ಸಚಿನ್ ಯಾಕೆ ಮೊದಲ ಎಸೆತ ಎದುರಿಸುತ್ತಿರಲಿಲ್ಲ: ಗಂಗೂಲಿ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿ

ಏಕದಿನ ಕ್ರಿಕೆಟ್‌ನಲ್ಲಿ ವಿಶ್ವಕಂಡ ಅತ್ಯುತ್ತಮ ಆರಂಭ ಆಟಗಾರರು ಎಂದು ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೋಡಿ ಖ್ಯಾತಿ ಗಳಿಸಿದೆ. ಅದಕ್ಕೆ ಕಾರಣ ಆರಂಭಿಕರಾಗಿ ಈ ಜೋಡಿ ಮಾಡಿದ ದಾಖಲೆ. ಆದರೆ ಗಂಗೂಲಿ ಜೊತೆ ಸಚಿನ್ ತೆಂಡೂಲ್ಕರ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರೂ ಮೊದಲ ಎಸೆತವನ್ನು ಗಂಗೂಲಿಯೇ ಎದುರಿಸುತ್ತಿದ್ದರು. ಸಚಿನ್ ಮೊದಲ ಎಸೆತವನ್ನು ಎದುರಿಸಲು ಹಿಂದೇಟು ಹಾಕುತ್ತಿದ್ದರು.
ಸಚಿನ್ ಹೀಗೆ ಮೊದಲ ಎಸೆತವನ್ನು ಎದುರಿಸದೇ ಇರುವ ಬಗ್ಗೆ ಸ್ವತಃ ಸೌರವ್ ಗಂಗೂಲಿ ಮಾತಾಡಿದ್ದಾರೆ. ಮಯಾಂಕ್ ಅಗರ್ವಾಲ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಸೌರವ್ ಈ ಬಗ್ಗೆ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಸಚಿನ್ ಯಾಕೆ ನಾನ್‌ಸ್ಟ್ರೈಕ್‌ನಿಂದಲೇ ಆರಂಭಿಸುತ್ತಿದ್ದರು ಎಂಬುದಕ್ಕೆ ಅವರು ಸೊಗಸಾದ ಕಾರಣವನ್ನು ನೀಡುತ್ತಿದ್ದದ್ದನ್ನು ಸೌರವ್ ಗಂಗೂಲಿ ಬಿಚ್ಚಿಟ್ಟಿದ್ದಾರೆ.

ಮೊದಲ ಎಸೆತ ಎದುರಿಸಲು ಹೇಳುತ್ತಿದ್ದೆ
ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾಗ ಸಚಿನ್‌ಗೆ ನಾನು ಕೂಡ ಮೊದಲ ಎಸೆತವನ್ನು ಎದುರಿಸಲು ಹೇಳುತ್ತಿದ್ದೆ. ಯಾವಾಗಲೂ ನಾನೇ ಮೊದಲ ಎಸೆತ ಎದುರಿಸುತ್ತೇನೆ ನೀನು ಕೂಡ ಮೊದಲ ಎಸೆತವನ್ನು ಎದುರಿಸು ಎಂದು ಹೇಳುತ್ತಿದ್ದೆ. ಅದಕ್ಕೆ ಸಚಿನ್ ಪ್ರತಿ ಬಾರಿಯೂ ಎರಡು ಸಿದ್ದ ಉತ್ತರಗಳನ್ನು ನೀಡಿ ನನ್ನನ್ನೇ ಮೊದಲ ಎಸೆತ ಎದುರಿಸಲು ಬಿಡುತ್ತಿದ್ದರು ಎಂದು ಗಂಗೂಲಿ ಹೇಳಿದ್ದಾರೆ.

ಸಚಿನ್ ನೀಡುತ್ತಿದ್ದ ಕಾರಣ
ಸಚಿನ್ ತೆಂಡೂಲ್ಕರ್ ಮೊದಲ ಎಸೆತ ಎದುರಿಸದಿರಲು ಎರಡು ಕಾರಣಗಳನ್ನು ನೀಡುತ್ತಿದ್ದರು ಅದು ಅವರ ನಂಬಿಕೆಯಾಗಿತ್ತು ಎಂದು ಗಂಗೂಲಿ ಹೇಳಿದ್ದಾರೆ. ಹಿಂದಿನ ಪಂದ್ಯದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾಗ ಅದೇ ಫಾರ್ಮ್ ಮುಂದುವರಿಯಲು ನಾನು ನಾನ್ ಸ್ಟ್ರೈಕ್‌ನಿಂದ ಬ್ಯಾಟಿಂಗ್ ಆರಂಭಿಸುತ್ತೇನೆ ಎನ್ನುತ್ತಿದ್ದರು. ಫಾರ್ಮ್‌ನಲ್ಲಿ ಇಲ್ಲದಿದ್ದಾಗ "ನಾನು ನನ್ನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನಾನ್‌ಸ್ಟ್ರೈಕ್‌ನಲ್ಲಿ ನಿಲ್ಲುತ್ತೇನೆ" ಎನ್ನುತ್ತಿದ್ದರು ಎಂದು ಗಂಗೂಲಿ ವಿವರಿಸಿದ್ದಾರೆ.

ನಾನ್‌ಸ್ಟ್ರೈಕ್‌ನಲ್ಲಿ ನಿಂತಿದ್ದರೂ ಸ್ಟ್ರೈಕ್‌ಗೆ ತೆರಳಲು ಒತ್ತಾಯಿಸಿದ್ದರು
ಒಳ್ಳೆಯ ಫಾರ್ಮ್ ಹಾಗೂ ಕೆಟ್ಟ ಫಾರ್ಮ್ ಎರಡಕ್ಕೂ ಸಚಿನ್ ಬಳಿ ಕಾರಣವಿತ್ತು. ಕೆಲ ಸಂದರ್ಭಗಳಲ್ಲಿ ಸಚಿನ್‌ಗಿಂತ ಮುಂದೆ ಕ್ರೀಸ್‌ಗೆ ತೆರಳಿ ನಾನ್‌ಸ್ಟ್ರೈಕ್ ನಿಂತಿದ್ದಾಗ ಸಚಿನ್ ಆಗಲೇ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾಗಲೂ ನನ್ನ ಬಳಿ ಬಂದು ಸ್ಟ್ರೈಕ್‌ಗೆ ತೆರಳುವಂತೆ ಒತ್ತಾಯಿಸಿದ್ದರು. ಹೀಗೆ ಒಂದೆರಡು ಬಾರಿ ನಡೆದಿತ್ತು ಎಂದು ಗಂಗೂಲಿ ನಗುತ್ತಲೇ ಹೇಳಿದ್ದಾರೆ.

ಏಕದಿನ ಕ್ರಿಕೆಟ್‌ನ ಯಶಸ್ವೀ ಆರಂಭಿಕ ಜೋಡಿ
ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಏಕದಿನ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವೀ ಜೋಡಿ ಎನಿಸಿದ್ದಾರೆ. 176 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿರುವ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೋಡಿ 47.55ರ ಸರಾಸರಿಯಲ್ಲಿ 8227 ರನ್ ದಾಖಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications