ಐಪಿಎಲ್ 2019: ಕೆಕೆಆರ್ ವಿರುದ್ಧ ಮತ್ತೆ ದಾಖಲೆ ಬರೆಯಲಿದ್ದಾರೆ ಕ್ರಿಸ್ ಗೇಲ್

ಕೋಲ್ಕತ್ತಾ, ಮಾರ್ಚ್ 27: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಜಯ ಗಳಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬುಧವಾರ (ಮಾರ್ಚ್ 27) ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಾದಾಡಲಿದೆ. ಈ ಪಂದ್ಯದಲ್ಲಿ ಪಂಜಾಬ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಮತ್ತೆ ದಾಖಲೆಗಳನ್ನು ಸೃಷ್ಟಿಸುವುದರಲ್ಲಿದ್ದಾರೆ.
ಐಪಿಎಲ್ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿದಿದ್ದ ಪಂಜಾಬ್‌ನಿಂದ ಗೇಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನುಭವಿ ಆಟಗಾರ ಗೇಲ್ 48 ಎಸೆತಗಳಿಗೆ 79 ರನ್ ಬಾರಿಸುವ ಮೂಲಕ ಐಪಿಎಲ್‌ನಲ್ಲಿ ವೇಗದ 4000 ರನ್‌ಗಾಗಿ ದಾಖಲೆ ನಿರ್ಮಿಸಿದ್ದರು.
ಕಿಂಗ್ಸ್ XI ಪಂಜಾಬ್ vs ಕೋಲ್ಕತ್ತಾ ನೈಟ್ ರೈಡರ್ಸ್ Live ಸ್ಕೋರ್‌ಕಾರ್ಡ್
ಬುಧವಾರ (ಮಾರ್ಚ 27) ಈಡನ್ ಗಾರ್ಡನ್ ನಲ್ಲಿ ನಡೆಯುವ ಪಂದ್ಯದಲ್ಲೂ ಗೇಲ್ ಬ್ಯಾಟ್ ಬೀಸಿದರೆ ಇನ್ನೊಂದಿಷ್ಟು ದಾಖಲೆಗಳಾಗುವುದರಲ್ಲಿದೆ. ಅಂಕಿ-ಅಂಶಗಳನ್ನು ಪರಿಶೀಲಿಸಿದರೆ ಈಡನ್ ಗಾರ್ಡನ್‌ನಲ್ಲಿ ಗೇಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವುದಕ್ಕೆ ದಾಖಲೆಗಳು ಸಿಕ್ಕುತ್ತವೆ.

ಈಡನ್ ಗಾರ್ಡನ್‌ನಲ್ಲಿ ಕಿಂಗ್
ಐಪಿಎಲ್ ತಾಣಗಳಲ್ಲಿ ಕ್ರಿಸ್‌ಗೇಲ್ ಅವರ ಈಡನ್ ಗಾರ್ಡನ್ ಸಾಧನೆ ಮುಂಚೂಣಿಯಲ್ಲಿದೆ. ಈಡನ್ ಗಾರ್ಡನ್‌ನಲ್ಲಿ 11 ಇನ್ನಿಂಗ್ಸ್‌ಗಳಲ್ಲಿ ಗೇಲ್ 160.71 ಸ್ಟ್ರೈಕ್ ರೇಟ್‌ನಂತೆ 540 ರನ್ ಕಲೆ ಹಾಕಿದ್ದಾರೆ. ಇದು ಬಿಟ್ಟರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಗೇಲ್ ಸಾಧನೆ ದ್ವಿತೀಯ ಸ್ಥಾನದಲ್ಲಿದೆ.

ಬೆಂಗಳೂರಿನ ಸಾಧನೆ ದ್ವಿತೀಯ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ನ 43 ಇನ್ನಿಂಗ್ಸ್‌ಗಳಲ್ಲಿ 159.21 ಸ್ಟ್ರೈಕ್ ರೇಟ್‌ನಂತೆ ಗೇಲ್ 1538 ರನ್ ಗಳಿಸಿದ್ದಾರೆ. ಹೈದರಾಬಾದ್‌ನ ರಾಜೀವ್‌ಗಾಂಧಿ ಸ್ಟೇಡಿಯಂನಲ್ಲಿನ ಸಾಧನೆ ತೃತೀಯ ಸ್ಥಾನದಲ್ಲಿದೆ. ಪಂಜಾಬ್ ಪರ 50ಕ್ಕೂ ಹೆಚ್ಚು ರನ್ ಸಾಧನೆಗಾಗಿ ಗೇಲ್ ಅವರು ಕೆಎಲ್ ರಾಹುಲ್ ಅವರನ್ನು ಹಿಂದಿಕ್ಕಿದ್ದಾರೆ.

ಪಂಜಾಬ್ ಪರ ಭರ್ಜರಿ ಬ್ಯಾಟಿಂಗ್
ಪಂಜಾಬ್ ಪರ ಗೇಲ್ 12 ಪಂದ್ಯಗಳಲ್ಲಿ 149.49 ಸ್ಟ್ರೈಕ್ ರೇಟ್‌ನಂತೆ 447 ರನ್ ನೊಂದಿಗೆ 50+ ರನ್ ಸಾಧನೆ ದಾಖಲೆ ಹೊಂದಿದ್ದರೆ, ರಾಹುಲ್ 15 ಪಂದ್ಯಗಳಲ್ಲಿ 157.85 ಸ್ಟ್ರೈಕ್ ರೇಟ್‌ನಂತೆ 663 ರನ್ ಸಾಧನೆ ಹೊಂದಿದ್ದಾರೆ. ಇನ್ನೊಂದು ಗಮ್ಮತ್ತಿನ ಸಂಗತಿಯೆಂದರೆ, ಈಡನ್ ಗಾರ್ಡನ್‌ನಲ್ಲಿ ಗೇಲ್ ಅವರು ಕೋಲ್ಕತ್ತಾ ವಿರುದ್ಧದ ಪಂದ್ಯಗಳಲ್ಲಿ ಅಬ್ಬರಿಸಿದಷ್ಟು ಇನ್ಯಾವ ತಂಡಗಳೆದುರೂ ಆರ್ಭಟಿಸಿಲ್ಲ!

4 ಅರ್ಧಶತಕ, 1 ಶಕ
ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೇಲ್ ಒಟ್ಟು 7 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 62*, 49, 96, 86 ಹೀಗೆ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ. ಜೊತೆಗೆ ಒಂದು ಸಾರಿ ಅಜೇಯ ಶತಕ (102 ರನ್) ಕೂಡ ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications