Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾ ಸೋಲಿಗೆ 3 ಪ್ರಮುಖ ಕಾರಣ ತಿಳಿಸಿದ ಗೌತಮ್ ಗಂಭೀರ್

Gautam Gambhir

ವಾಂಡರರ್ಸ್ ಮೈದಾನದಲ್ಲಿ ಮೊಟ್ಟ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಸೋತ ಟೀಂ ಇಂಡಿಯಾ ಭಾರೀ ಮುಖಭಂಗ ಎದುರಿಸಿತು. ಮೊದಲ ಟೆಸ್ಟ್ ಪಂದ್ಯ ಗೆದ್ದ ಭಾರತ ಎರಡನೇ ಪಂದ್ಯ ಗೆದ್ದು ಐತಿಹಾಸಿಕ ಸರಣಿ ಗೆಲ್ಲುವ ಕನಸು ಕಟ್ಟಿತ್ತು. ಆದ್ರೆ ದಕ್ಷಿಣ ಆಫ್ರಿಕಾದ ಪ್ರಬಲ ಪ್ರದರ್ಶನ ನಡುವೆ ಭಾರತ ಬೌಲಿಂಗ್ ಮಂಕಾಯಿತು.

ಟೀಂ ಇಂಡಿಯಾದ 240ರನ್‌ಗಳ ಗುರಿಯನ್ನ ಸುಲಭವಾಗಿ ಬೆನ್ನತ್ತಿದ ಆತಿಥೇಯರು ಇನ್ನೊಂದು ದಿನ ಬಾಕಿ ಇರುವಂತೆಯೇ ಗುರಿ ಮುಟ್ಟಿದರು. ಹೀಗೆ ಸುಲಭವಾಗಿ ಪಂದ್ಯ ಬಿಟ್ಟುಕೊಟ್ಟ ಭಾರತದ ಸೋಲಿಗೆ ಟೀಂ ಇಂಡಿಯಾ ಮಾಜಿ ಆಟಗಾರ ಗೌತವ್‌ ಗಂಭೀರ್ ಮೂರು ಕಾರಣಗಳನ್ನ ನೀಡಿದ್ದಾರೆ.

ಮೊಹಮ್ಮದ್ ಸಿರಾಜ್ ಫಿಟ್ ಇರಲಿಲ್ಲ

ಮೊಹಮ್ಮದ್ ಸಿರಾಜ್ ಫಿಟ್ ಇರಲಿಲ್ಲ

ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಮೈದಾನದಲ್ಲಿ ಅಂತಿಮ ದಿನದಾಟದಲ್ಲಿ ಭಾರತಕ್ಕೆ 122 ರನ್‌ಗಳನ್ನ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾದ 8 ವಿಕೆಟ್ ಉರುಳಿಸಲು ಅರ್ಧದಷ್ಟು ಸಾಧ್ಯವಾಗ್ಲಿಲ್ಲ. ಗಂಭೀರ್ ಪ್ರಕಾರ ಇದಕ್ಕೆ ಪ್ರಮುಖ ಕಾರಣ ಮೊಹಮ್ಮದ್ ಸಿರಾಜ್ 100 ಪ್ರತಿಶತ ಫಿಟ್ ಆಗಿದ್ದರೆ ನಾಯಕ ತನ್ನ ಇಬ್ಬರು ಪ್ರಮುಖ ವೇಗಿಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಒಮ್ಮೆ ಚೆಂಡು ಒದ್ದೆಯಾದರೆ, ಅಶ್ವಿನ್‌ಗೆ ಅದು ಸಹಾಯ ಮಾಡುವುದಿಲ್ಲ ಎಂದು ನಿಮಗೆ ತಿಳಿದಿದೆ. ಆದ್ದರಿಂದ ನೀವು ಕೇವಲ ಮೂರು ವೇಗಿಗಳು ಉಳಿದ ಎಂಟು ವಿಕೆಟ್‌ಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ತಪ್ಪು. ಹೀಗಾಗಿ ಭಾರತಕ್ಕೆ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.

ಬ್ಯಾಟಿಂಗ್ ವೈಫಲ್ಯವು ಸೋಲಿಗೆ ಕಾರಣ

ಬ್ಯಾಟಿಂಗ್ ವೈಫಲ್ಯವು ಸೋಲಿಗೆ ಕಾರಣ

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 202ರನ್ ಗಳಿಸುವ ಮೂಲಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಇದರೊಂದಿಗೆ ದಕ್ಷಿಣ ಆಫ್ರಿಕಾಗೆ ಸುಲಭವಾಗಿ ಲೀಡ್ ತೆಗೆದುಕೊಳ್ಳಲು ಸಾಧ್ಯವಾಯಿತು ತಂದು ಗಂಭೀರ್ ಹೇಳಿದ್ದಾರೆ. ಸೆಂಚುರಿಯನ್‌ನಲ್ಲಿ ಭಾರತ 350 ಕ್ಕೂ ಹೆಚ್ಚು ರನ್ ಗಳಿಸಿತು ಇದರಿಂದ ಆ ಟೆಸ್ಟ್​ನಲ್ಲಿ ಗೆಲುವು ಸಾಧಿಸಿತು. ಆದರೆ ಪ್ರತಿ ಬಾರಿಯೂ ಟೀಂ ಇಂಡಿಯಾ ಎದುರಾಳಿ ತಂಡಕ್ಕೆ 200 ರಿಂದ 220 ರನ್ ಗುರಿ ನೀಡಿ, ಬೌಲರ್‌ಗಳ ಮೇಲೆ ಗೆಲುವಿನ ಜವಾಬ್ದಾರಿ ಹೇರಲಾಗುವುದಿಲ್ಲ ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.

'' ನೀವು ಟಾಸ್ ಗೆದ್ದರೆ, ಬ್ಯಾಟಿಂಗ್ ಆಯ್ಕೆ ಮಾಡಿ, ನಂತರ 200 ಕ್ಕೆ ಆಲೌಟ್ ಆದ್ರೆ ನಿಮಗೆ ಸಿಕ್ಕಂತಹ ಎಲ್ಲಾ ಪ್ರಯೋಜನವನ್ನು ಕಳೆದುಕೊಳ್ಳುತ್ತೀರಿ. ಜೋಹಾನ್ಸ್‌ ಬರ್ಗ್ ಗೆಲುವು ಮತ್ತು ಸೆಂಚುರಿಯನ್ ಸೋಲಿನ ನಡುವಿನ ವ್ಯತ್ಯಾಸವೆಂದರೆ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಸ್ಕೋರ್. " ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಬೌಲರ್‌ಗಳ ಎತ್ತರ ಅನುಕೂಲ

ದಕ್ಷಿಣ ಆಫ್ರಿಕಾದ ಬೌಲರ್‌ಗಳ ಎತ್ತರ ಅನುಕೂಲ

ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಬೌನ್ಸ್ ಸಾಕಷ್ಟು ಹೆಚ್ಚಿರಲಿದ್ದು ಟೆನಿಸ್ ಚೆಂಡಿನಂತೆ ಪುಟಿಯುತ್ತದೆ. ಹೀಗಾಗಿ ಈ ಪಿಚ್ ಬಳಸಿಕೊಳ್ಳಲು ವೇಗಿಗಳಿಗೆ ಎತ್ತರ ಅನುಕೂಲಕವಾಗಿರುತ್ತದೆ. ಆತಿಥೇಯರು ನೈಸರ್ಗಿಕವಾಗಿ ಎತ್ತರದ ಮಾರ್ಕೊ ಜಾನ್ಸೆನ್ ಮತ್ತು ಲುಂಗಿ ಎನ್‌ಗಿಡಿ ಹೊಂದಿದ್ದರೂ, ಭಾರತವು ಅದೇ ಮಟ್ಟವನ್ನು ಹೊಂದಿರಲಿಲ್ಲ.

ಸಾಮಾನ್ಯವಾಗಿ ದಕ್ಷಿಣ ಆಫ್ರಿಕಾ ಬೌಲರ್ಸ್ ಎತ್ತರವಿರುವ ಕಾರಣ ಅವರು ಬೌಲಿಂಗ್ ಪೂರ್ಣ ಎಸೆತಗಳನ್ನು ಹೆಚ್ಚು ನೈಸರ್ಗಿಕವಾಗಿ ಹಾಕುತ್ತಾರೆ. ನೀವು ವೇಗದ ಬೌಲರ್‌ಗಳು ಎದುರಾಳಿ ಬ್ಯಾಟರ್‌ಗಳನ್ನು ಶಾರ್ಟ್ ಬಾಲ್‌ಗಳಿಂದ ಪರೀಕ್ಷಿಸಬೇಕು. ಆದರೆ ದಕ್ಷಿಣ ಆಫ್ರಿಕಾದ ವೇಗಿಗಳು ಬೌಲಿಂಗ್ ಮಾಡುವಾಗ, ಅವರು ಹೆಚ್ಚು ಎತ್ತರವನ್ನು ಹೊಂದಿರುವುದರಿಂದ ಚೆಂಡಿನ ಮೇಲೆ ಸಾಕಷ್ಟು ಪ್ರೆಶರ್ ಹಾಕುವ ಅಗತ್ಯವಿರಲಿಲ್ಲ. ಟೀಂ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಅವರಿಂದ ನೀವು ಅದನ್ನು ನಿರೀಕ್ಷಿಸಬಹುದು, ಆದರೆ ಈ ರೀತಿಯ ಎಸೆತಗಳು ಶಮಿಗೆ ಸ್ವಾಭಾವಿಕವಾಗಿ ಬರುವುದಿಲ್ಲ. ಆದ್ದರಿಂದ ಅವರ ಹೆಚ್ಚಿನ ಶಾರ್ಟ್ ಪಿಚ್ ಎಸೆತಗಳು ಕೀಪರ್‌ ತಲೆಯ ಮೇಲೆ ಹೋದವು. ಇದರಿಂದ ಹೆಚ್ಚು ಎಕ್ಸ್ರ್ಟಾ ರನ್​ಗಳು ಹೋದವು ಎಂದು ವಿವರಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ 50 ರಷ್ಟು ಬೆಡ್‌ಗಳ ಮೀಸಲಿಗೆ ಸೂಚನೆ-ಡಿಸಿ | Oneindia Kannada

Story first published: Saturday, January 8, 2022, 10:06 [IST]
Other articles published on Jan 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+