Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ಗೆ ಮತ್ತೊಂದು ಹೊಡೆತ: ಪ್ರಾಯೋಜಕತ್ವಕ್ಕೆ ಕಂಪನಿಯೊಂದು ನಕಾರ!

Future group pulls out of IPL 2020 as Sponsor

ಬೆಂಗಳೂರು: ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿರುವ ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಸಮಸ್ಯೆಯ ಮೇಲೆ ಸಮಸ್ಯೆ ಎದುರಾಗುತ್ತಿದೆ. ಆರಂಭದಲ್ಲಿ ಕೊರೊನಾದಿಂದಾಗಿ ಮಾರ್ಚ್‌ನಲ್ಲೇ ನಡೆಯಬೇಕಿದ್ದ ಟೂರ್ನಿ ಮುಂದೂಡಲ್ಪಟ್ಟಿತು. ಆಮೇಲೆ ಕೋವಿಡ್-19 ಭೀತಿಯಿಂದಾಗಿ ಆಕರ್ಷಕ ಟೂರ್ನಿಯನ್ನು ಭಾರತದಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಅನಿರ್ವಾಯವಾಗಿ ಸ್ಥಳಾಂತರಿಸಲಾಯಿತು.

ಐಪಿಎಲ್ ಅನ್ನು ಯುಎಇಯಲ್ಲಿ ನಡೆಸಲು ನಿರ್ಧರಿಸಿದ ಮೇಲೂ ಪ್ರಾಬ್ಲಮ್ಮು ಕೊನೆಯಾಗಲಿಲ್ಲ. ಭಾರತ-ಚೀನಾ ಗಡಿ ಸಂಘರ್ದಿಂದಾಗಿ ಐಪಿಎಲ್‌ಗೆ ಚೀನಾ ಕಂಪನಿ ನೀಡುತ್ತಿದ್ದ ಪ್ರಾಯೋಜಕತ್ವ ಕೊನೆಗೊಳಿಸಬೇಕು ಎಂಬ ಮಾತುಗಳು ಕೇಳಿಬಂತು. ಹೀಗಾಗಿ ಟೈಟಲ್ ಸ್ಪಾನ್ಸರ್‌ಶಿಪ್‌ನಿಂದ ವಿವೋ ಹಿಂದೆ ಸರಿಯಿತು.

ಇಷ್ಟಕ್ಕೇ ಮುಗಿದಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್‌ ಮುಂದೆ ಮತ್ತೊಂದು ಸಮಸ್ಯೆ ಈಗ ಎದುರಾಗಿದೆ.

ಹಿಂದೆ ಸರಿದ ಫ್ಯೂಚರ್ ಗ್ರೂಪ್

ಹಿಂದೆ ಸರಿದ ಫ್ಯೂಚರ್ ಗ್ರೂಪ್

ಪ್ರಾಯೋಜಕತ್ವದಿಂದ ಮೊಬೈಲ್ ಉತ್ಪಾದನಾ ಕಂಪನಿ ವಿವೋ ಹಿಂದೆ ಸರಿದ ಬಳಿಕ ಒಂದಿಷ್ಟು ಕಂಪನಿಗಳು 2020ರ ಐಪಿಎಲ್‌ಗೆ ಪ್ರಾಯೋಜಕತ್ವ ನೀಡಲು ಮುಂದೆ ಬಂದಿದ್ದವು. ಅವುಗಳಲ್ಲಿ ಒಂದು ದೊಡ್ಡ ಕಂಪನಿ ನಿರ್ಧಾರ ಬದಲಿಸಿದೆ. 'ಫ್ಯೂಚರ್ ಗ್ರೂಪ್' ಸಂಘಟಿತ ಸಂಸ್ಥೆ ಐಪಿಎಲ್ ಪ್ರಾಯೋಜಕತ್ವದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದೆ.

ಬಿಸಿಸಿಐನಿಂದ ಮಾಹಿತಿ

ಬಿಸಿಸಿಐನಿಂದ ಮಾಹಿತಿ

ಐಪಿಎಲ್ ಪ್ರಾಯೋಜಕತ್ವದಿಂದ ಫ್ಯೂಚರ್ ಗ್ರೂಪ್ ಹಿಂದೆ ಸರಿದಿರುವುದನ್ನು ಬಿಸಿಸಿಐ ಮೂಲ ತಿಳಿಸಿದೆ. 'ಹೌದು, ಫ್ಯೂಚರ್ ಗ್ರೂಪ್ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ನಾವೀಗ ಬೇರೆ ಪ್ರಾಯೋಜಕರಿಗೆ ಎದುರು ನೋಡುತ್ತಿದ್ದೇವೆ ಎಂದು ಸದ್ಯ ದುಬೈನಲ್ಲಿರುವ ಬಿಸಿಸಿಐ ಮೂಲ ಮಾಹಿತಿ ನೀಡಿದೆ.

ದೊಡ್ಡ ಮಟ್ಟದ ಪ್ರಾಯೋಜತ್ವ ಕೊನೆ

ದೊಡ್ಡ ಮಟ್ಟದ ಪ್ರಾಯೋಜತ್ವ ಕೊನೆ

ಕಳೆದ ಐದು ವರ್ಷಗಳಿಂದಲೂ ಫ್ಯೂಚರ್ ಗ್ರೂಪ್ ಕಂಪನಿ ಐಪಿಎಲ್ ಪ್ರಾಯೋಜಕತ್ವ ನೀಡುತ್ತಿತ್ತು. ಇದೀಗ ಐಪಿಎಲ್ ವೆಬ್‌ಸೈಟ್‌ನಿಂದ ಫ್ಯೂಚರ್ ಗ್ರೂಪ್ ಲೋಗೋ ತೆಗೆದು ಹಾಕಲಾಗಿದೆ. ಪ್ರತೀ ವರ್ಷವೂ ಫ್ಯೂಚರ್ ಗ್ರೂಪ್ ಐಪಿಎಲ್‌ಗಾಗಿ 28 ಕೋ.ರೂಗಳ ಪ್ರಾಯೋಜಕತ್ವ ನೀಡುತ್ತಿತ್ತು.

ನಾಲ್ವರು ಪ್ರಾಯೋಜಕರು

ನಾಲ್ವರು ಪ್ರಾಯೋಜಕರು

ಫ್ಯೂಚರ್ ಗ್ರೂಪ್ ಹಿಂದೆ ಸರಿದ ಬಳಿಕ ಈಗ ಐಪಿಎಲ್ ಪ್ರಾಯೋಜಕರಲ್ಲಿ ಡ್ರೀಮ್ 11 (ಶೀರ್ಷಿಕೆ ಪ್ರಾಯೋಜಕ), ಟಾಟಾ ಮೋಟಾರ್ಸ್ (ಅಧಿಕೃತ ಕಾರು ಪಾಲುದಾರ), ಪೇಟಿಎಂ (ಅಂಪೈರ್ ಪಾಲುದಾರ) ಮತ್ತು ಸಿಯೆಟ್ (ಅಧಿಕೃತ ಟೈಮ್‌ಔಟ್ ಪಾಲುದಾರ) ಮಾತ್ರ ಉಳಿದುಕೊಂಡಿದೆ.

Story first published: Monday, August 24, 2020, 15:44 [IST]
Other articles published on Aug 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+