Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನೆರವು ಬೇಡುವ ಮಾಜಿ ಸೈನಿಕನ ಫೋಟೋ ಶೇರ್ ಮಾಡಿದ ಗೌತಮ್ ಗಂಭೀರ್!

ನೆರವು ಬೇಡುವ ಮಾಜಿ ಸೈನಿಕನ ಫೋಟೋ ಶೇರ್ ಮಾಡಿದ ಗೌತಮ್ ಗಂಭೀರ್! | Oneindia Kannada
Gautam Gambhir Shares Photo of Army Veteran Begging in Delhi

ನವದೆಹಲಿ, ಫೆಬ್ರವರಿ 3: ನವದೆಹಲಿಯ ಕೊನ್ನಾಟ್ ಪ್ಲೇಸ್‌ನಲ್ಲಿ ಭಾರತೀಯ ಮಾಜಿ ಸೈನಿರೊಬ್ಬರು ನೆರವು ಬೇಡುತ್ತಿರುವ ಫೋಟೋವನ್ನು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸೈನಿಕನಿಗೆ ನೆರವು ನೀಡುವಂತೆ ರಕ್ಷಣಾ ಸಚಿವಾಲಯವನ್ನು ಗಂಭೀರ್ ಕೋರಿಕೊಂಡಿದ್ದಾರೆ.

ಟ್ವಿಟರ್ ಅಕೌಂಟ್‌ನಲ್ಲಿ ಸೈನಿಕನ ಫೋಟೋ ಹಾಕಿಕೊಂಡಿರುವ ಗಂಭೀರ್ ಜೊತೆಗೊಂದು ಸಾಲನ್ನೂ ಸೇರಿಸಿಕೊಂಡಿದ್ದಾರೆ. ಸಾಲಿನಲ್ಲಿ, 'ಈತ ನಿವೃತ್ತ ಹಿರಿಯ ಸೈನಿಕ. 'ತಾಂತ್ರಿಕ ಕಾರಣ'ದಿಂದ ರಕ್ಷಣ ಸಚಿವಾಲಯ ಇವರಿಗೆ ನೆರವು ನೀಡಿಲ್ಲ' ಎಂದು ಬರೆದುಕೊಂಡಿದ್ದಾರೆ.

'ಇವರು ಪ್ರೀತಾಂಬರನ್. 1965 &1971ರ ಯುದ್ಧಗಳಲ್ಲಿ ದೇಶದ ಪರ ಸೇವೆ ಸಲ್ಲಿಸಿದ್ದಾರೆ. ಇವರ ಗುರುತಿನ ಚೀಟಿ ಮೂಲಕ ಇದನ್ನು ಪರಿಶೀಲಿಸಬಹುದು' ಎಂದೂ ಬರೆದುಕೊಂಡಿರುವ ಗೌತಮ್, ಭಾರತೀಯ ರಕ್ಷಣಾ ಸಚಿವಾಲಯ ಇವರಿಗೆ ನೆರವು ನೀಡಬೇಕೆಂದು ಕೋರಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವಾಲಯ ಪ್ರೀತಾಂಬರನ್ ಗೆ ಇನ್ನಷ್ಟು ನೆರವಿನ ಭರವಸೆ ನೀಡಿದೆ. ಹಿಂದೆ ಪ್ರೀತಾಂಬರನ್‌ಗೆ ಹೇಗೆಲ್ಲ ನೆರವು ನೀಡಲಾಗಿದೆ ಎಂಬುದನ್ನೂ ವಿವರಿಸಿದೆ. ಭಾರತೀಯ ರಕ್ಷಣಾ ಸಚಿವಾಲದ ಪ್ರತಿಕ್ರಿಯೆಗೆ ಗಂಭೀರ್ ಟ್ವೀಟ್ ಮೂಲಕವೇ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Story first published: Sunday, February 3, 2019, 13:40 [IST]
Other articles published on Feb 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+