂದು ಎಲ್ಲೆಡೆಯಿಂದ ಅಭಿಮಾನಿಗಳಿಂದ ಶುಭ ಹಾರೈಕೆ
ಧೋನಿ ಗೆಲುವಿನ ವಿಕೆಟ್ ಗಳ ಬಗ್ಗೆ ಕಣ್ಣು
ಧೋನಿ ಗೆಲುವಿನ ವಿಕೆಟ್ ಗಳ ಬಗ್ಗೆ ಕಣ್ಣು ಹಾಕಿರುವ ಅಭಿಮಾನಿಗಳು.
ಯುವಪ್ರತಿಭೆಗಳಿಗೆ ನೀವು ಸ್ಪೂರ್ತಿ
ಯುವಪ್ರತಿಭೆಗಳಿಗೆ ನೀವು ಸ್ಪೂರ್ತಿ ಎಂದ ಅಭಿಮಾನಿಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications