Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2024: ಮುಂಬೈ ತಂಡವನ್ನು 5 ಕೋಟಿಗೆ ಸೇರಿದ ದಕ್ಷಿಣ ಆಫ್ರಿಕಾ ವೇಗಿ

ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಜೆರಾಲ್ಡ್ ಕೋಟ್ಜಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಮುಂಬೈ ಇಂಡಿಯನ್ಸ್ ಸಫಲವಾಗಿದೆ.

ಈ ಸ್ಟಾರ್ ಪ್ಲೇಯರ್‌ನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಲಖನೌ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಸಹ ತಮ್ಮ ಬಾಜಿ ಕಟ್ಟಿದ್ದವು. ಆದರೆ ಮುಂಬೈ ಇಂಡಿಯನ್ಸ್‌ ದಕ್ಷಿಣ ಆಫ್ರಿಕಾ ಪ್ಲೇಯರ್‌ ಮೇಲೆ ಹೆಚ್ಚಿನ ಹಣವನ್ನು ಹೂಡಿ ಬಾಜಿ ಗೆದ್ದಿತು.

Gerald Coetzee Sold out to Mumbai Indians 5 Crores in IPL Mini Auction 2024


ಜೆರಾಲ್ಡ್ ಕೋಟ್ಜಿ ಪವರ್‌ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಅಲ್ಲದೆ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್‌ ಬೇಟೆ ನಡೆಸಬಲ್ಲರು. ಇವರ ಸಾಮರ್ಥ್ಯ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ವೇಳೆ ಅನಾವರ್ಣವಾಯಿತು. ಇವರು ದಕ್ಷಿಣ ಆಫ್ರಿಕಾ ಪರ ಏಕದಿನ ವಿಶ್ವಕಪ್‌ನಲ್ಲಿ ನಿರಂತರವಾಗಿ ಶಿಸ್ತು ಬದ್ಧ ದಾಳಿ ನಡೆಸಿದ್ದರು. ಅಲ್ಲದೆ ಇವರಿಗೆ ಐಪಿಎಲ್‌ ಹರಾಜಿನಲ್ಲಿ ಭಾರೀ ಹಣ ಹರಿದು ಬರುವ ಸಾಧ್ಯತೆ ಕಂಡು ಬಂದಿತು. ಅದರಂತೆ ಮುಂಬೈ ತಂಡ ಇವರನ್ನು 5 ಕೊಟಿ ನೀಡಿ ಬ್ಲ್ಯೂ ಜೆರ್ಸಿಯನ್ನು ನೀಡಿದೆ.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಈ ಯುವ ವೇಗದ ಬೌಲರ್ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ವೇಗದ ಬೌಲಿಂಗ್‌ನೊಂದಿಗೆ ಸ್ವಿಂಗ್ ಮಾಡಿ ಬ್ಯಾಟರ್‌ಗಳಿಗೆ ಕಾಟ ನೀಡಬಲ್ಲರು.

Story first published: Tuesday, December 19, 2023, 14:31 [IST]
Other articles published on Dec 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+