Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಲ್ ಟೈಮ್ ಇಂಡಿಯಾ ತಂಡ ಪ್ರಕಟಿಸಿದ ಗೌತಮ್ ಗಂಭೀರ್: ವಿಶ್ವ ವಿಜೇತ ನಾಯಕನಿಗಿಲ್ಲ ಸ್ಥಾನ

ಟೀಮ್ ಇಂಡಿಯಾದ ಹೆಡ್‌ ಕೋಚ್ ಗೌತಮ್‌ ಗಂಭೀರ್‌ ಅಲ್ ಟೈಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಹಲವು ಸ್ಟಾರ್ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಆದರೆ ಆ ಇಬ್ಬರು ವಿಶ್ವ ವಿಜೇತ ನಾಯಕರಿಗೆ ಸ್ಥಾನ ನೀಡಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿಗೆ ಆರ್‌ಸಿಬಿಯ ಸ್ಟಾರ್ ಪ್ಲೇಯರ್‌ ದಿನೇಶ್ ಕಾರ್ತಿಕ್ ಸಹ ತಮ್ಮ ಆಲ್‌ ಟೈಮ್ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿದ್ದರು. ಅದರಲ್ಲಿ ಸ್ಟಾರ್ ವಿಕೆಟ್‌ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಸೇರಿಸಿರಲಿಲ್ಲ. ಆಗ ಅದು ದೊಡ್ಡ ವಿವಾದವಾಗಿತ್ತು. ಈಗ ಟೀಮ್ ಇಂಡಿಯಾದ ಹೆಡ್ ಕೋಚ್‌ ಗೌತಮ್ ಗಂಭೀರ್ ತಂಡವನ್ನು ಪ್ರಕಟಿಸಿದ್ದು, ಇವರ ತಂಡದಲ್ಲೂ ವಿಶ್ವವಿಜೇತ ಆಟಗಾರನಿಗೆ ಅವಕಾಶ ನೀಡಿಲ್ಲ.

Gautam Gambhir s All-Time India XI No Place for Kapil Dev Rohit Sharma

ಯಾರಿಗಿಲ್ಲಾ ಅವಕಾಶ?

ಟೀಮ್ ಇಂಡಿಯಾದ ಹೆಡ್ ಕೋಚ್‌ ಗೌತಮ್‌ ಗಂಭಿರ್‌ ಅಳೆದು ತೂಗಿ ಟೀಮ್ ಇಂಡಿಯಾ ಆಲ್‌ಟೈಮ್ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಟೀಮ್ ಇಂಡಿಯಾದ ಸ್ಟೂಪರ್ ಸ್ಟಾರ್ ಬ್ಯಾಟರ್‌ ರೋಹಿತ್ ಶರ್ಮಾ ಅವರನ್ನು ಕೈ ಬಿಡಲಾಗಿದೆ. ಇತ್ತೀಚಿಗೆ ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ತಂಡಕ್ಕೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕರನ್ನೆ ಗೌತಮ್‌ ಕಡೆಗಣಿಸಿದ್ದಾರೆ.

ಬರೀ ರೋಹಿತ್ ಶರ್ಮಾ ಅವರನ್ನು ಅಷ್ಟೇ ಅಲ್ಲಾ, ಗೌತಮ್ ಗಂಭೀರ್ ಟೀಮ್ ಇಂಡಿಯಾದ ಇನ್ನೋರ್ವ ವಿಶ್ವಕಪ್‌ ವಿಜೇತ ನಾಯಕರನ್ನು ಸಹ ಕಡೆಗಣನೆ ಮಾಡಿದ್ದಾರೆ. 1983 ವಿಶ್ವಕಪ್‌ ತಂಡದ ನಾಯಕ ಕಪಿಲ್‌ ದೇವ್‌ ಅವರಿಗೂ ಗೌತಮ್‌ ತಂಡದಲ್ಲಿ ಸ್ಥಾನವಿಲ್ಲ. ಟೀಮ್ ಇಂಡಿಯಾದ ಯಾರ್ಕರ್‌ ಸ್ಪೇಷಲಿಸ್ಟ್‌ ಖ್ಯಾತಿಯ ಜಸ್ಪ್ರಿತ್ ಬುಮ್ರಾ ಅವರಿಗೂ ಗೌತಮ್ ಗಂಭೀರ್ ಪ್ರಕಟಿಸಿದ ತಂಡದಲ್ಲಿ ಸ್ಥಾನವಿಲ್ಲ.

Gautam Gambhir s All-Time India XI No Place for Kapil Dev Rohit Sharma

ಯಾರಿಗೆಲ್ಲ ಸ್ಥಾನ?

ಗೌತಮ್‌ ಗಂಭೀರ್ ಅವರು ಪ್ರಕಟಿಸಿದ ತಂಡದಲ್ಲಿ ಸ್ಫೊಟಕ ಬ್ಯಾಟರ್‌ ವೀರೇಂದ್ರ ಸೆಹ್ವಾಗ್‌, ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರಿಗೆ ಸ್ಥಾನ ನೀಡಲಾಗಿದೆ. ಆಲ್‌ರೌಂಡರ್ ಸ್ಥಾನದಲ್ಲಿ ಯುವರಾಜ್ ಸಿಂಗ್‌ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ವೇಗಿಗಳಾಗಿ ಇರ್ಫಾನ್ ಪಠಾಣ್, ಜಹೀರ್ ಖಾನ್ ಅವರಿಗೆ ಸ್ಥಾನ ನೀಡಿದ್ದಾರೆ. ಇನ್ನು ತಂಡದಲ್ಲಿ ಲೆಗ್ ಸ್ಪಿನ್ನರ್‌ ಅನಿಲ್ ಕುಂಬ್ಳೆ, ಆಫ್‌ ಸ್ಪಿನರ್ ಅಶ್ವಿನ್‌ ಅವರಿಗೂ ಸ್ಥಾನವಿದೆ.

ಗೌತಮ್ ಗಂಭೀರ್ ಆಲ್ ಟೈಮ್ ಇಂಡಿಯಾ ತಂಡ: ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂಎಸ್ ಧೋನಿ (ವಿಕೆಟ್ ಕೀಪರ್), ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, ಇರ್ಫಾನ್ ಪಠಾಣ್, ಜಹೀರ್ ಖಾನ್.

Story first published: Monday, September 2, 2024, 14:42 [IST]
Other articles published on Sep 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+