For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ದಾಖಲೆಗಿಂತ ಅಪ್ಪನಾಗುವ ಖುಷಿ ಮುಖ್ಯ: ಎಬಿಡಿ

By Mahesh

ಕೇಪ್ ಟೌನ್, ಮೇ 28: ತಂದೆಯ ಆಗುವ ಸಂತಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ ಡಿವಿಲಿಯರ್ಸ್ ಗೆ ಟೆಸ್ಟ್ ಸರಣಿಯಿಂದ ಹೊರಗುಳಿಯುತ್ತಿದ್ದಾರೆ. 98 ಟೆಸ್ಟ್ ಆಡಿರುವ ಡಿವಿಲೆಯರ್ಸ್ ಅವರು ಸತತ ನೂರು ಟೆಸ್ಟ್ ಆಡಿದ ದಾಖಲೆಯನ್ನು ಬದಿಗೊತ್ತಿ ಕುಟುಂಬದೊಡನೆ ಕಾಲ ಕಳೆಯುವುದೇ ಮುಖ್ಯ ಎಂದಿದ್ದಾರೆ.

ಆದರೆ, ಎಬಿ ಡಿವಿಲೆಯರ್ಸ್ ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೆಚ್ಚಿನ ವಿಶ್ರಾಂತಿ ನೀಡುತ್ತಿಲ್ಲ. ಏಕದಿನ ಹಾಗೂ ಟ್ವೆಂಟಿ-20 ಸರಣಿಯ ವೇಳೆಗೆ ತಂಡವನ್ನು ಕೂಡಿಕೊಳ್ಳಬೇಕು ಎಂದು ಹೇಳಿದೆ. ಎಬಿ ಡಿವಿಲೆಯರ್ಸ್ ಹಾಗೂ ಪತ್ನಿ ಡೇನಿಯಲ್ ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.[ಬಾಂಗ್ಲಾ ಟೂರ್ ನಂತರ ಭಾರತಕ್ಕೆ ಬಿಗಿ ವೇಳಾಪಟ್ಟಿ ]

ದಿಗ್ಗಜರ ಸಾಲಿನಲ್ಲಿದ್ದ ಎಬಿಡಿ: ಆಸ್ಟ್ರೇಲಿಯಾದ ಅಲಾನ್ ಬಾರ್ಡರ್(153), ಇಂಗ್ಲೆಂಡಿನ ಅಲೆಸ್ಟರ್ ಕುಕ್ (111), ಆಸ್ಟ್ರೇಲಿಯಾದ ಮಾರ್ಕ್ ವಾ (107) ಹಾಗೂ ಭಾರತದ ಸುನಿಲ್ ಗವಾಸ್ಕರ್ (106) ನಂತರದ ಸ್ಥಾನದಲ್ಲಿ ಎಬಿ ಡಿ ವಿಲೆಯರ್ಸ್ ಇದ್ದು ಸತತ 98 ಟೆಸ್ಟ್ ಪಂದ್ಯವಾಡಿದ್ದಾರೆ. [ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ]

ಈ ನಡುವೆ ವಿಶ್ವಕಪ್ ಹಾಗೂ ಐಪಿಎಲ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ವೇಗಿ ಡೇಲ್‌ಸ್ಟೇನ್‌ ಹಾಗೂ ವೆರ್ನಾನ್ ಫಿಲ್ಯಾಂಡರ್ ಅವರನ್ನು ಮುಂಬರುವ ಬಾಂಗ್ಲಾ ಪ್ರವಾಸದ ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಿಂದ ಕೈಬಿಡಲಾಗಿದೆ. ದಕ್ಷಿಣ ಆಫ್ರಿಕಾ ಈ ಸರಣಿಯಲ್ಲಿ ಬಾಂಗ್ಲಾ ವಿರುದ್ಧ 2 ಟ್ವೆಂಟಿ-20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನಾಡಲಿದೆ. [ದಕ್ಷಿಣ ಆಫ್ರಿಕಾ vs ಭಾರತ ಸರಣಿ ಎಲ್ಲಿ? ಯಾವಾಗ?]

