ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ಗಿಂತ ಬಹಳ ಹೆಚ್ಚು ಶತಕ ಬಾರಿಸಲಿದ್ದಾರೆ ಕೊಹ್ಲಿ ಎಂದ ಗೌತಮ್ ಗಂಭೀರ್

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾತಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಸತತ ಎರಡನೇ ಶತಕ ಸಿಡಿಸಿರುವ ಕೊಹ್ಲಿ ಏಕದಿನ ಮಾದರಿಯಲ್ಲಿ 45ನೇ ಶತಕ ಪೂರ್ಣಗೊಳಿಸಿದ್ದಾರೆ. ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಬಳಿಕ ಮಾಜಿ ಕ್ರಿಕೆಟಿಗ ಗೌತನ್ ಗಂಭೀರ್ ಪ್ರತಿಕ್ರಿಯೆ ನೀಡಿದ್ದು ವಿರಾಟ್ ಕೊಹ್ಲಿ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಏಕದಿನ ಮಾದರಿಯಲ್ಲಿ ಸುದೀರ್ಘ ಕಾಲದಿಂದ ಅದ್ಭುತವಾಗಿ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಅವರನ್ನು 50 ಓವರ್‌ಗಳ ಮಾದರಿಯ ಮಾಸ್ಟರ್ ಎಂದು ಬಣ್ಣಿಸಿದ್ದಾರೆ ಗೌತಮ್ ಗಂಭೀರ್. ಈ ಸಂದರ್ಭದಲ್ಲಿ ಏಕದಿನ ಮಾದರಿಯಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಿಂತಲೂ ಹೆಚ್ಚಿನ ಸಂಖ್ಯೆಯ ಶತಕವನ್ನು ಕೊಹ್ಲಿ ಸಿಡಿಸಲಿದ್ದಾರೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಚಿನ್ ದಾಖಲೆಯ ಸನಿಹದಲ್ಲಿ ಕೊಹ್ಲಿ
ಏಕದಿನ ಮಾದರಿಯಲ್ಲಿ ಸುದೀರ್ಘ ಸಮಯದ ಬಳಿಕ ಕಳೆದ ಬಾಂಗ್ಲಾದೇಶ ಪ್ರವಾಸದ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದರು. ಅದಾದ ಬಳಿಕ ಲಂಕಾ ವಿರುದ್ಧದ ಪಂದ್ಯದಲ್ಲಿಯೂ ಕೊಹ್ಲಿ ಶತಕ ಸಿಡಿಸುವ ಮೂಲಕ ಏಕದಿನ ಮಾದರಿಯಲ್ಲಿ ಸಾರ್ವಕಾಲಿಕ ದಾಖಲೆ ಹೊಂದಿರುವ ಸಚಿನ್ ತೆಂಡೂಲ್ಕರ್ ಅವರ 49ನೇ ಶತಕಕ್ಕೆ ಮತ್ತಷ್ಟು ಸನಿಹದಲ್ಲಿದ್ದಾರೆ. ಈ ಸಾಧನೆಗೆ ಕೊಹ್ಲಿ ಇನ್ನು ಕೇವಲ 4 ಶತಕಗಳನ್ನು ಹಿಂದಿದ್ದಾರೆ.

ODIನಲ್ಲಿ ತೆಂಡೂಲ್ಕರ್‌ಗಿಂತ ಹೆಚ್ಚು ಶತಕಗಳಿಸಲಿದ್ದಾರೆ
"ಇದು ದಾಖಲೆಗಳ ವಿಚಾರವಲ್ಲ. ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರಿಗಿಂತ ಬಹಳ ಹೆಚ್ಚು ಶತಕ ಸಿಡಿಸಲಿದ್ದಾರೆ. ಯಾಕೆಂದರೆ ನಿಯಮಗಳು ಬಹಳ ಬದಲಾವಣೆಯಾಗಿದೆ" ಎಂದು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಾ ಗೌತಮ್ ಗಂಭಿರ್ ಹೇಳಿಕೆ ನೀಡಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ಪಡೆಗೆ ಸೋಲುಣಿಸಿದ ಪಾಕಿಸ್ತಾನ

ಹೋಲಿಕೆ ಸರಿಯಲ್ಲ ಎಂದ ಗಂಭೀರ್
ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ. "ಭಿನ್ನ ಕಾಲಮಾನದ ಇಬ್ಬರು ಆಟಗಾರರನ್ನು ಹೋಲಿಕೆ ಮಾಡುವುದು ಸರಿಯಲ್ಲ. ಈಗ ಎರಡು ಹೊಸ ಚೆಂಡುಗಳನ್ನು ಬಳಸುವುದರ ಜೊತೆಗೆ ಐವರು ಫೀಲ್ಡರ್‌ಗಳು ಒಳಭಾಗದಲ್ಲಿರುವ ನಿಯಮಗಳು ಇದ್ದು ಇವೆಲ್ಲಾ ಇಲ್ಲದ ಕಾಲದೊಂದಿಗೆ ಹೋಲಿಕೆ ಮಾಡುವುದು ನ್ಯಾಯವಲ್ಲ. ಆದರೆ ಖಂಡಿತವಾಗಿಯೂ ವಿರಾಟ್ ಕೊಹ್ಲಿ ಈ ಮಾದರಿಯ ಮಾಸ್ಟರ್ ಎನಿಸಿಕೊಂಡಿದ್ದು ಇದನ್ನು ಅವರು ಸುದೀರ್ಘ ಕಾಲದಿಂದ ನಿರೂಪಿಸಿಕೊಂಡು ಬಂದಿದ್ದಾರೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮಂಜ್ರೇಕರ್ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಲ್ಲ, ಹಾಗಾಗಿ ಪ್ರತಿ ಪಂದ್ಯದಲ್ಲಿಯೂ ಶತಕವನ್ನು ಗಳಿಸಲು ಪೂರ್ಣ 50 ಓವರ್‌ಗಳ ಇನ್ನಿಂಗ್ಸ್ ದೊರೆಯುವುದಿಲ್ಲ. ಬಹುತೇಕ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಾರೆ. ಅದನ್ನು ಕೂಡ ನಾವು ಪರಿಗಣಿಸಬೇಕಾಗುತ್ತದೆ. ಆದರೆ ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕದ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಚಿನ್ ದಾಖಲೆಯನ್ನು ಸರಿಗಟ್ಟಲು ಅವರಿಗೆ ಇನ್ನು ಬೇಕಿರುವುದು ಕೇವಲ ನಾಲ್ಕು ಶತಕ. ಇದನ್ನು ಸಾಧಿಸಲು ಅವರಿಗೆ ಒಂದು ಅಥವಾ ಒಂದೂವರೆ ವರ್ಷ ಸಾಕಾಗಬಹುದು. ಇದು ಏಕದಿನ ವಿಶ್ವಕಪ್ ವರ್ಷ ಆಗಿರುವ ಕಾರಣ ಇದು ಸಾಧ್ಯವಾಗುವ ನಿರೀಕ್ಷೆಯಿದೆ" ಎಂದಿದ್ದಾರೆ ಮಂಜ್ರೇಕರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications