ಭಾರತ-ದಕ್ಷಿಣ ಆಫ್ರಿಕಾ ನಡುವೆ ಗಾಂಧಿ-ಮಂಡೇಲಾ ಸ್ಮಾರಕ ಕ್ರಿಕೆಟ್ ಸರಣಿ?
ಜೋಹಾನ್ಸ್ ಬರ್ಗ್, ಜೂ. 03: ಭಾರತ ಹಾಗೂ ದಕ್ಷಿಣ ಅಫ್ರಿಕಾ ನಡುವೆ ಇನ್ನಷ್ಟು ಬಾಂಧವ್ಯ ವೃದ್ಧಿಗಾಗಿ ಮಹಾತ್ಮಾಗಾಂಧೀಜಿ ಹಾಗೂ ನೆಲ್ಸನ್ ಮಂಡೇಲ ಸ್ಮಾರಕ ಕ್ರಿಕೆಟ್ ಸರಣಿ ಆಯೋಜಿಸಲು ಉಭಯ ದೇಶಗಳ ಕ್ರಿಕೆಟ್ ನಿಯಂತ್ರನ ಮಂಡಳಿ ನಿರ್ಧರಿಸಿದೆ. ಆದರೆ, ಇದು ಇನ್ನೂ ಮಾತುಕತೆ ಹಂತದಲ್ಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿದೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರರಿಗೆ ಮುಂಬರುವ ಏಕದಿನ ಕ್ರಿಕೆಟ್, ಟೆಸ್ಟ್ ಹಾಗೂ ಟಿ20 ಸರಣಿಗಾಗಿ ನೂತನ ಜರ್ಸಿ, ಕಿಟ್ ಬಿಡುಗಡೆ ಮಾಡಿ ನಂತರ ಮಾತನಾಡಿದ ದಕ್ಷಿಣ ಆಫ್ರಿಕಾ ಮಂಡಳಿ ಅಧ್ಯಕ್ಷ ಹರೂನ್ ಲೊರ್ಗಾಟ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.[ಸತ್ಯಾಗ್ರಹ ಮೂಡಿದ ನಾಡಲ್ಲೇ ಗಾಂಧೀಜಿಗೆ ಅವಮಾನ!]

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಐತಿಹಾಸಿಕ ಸಂಬಂಧವಿದೆ. ವರ್ಣಬೇಧ ನೀತಿಯಿಂದ ಕ್ರಿಕೆಟ್ ನಿಷೇಧ ಹೊಂದಿದ್ದ ದಕ್ಷಿಣ ಆಫ್ರಿಕಾ ಮರಳಿ ಕ್ರಿಕೆಟ್ ರಂಗಕ್ಕೆ ಪುನರ್ ಪ್ರವೇಶ ಪಡೆದಾಗ ಮೊದಲಿಗೆ ಸ್ವಾಗತಿಸಿ ಸರಣಿ ಆಡಿದ್ದು ಭಾರತದ ವಿರುದ್ಧ ಎಂಬುದನ್ನು ಮರೆಯುವಂತಿಲ್ಲ.
ಉಭಯ ದೇಶಗಳ ಐತಿಹಾಸಿಕ ವ್ಯಕ್ತಿಗಳಾದ ಮಹಾತ್ಮ ಗಾಂಧಿ ಹಾಗೂ ನೆಲ್ಸನ್ ಮಂಡೇಲ ಅವರ ಸ್ಮಾರಕವಾಗಿ ಕ್ರಿಕೆಟ್ ಸರಣಿ ಆರಂಭಿಸಲು ನಿರ್ಧರಿಸಲಾಗಿದೆ. [ಟೆಸ್ಟ್ ದಾಖಲೆಗಿಂತ ಅಪ್ಪನಾಗುವ ಖುಷಿ ಮುಖ್ಯ: ಎಬಿಡಿ]
ಭಾರತದಲ್ಲಿ ದಕ್ಷಿಣ ಆಫ್ರಿಕಾ ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಲಿದೆ. 2018ರಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಟಗಾರರು ಐಪಿಎಲ್ ಸೇರಿದಂತೆ ಸಾಕಷ್ಟು ಟಿ20 ಟೂರ್ನಿಗಳನ್ನು ಆಡಿದ್ದಾರೆ. [ದಕ್ಷಿಣ ಆಫ್ರಿಕಾ vs ಭಾರತ ಸರಣಿ ಎಲ್ಲಿ? ಯಾವಾಗ?]
ಮುಂದಿನ ವರ್ಷ ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವ ಟಿ20 ಚಾಂಪಿಯನ್ ಶಿಪ್ ಗೆ ತಯಾರಿ ನಡೆಸಲು ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications