ಭಾರತದ ಸೋಲಿಗಿಂತ ಪ್ರೇಕ್ಷಕರ ವರ್ತನೆಗೆ ಕಟು ಟೀಕೆ
ಕಟಕ್, ಅ.06: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅತ್ಯಂತ ಕಳಪೆ ಆಟ ಪ್ರದರ್ಶಿಸಿದ ಟೀಂ ಇಂಡಿಯಾ ಪಂದ್ಯವನ್ನು ಕೈಚೆಲ್ಲಿದ್ದಲ್ಲದೆ, ಸರಣಿಯನ್ನು ಬಿಟ್ಟುಕೊಟ್ಟಿದೆ. ಟೀಂ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರೇಕ್ಷಕರು ವರ್ತಿಸಿದ ರೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮಾಜಿ ಕ್ರಿಕೆಟರ್ಸ್, ಸಾರ್ವಜನಿಕರು ಪ್ರೇಕ್ಷಕರಿಗೆ ಶೇಮ್ ಶೇಮ್ ಎಂದಿದ್ದಾರೆ.
ಮೈದಾನಕ್ಕೆ ಬಾಟಲಿ ಎಸೆದು ಪಂದ್ಯಕ್ಕೆ ಆಗಾಗ ತಡೆ ಒಡ್ಡಿದ ಪ್ರೇಕ್ಷಕರ ವರ್ತನೆಯಿಂದ ಟೀಂ ಇಂಡಿಯಾ ಕೂಡಾ ತಲೆ ತಗ್ಗಿಸುವಂತಾಗಿದೆ. ಸರಣಿ ಸೋಲಿಗಿಂತ ಹೆಚ್ಚಿನ ಅವಮಾನ ಪ್ರೇಕ್ಷಕರ ವರ್ತನೆಯಿಂದ ತಂಡಕ್ಕಾಗಿದೆ.[ಇಂಡಿಯಾದಿಂದ ಕಳಪೆ ಪ್ರದರ್ಶನ, ಕೈ ತಪ್ಪಿದ ಟಿ20 ಸರಣಿ]
ಆಗಾಗ ಸ್ಥಗಿತಗೊಳ್ಳುತ್ತಿದ್ದ ಪಂದ್ಯದಲ್ಲಿ 92ರನ್ ಗಳ ಗುರಿಯನ್ನು 17.1 ಓವರ್ ಗಳಲ್ಲಿ ದಾಟಿ 96/4 ಗಳಿಸಿ 6 ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ಗೆದ್ದುಕೊಂಡಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಕೋಲ್ಕತ್ತಾದಲ್ಲಿ ಅಕ್ಟೋಬರ್ 08 ರಂದು ನಡೆಯಲಿದೆ. [ಸ್ಕೋರ್ ಕಾರ್ಡ್ ನೋಡಿ]
ಪ್ರೇಕ್ಷಕರು ಬಾಟಲಿ ಎಸೆಯುವಾಗ ಅವರತ್ತ ನೋಡಿ ಅವರನ್ನು ನಿಯಂತ್ರಿಸುವುದರ ಬದಲು ಮೈದಾನ ನೋಡಿಕೊಂಡು ಪಂದ್ಯ ವೀಕ್ಷಿಸುತ್ತಿದ್ದ ಪೊಲೀಸರ ಕರ್ತವ್ಯ ಪ್ರಜ್ಞೆ ಬಗ್ಗೆ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ.

ಆಟಗಾರರಿಂದ ಭಾರಿ ಟೀಕೆ
ಯುವರಾಜ್ ಸಿಂಗ್, ವಿವಿಎಸ್ ಲಕ್ಷ್ಮಣ್, ಪ್ರಗ್ನಾನ್ ಓಜಾ ಸೇರಿದಂತೆ ಕ್ರಿಕೆಟರ್ಸ್ ಹಾಗೂ ಕೆಲ ಅಂತಾರಾಷ್ಟ್ರೀಯ ಆಟಗಾರರು, ಸಾರ್ವಜನಿಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರೇಕ್ಷಕರಿಗೆ ನೋವಾಗಿದೆ ನಿಜ.. ಆದರೆ
ಪ್ರೇಕ್ಷಕರಿಗೆ ನೋವಾಗಿದೆ ನಿಜ.. ಆದರೆ ಈ ರೀತಿ ವರ್ತನೆ ಕ್ರಿಕೆಟ್ ಅಭಿಮಾನಿಗಳಿಗೆ ಶೋಭೆ ತರುವುದಿಲ್ಲ ಎಂದ ವಿವಿಎಸ್ ಲಕ್ಷ್ಮಣ್
ಶೇಮ್ ಶೇಮ್ ಎಂದ ಯುವರಾಜ್ ಸಿಂಗ್
ಆಟಗಾರರು ಹಾಗೂ ಕ್ರಿಕೆಟ್ ಆಟಕ್ಕೆ ಮರ್ಯಾದೆ ಕೊಡಿ. ನಿಮ್ಮ ಈ ವರ್ತನೆಯಿಂದ ಯಾವ ರೀತಿ ಲಾಭವೂ ಇಲ್ಲ ಎಂದ ಯುವರಾಜ್ ಸಿಂಗ್
ಆಟದಲ್ಲಿ ಸೋಲು ಗೆಲುವು ಇದ್ದದ್ದೇ
ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ಆಟವನ್ನು ಬೆಂಬಲಿಸಿ, ಭಾರತದ ಪ್ರೇಕ್ಷಕರ ಬಗ್ಗೆ ಭಯ ಹುಟ್ಟುವಂತೆ ಮಾಡಬೇಡಿ.
ಇದು ನಿಮ್ಮ ಕ್ರಿಕೆಟ್ ತಾರೆಗಳಿಗೆ ಅಪಮಾನ
ಇದು ನಿಮ್ಮ ಕ್ರಿಕೆಟ್ ತಾರೆಗಳಿಗೆ ಅಪಮಾನ, ಕಚೇರಿಯಲ್ಲಿ ದಿನ ಸರಿ ಇಲ್ಲ ಎಂದು ಬಾಟಲಿ ಎಸೆಯುತ್ತೀರಾ? ಎಂದು ಪ್ರಶ್ನಿಸಿದ ಅಕಾಶ್ ಛೋಪ್ರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications