Gary Kirsten: ಪಿಸಿಬಿ ಹಾಗೂ ಕೋಚ್ ನಡುವೆ ಭಿನ್ನಾಭಿಪ್ರಾಯ: ವಿಶ್ವ ಚಾಂಪಿಯನ್ ಕೋಚ್ ರಾಜೀನಾಮೆ
ಪಾಕಿಸ್ತಾನ ತಂಡದ ಸೀಮಿತ ಓವರ್‌ಗಳ ಕೋಚ್ ಗ್ಯಾರಿ ಕರ್ಸ್ಟನ್ ರಾಜೀನಾಮೆ ನೀಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಕೋಚ್ ನಡುವಿನ ಭಿನ್ನಾಭಿಪ್ರಯದಿಂದಾಗಿ ಅವರು ಪದತ್ಯಾಗ ಮಾಡಿದ್ದಾರೆ. ಇವರ ಸ್ಥಾನಕ್ಕಾಗಿ ಪಿಸಿಬಿ ಬೇರೆ ಕೋಚ್‌ನ್ನು ನೇಮಿಸಿದೆ. ಆಸೀಸ್ ಪ್ರವಾಸ ಬೆಳೆಸಲಿರುವ ಪಾಕ್ ತಂಡವನ್ನು ಜೇಸನ್ ಗಿಲ್ಲೆಸ್ಪಿ ಸೇರಿಕೊಂಡಿದ್ದಾರೆ.
ಗ್ಯಾರಿ ಕರ್ಸ್ಟನ್ ಕಳೆದ ಆರು ತಿಂಗಳ ಹಿಂದೆ ಪಾಕಿಸ್ತಾನದ ಕೋಚ್ ಆಗಿ ನೇಮಕಗೊಂಡಿದ್ದರು. ಇದೇ ವೇಳೆಯಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ವೇಗದ ಬೌಲರ್ ಜೇಸನ್ ಗಿಲ್ಲೆಸ್ಪಿ ಅವರನ್ನು ಪಾಕ್ ಟೆಸ್ಟ್ ತಂಡದ ಕೋಚ್ ಆಗಿ ನೇಮಕ ಮಾಡಿತ್ತು. ಈ ಇಬ್ಬರ ಕೋಚ್‌ಗಳು ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯೊಂದಿಗೆ ಎರಡು ವರ್ಷ ಒಪ್ಪಂದವನ್ನು ಮಾಡಿಕೊಂಡಿದ್ದರು.

ಪಿಸಿಬಿ ಸೋಮವಾರ ಈ ಬಗ್ಗೆ ತನ್ನ ಹೇಳಿಕೆಯನ್ನು ನೀಡಿದೆ. ಸೀಮಿತ ಓವರ್‌ಗಳ ಕೋಚ್ ಗ್ಯಾರಿ ಕರ್ಸ್ಟನ್ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ, ಅದನ್ನು ಮಂಡಳಿ ಅಂಗೀಕರಿಸಲಾಗಿದೆ. ಮುಂದಿನ ತಿಂಗಳು ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ಪ್ರವಾಸದಲ್ಲಿ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿ ಗಿಲ್ಲೆಸ್ಪಿ ಕಾರ್ಯ ನಿರ್ವಹಿಸಲಿದ್ದಾರೆ.
ರಾಜೀನಾಮೇಗೆ ಕಾರಣವೇನು?
ಕೋಚ್ ತಂಡದ ಆಯ್ಕೆಯನ್ನು ಮಾಡುವ ಹಕ್ಕನ್ನು ಪಿಸಿಬಿ ಕಿತ್ತುಕೊಂಡಿತು. ಪಾಕಿಸ್ತಾನ ತಂಡದ ಆಯ್ಕೆಯನ್ನು ಕೋಚ್‌ಗಳಿಂದ ಕಸಿದುಕೊಂಡಿದ್ದು ಸೀಮಿತ ಓವರ್‌ಗಳ ಕೋಚ್‌ಗೆ ಬೇಸರ ತಂದಿತ್ತು. ತಂಡದ ಆಯ್ಕೆ ಈಗ ಆಯ್ಕೆ ಸಮಿತಿಯ ಹಕ್ಕು. ಇದರಲ್ಲಿ ಯಾರು ಮಧ್ಯ ಪ್ರವೇಶ ಮಾಡುವಂತಿಲ್ಲ.