SA captain AB de Villiers to go on paternity leave

ತಂಡಗಳ ವಿವರ: ಟೆಸ್ಟ್
ಆಶೀಮ್ ಆಮ್ಲ (ನಾಯಕ), ಡೇನ್ ಎಲ್ಗರ್, ರಿಜಾ ಎಂಡ್ರಿಕ್ಸ್, ಫ್ಲಾಫ್ ಡು ಪ್ಲೆಸಸ್, ಸ್ಟೀನ್ ವಾನ್ ಜೋಲ್, ಜೆ.ಪಿ.ಡುಮಿನಿ, ಡಿ ಕಾಕ್, ಫಿಲೆಂಡರ್, ಡೇಲ್ ಸ್ಟೇನ್, ಮಾರ್ನೆ ಮಾರ್ಕಲ್, ಆರೋನ್ ಪಿನ್‌ಗಿಸೋ, ಸಿಮೋನ್ ಆರ್‌ಮೀರ್, ಟಿಮ್ಬಾ ಬಾಯುಮಾ, ಕಗಿಸೊ ರಾಬಾಡಾ, ಡೇನ್ ವಿಲ್ಲಸ್. [ಜಾಂಟಿ ಮಗಳಿಗೂ ಭಾರತಕ್ಕೂ ನಂಟು!]

ಏಕದಿನ ತಂಡ:
ಎಬಿಡಿವಿಲಿಯರ್ಸ್ (ನಾಯಕ), ಆಶೀಮ್ ಆಮ್ಲಾ (ಉಪನಾಯಕ), ಡಿ ಕಾಕ್, ಫ್ಲಾಪ್ ಡ್ಲು ಪ್ಲೆಸಸ್, ರಿಲೆ ರೊಸ್ಸೋ, ಜೆ.ಪಿ.ಡುಮಿನಿ, ಡೇವಿಡ್ ಮಿಲ್ಲರ್, ಫಾರ್ನಿ ಬೆಹರ್ದಿನ್, ಕ್ರಿಸ್ ಮೊರಿಸ್, ಮಾರ್ನೆ ಮೊರ್ಕಲ್, ಇಮ್ರಾನ್ ತಹೀರ್, ಕಾಗಿಸೋ ರಾಬಾಡಾ, ಕ್ಲೇನ್ ಅಬೋಟ್, ಅರೋನ್ ಪಿನ್‌ಗಿಸೋ, ವಾನೆ ಪರ್ನಾಲ್, ರಾಯನ್ ಮೆಕ್‌ರೆನ್. ['ಪಂದ್ಯಶ್ರೇಷ್ಠ ಪ್ರಶಸ್ತಿ' ಇತ್ತ ಎಬಿ ಡಿ 'ಗ್ರೇಟ್']

ಟ್ವೆಂಟಿ-20 ತಂಡ:
ಪ್ಲಾಫ್ ಡು ಪ್ಲೆಸಸ್ (ನಾಯಕ), ಡಿ ಕಾಕ್, ರಿಲೆ ರೊಸ್ಸೋ, ಎಬಿಡಿವಿಲಿಯರ್ಸ್, ಜೆ.ಪಿ.ಡುಮಿನಿ, ಡೇವಿಡ್ ಮಿಲ್ಲರ್, ಡೇವಿಡ್ ವೈಸ್ , ಕ್ರಿಸ್ ಮೋರಿಸ್, ಕ್ಲೇನ್ ಅಬೋಟ್, ಕಾಗಿಸೋ ರಾಬಾಡಾ, ಅರೋನ್ ಪಿನ್‌ಗಿಸೋ, ಎಡ್ಡಿ ಲಿಲ್ಲೆ , ವಾನೆ ಪರ್ನಾಲ್ , ಬ್ಯೂರಿನ್ ಎನ್‌ಡ್ರಿಕ್ಸ್ . [ಎಬಿಡಿ, ದಕ್ಷಿಣ ಆಫ್ರಿಕಾ ಮುರಿದ ODI ದಾಖಲೆಗಳ ಪಟ್ಟಿ]

ಪಂದ್ಯಗಳ ವಿವರ:
ಮೊದಲ ಟ್ವೆಂಟಿ-20: ಜುಲೈ 5 , 2ನೇ ಪಂದ್ಯ: ಜುಲೈ 7
ಮೊದಲ ಏಕದಿನ: ಜುಲೈ 10, 2ನೇ ಪಂದ್ಯ: ಜುಲೈ 12, 3ನೇ ಪಂದ್ಯ: ಜುಲೈ 15
ಮೊದಲ ಟೆಸ್ಟ್ : ಜುಲೈ 21-25 , 2ನೇ ಪಂದ್ಯ: ಜುಲೈ 30-ಆಗಸ್ಟ್ 3. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+