Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SL: ರಿಕಿ ಪಾಂಟಿಂಗ್ vs ರೋಹಿತ್ ಶರ್ಮಾ ನಡುವೆ ಹೋಲಿಕೆ; ಶಾಕಿಂಗ್ ಹೇಳಿಕೆ ನೀಡಿದ ಗಂಭೀರ್

IND vs SL: Gautam Gambhir Makes Shocking Statement On Comparison Between Ricky Ponting And Rohit Sharma

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಪ್ರಸ್ತುತ ಕಾಲಮಾನದ ಅತ್ಯುತ್ತಮ ವೈಟ್ ಬಾಲ್ ಬ್ಯಾಟ್ಸ್‌ಮನ್ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಭಾರತ ತಂಡಕ್ಕೆ ರೋಹಿತ್ ಶರ್ಮಾ ಇನ್ನಿಂಗ್ಸ್ ತೆರೆಯುವವರೆಗೂ ಅವರಿಂದ ಅಷ್ಟೊಂದು ಉತ್ತಮ ಪ್ರದರ್ಶನ ಮೂಡಿಬಂದಿರಲಿಲ್ಲ.

ಯಾವಾಗ ಭಾರತ ತಂಡಕ್ಕೆ ಇನ್ನಿಂಗ್ಸ್ ತೆರೆಯುವ ಅವಕಾಶ ಪಡೆದುಕೊಂಡರೋ, ಅಂದಿನಿಂದ ರೋಹಿತ್ ಶರ್ಮಾ ಅತ್ಯುತ್ತಮ ಸ್ಟ್ರೈಕ್‌ರೇಟ್ ಮತ್ತು ಸರಾಸರಿಯೊಂದಿಗೆ ರನ್ ಗಳಿಸತೊಡಗಿದರು. ಹೀಗಾಗಿ ಅವರ ವೃತ್ತಿಜೀವನವು ಆರಂಭಿಕ ಬ್ಯಾಟರ್ ಆದ ನಂತರ ಪ್ರಾರಂಭವಾಗಿದೆ ಎಂದು ಹೇಳಿದರೆ ತಪ್ಪಿಲ್ಲ.

ಅತಿ ಹೆಚ್ಚು ಏಕದಿನ ಶತಕಗಳನ್ನು (30) ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಸರಿಗಟ್ಟಲು ಭಾರತದ ನಾಯಕ ರೋಹಿತ್ ಶರ್ಮಾಗೆ ಕೇವಲ ಒಂದು ಶತಕದ ಅವಶ್ಯಕತೆ ಇದೆ.

ಇದೇ ವೇಳೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅವರು ರೋಹಿತ್ ಶರ್ಮಾ ಬಗ್ಗೆ ನೇರ ಹೇಳಿಕೆ ನೀಡಿದ್ದು, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ಗಿಂತ 35 ವರ್ಷ ವಯಸ್ಸಿನ ರೋಹಿತ್ ಶರ್ಮಾ ಉತ್ತಮ ಬ್ಯಾಟರ್ ಎಂದು ಪರಿಗಣಿಸಿದ್ದಾರೆ.

IND vs SL: Gautam Gambhir Makes Shocking Statement On Comparison Between Ricky Ponting And Rohit Sharma

ತನ್ನ ಸಮರ್ಥನೆಯನ್ನು ಬೆಂಬಲಿಸಲು ಗೌತಮ್ ಗಂಭೀರ್ ಅವರು ಉಪಖಂಡದ ಪರಿಸ್ಥಿತಿಗಳಲ್ಲಿ ರಿಕಿ ಪಾಂಟಿಂಗ್ ಅವರ ಕಡಿಮೆ ಶತಕಗಳ ದಾಖಲೆಯನ್ನು ಸೂಚಿಸಿದರು.

"ಆಶ್ಚರ್ಯಕರ ಸಂಗತಿಯೆಂದರೆ, ಕಳೆದ ನಾಲ್ಕೈದು ವರ್ಷಗಳಲ್ಲಿ ರೋಹಿತ್ ಶರ್ಮಾ ಇಷ್ಟು ಶತಕಗಳನ್ನು ಗಳಿಸಿದ್ದಾರೆ. ಕಳೆದ ಐದು-ಆರು ವರ್ಷಗಳ ಹಿಂದೆ ರೋಹಿತ್ ಶರ್ಮಾ ಈ ಸ್ಥಿರತೆಯನ್ನು ಹೊಂದಿರಲಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅವರು ಖಂಡಿತವಾಗಿಯೂ ಸುಮಾರು 20 ಶತಕಗಳನ್ನು ಗಳಿಸಿದ್ದಾರೆ,'' ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟರು.

"ಅಷ್ಟೇ ಅಲ್ಲದೇ, ಭಾರತದ ನಾಯಕ ರೋಹಿತ್ ಶರ್ಮಾ ಅವರು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್‌ಗಿಂತ ಉತ್ತಮ ಆಟಗಾರ. ಏಕೆಂದರೆ ರಿಕಿ ಪಾಂಟಿಂಗ್ ಉಪಖಂಡದಲ್ಲಿ ಕಡಿಮೆ ದಾಖಲೆಯನ್ನು ಪಡೆದಿದ್ದಾರೆ," ಎಂದು ಗೌತಮ್ ಗಂಭೀರ್ ಗುರುವಾರ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದ ಮೊದಲು ಸ್ಟಾರ್ ಸ್ಪೋರ್ಟ್ಸ್ ಶೋ ಕ್ರಿಕೆಟ್ ಲೈವ್‌ನಲ್ಲಿ ಹೇಳಿದರು.

ಈ ವೇಳೆ ಸಹ ಪ್ಯಾನೆಲಿಸ್ಟ್ ಮತ್ತು ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಕೂಡ ಗೌತಮ್ ಗಂಭೀರ್ ಅವರ ಹೇಳಿಕೆಯಿಂದ ಆಘಾತಕ್ಕೊಳಗಾಗಿದ್ದಾರೆ. 'ನೀವು ಬ್ರೇಕಿಂಗ್ ನ್ಯೂಸದದನಿಂದ ತಪ್ಪಿಸಿಕೊಂಡಿದ್ದೀರಿ' ಎಂದು ಕಾರ್ಯಕ್ರಮದ ನಿರೂಪಕರಿಗೆ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ದಾಖಲೆ ತಿರುವಿ ನೋಡುವುದಾದರೆ, ಒಟ್ಟು 30 ಶತಕಗಳಲ್ಲಿ ರಿಕಿ ಪಾಂಟಿಂಗ್ ಅವರು ಉಪಖಂಡದಲ್ಲಿ 41 ಸರಾಸರಿಯೊಂದಿಗೆ ಕೇವಲ ಆರು ಏಕದಿನ ಶತಕಗಳನ್ನು ಗಳಿಸಿದ್ದಾರೆ. ಮತ್ತೊಂದೆಡೆ, ರೋಹಿತ್ ಶರ್ಮಾ ಉಪಖಂಡದ ಹೊರಗೆ 13 ಶತಕಗಳನ್ನು ಬಾರಿಸಿದ್ದಾರೆ.

ಇದೇ ವೇಳೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿದ್ದಾರೆ ಮತ್ತು ಇದು 50 ಓವರ್‌ಗಳ ಸ್ವರೂಪದಲ್ಲಿ ಯಾವುದೇ ಬ್ಯಾಟರ್‌ನಿಂದ ಅತಿ ಹೆಚ್ಚಿನ ದ್ವಿಶತಕವಾಗಿದೆ.

Story first published: Thursday, January 12, 2023, 20:05 [IST]
Other articles published on Jan 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+