ಇನ್ನು ಗ್ಯಾರಿ ಕರ್ಸ್ಟನ್ ರಾಜೀನಾಮೆ ನೀಡುವ ಒಂದು ದಿನ ಮೊದಲು ಪಾಕ್ ತಂಡವನ್ನು ಘೋಷಿಸಲಾಯಿತು. ಈ ವೇಳೆ ನಾಯಕನ ಆಯ್ಕೆಯ ಬಗ್ಗೆ ಭಿನ್ನಾಭಿಪ್ರಯಗಳು ಇದ್ದವು. ಪಿಸಿಬಿ ಮೊಹಮ್ಮದ್ ರಿಜ್ವಾನ್ ಅವರನ್ನು ಏಕದಿನ ಹಾಗೂ ಟಿ20 ತಂಡಗಳ ನೂತನ ನಾಯಕರನ್ನಾಗಿ ನೇಮಕ ಮಾಡಿದೆ. ನಾಯಕನನ್ನು ನೇಮಿಸುವಾಗ ಗ್ಯಾರಿ ಕರ್ಸ್ಟನ್ ಅವರ ಅಭಿಪ್ರಾಯವನ್ನು ಪರಿಗಣಿಸಬೇಕಾಗಿತ್ತು ಎಂದು ವಾದವಾಗಿದೆ. ಹೀಗಾಗಿಯೇ ಸೀಮಿತ ಓವರ್‌ಗಳ ತಂಡದ ನಾಯಕನ ಘೋಷಣೆ ವಿಳಂಬವಾಗಿತ್ತು ಎಂದು ತಿಳಿದು ಬಂದಿದೆ.
ಪಿಸಿಬಿ ಆಯ್ಕೆ ಸಮಿತಿ ಹಾಗೂ ಕೋಚ್ ನಡುವೆ ಪ್ರತ್ಯೇಕ ವಾದವನ್ನು ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ತಂಡ ಸೋತ ಬಳಿಕ, ಪಿಸಿಬಿ ಆಯ್ಕೆ ಸಮಿತಿಯನ್ನು ಚೇಂಜ್ ಮಾಡಿತು. ಪಿಸಿಬಿ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಹಲವು ಬಾರಿ ತನ್ನ ಸಿಬ್ಬಂದಿಗಳನ್ನು ಬದಲಾವಣೆ ಮಾಡಿದೆ. ಇತ್ತೀಚೆಗೆ ಮಿಕ್ಕಿ ಆರ್ಥರ್, ಗ್ರಾಂಟ್ ಬ್ರಾಡ್‌ಬರ್ನ್ ಮತ್ತು ಆಂಡ್ರ್ಯೂ ಪುಟ್ಟಿಕ್ ಕೂಡ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಗ್ಯಾರಿ ಕರ್ಸ್ಟನ್ ಕೋಚ್ ಸಾಧನೆ
ಗ್ಯಾರಿ ಕರ್ಸ್ಟನ್ ಹಲವು ತಂಡಗಳ ಪರ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಕೋಚಿಂಗ್‌ಗೆ ಮನ್ನಣೆ ಸಿಕ್ಕಿದ್ದು 2011ರಲ್ಲಿ ಟೀಮ್ ಇಂಡಿಯಾ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆದ್ದಾಗ. ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ವಿಜೇತ ತಂಡದ ಕೋಚ್. ಅಲ್ಲದೆ ಐಪಿಎಲ್‌ನಲ್ಲಿ ಹಲವು ತಂಡಗಳ ಪರ ಕೋಚ್ ಆಗಿ ಸೈ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಫುಲ್ ಟೈಮ್ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications