IND vs PAK: ಗಿಲ್, ಅಭಿಷೇಕ್ ಭರ್ಜರಿ ಜೊತೆಯಾಟ: ಭಾರತಕ್ಕೆ "ಸೂಪರ್" ಗೆಲುವು
ಭರವಸೆಯ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರುಗಳ ಭರ್ಜರಿ ಜೊತೆಯಾಟದ ನೆರವನಿಂದ ಟೀಮ್ ಇಂಡಿಯಾ 6 ವಿಕೆಟ್‌ಗಳಿಂದ ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿತು.
172 ರನ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಸೊಗಸಾದ ಬ್ಯಾಟಿಂಗ್ ನಡೆಸಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಪಾಕ್ ಬೌಲರ್ ಗಳು ವಿಫಲರಾದರು. ಈ ಜೋಡಿ ಟೀಮ್ ಇಂಡಿಯಾಕ್ಕೆ ಬೇಕಾದ ಆರಂಭವನ್ನು ನೀಡಿತು. ಪವರ್ ಪ್ಲೇನಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೆ 69 ರನ್ ಸೇರಿಸಿತು.

ಶುಭಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 9.5 ಓವರ್‌ಗಳಲ್ಲಿ 105 ರನ್ ಸೇರಸಿತು. ಈ ವೇಳೆ 8 ಬೌಂಡರಿ ನೆರವಿನಿಂದ 47 ರನ್ ಸಿಡಿಸಿದ್ದ ಶುಭಮನ್ ಗಿಲ್, ಫಹೀಮ್ ಅಶ್ರಫ್ ಎಸೆತದಲ್ಲಿ ಬೋಲ್ಡ್ ಆದರು. ನಾಯಕ ಸೂರ್ಯಕುಮಾರ್ ಯಾದವ್ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಅಭಿಷೇಕ್ ಶರ್ಮಾ
ಆರಂಭಿಕ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ 74 ರನ್ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅಜೇಯ 30, ಸಂಜು ಸ್ಯಾಮ್ಸನ್ 13 ರನ್ ಸಿಡಿಸಿದರು. ಅಂತಿಮವಾಗಿ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 174 ರನ್ ಸಿಡಿಸಿ ಜಯ ಸಾಧಿಸಿತು.
ಈ ಮೂಲಕ ಟೀಮ್ ಇಂಡಿಯಾ ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ಅಮೋಘ ಜಯ ದಾಖಲಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಆಟಗಾರ ಫಖರ್ ಜಮಾನ್ (15) ಬೇಗನೆ ಪೆವಿಲಿಯನ್ ಸೇರಿದರು. ಎರಡನೇ ವಿಕೆಟ್‌ಗೆ ಸಾಹಿಬ್‌ಜಾದಾ ಫರ್ಹಾನ್, ಸೈಮ್ ಅಯೂಬ್ ಜೋಡಿ 49 ಎಸೆತಗಳಲ್ಲಿ 72 ರನ್ ಸೇರಿಸಿತು. ಸೈಮ್ ಅಯೂಬ್ 21 ರನ್ ಸಿಡಿಸಿದರೆ, ಹುಸೇನ್ ತಲಾತ್ 10 ರನ್‌ಗೆ ಔಟ್ ಆದರು.
ಫರ್ಹಾನ್ ಅರ್ಧಶತಕ
ಓಪನರ್ ಸಾಹಿಬ್‌ಜಾದಾ ಫರ್ಹಾನ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. 5 ಬೌಂಡರಿ, 3 ಸಿಕ್ಸರ್ ನೆರವಿನಿಂದ ಇವರು 58 ರನ್ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಆಟಗಾರರು ತಮ್ಮ ಘನತೆಗೆ ತಕ್ಕ ಆಟವನ್ನು ಆಡಿದರು. ಪರಿಣಾಮ ಪಾಕ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಸೇರಿಸಿತು. ಭಾರತದ ಪರ ಆಲ್‌ರೌಂಡರ್ ಶಿವಂ ದುಬೆ 2 ವಿಕೆಟ್ ಪಡೆದರು. ಟೀಮ ಇಂಡಿಯಾ ಈ ಪಂದ್ಯದಲ್ಲಿ ನಾಲ್ಕು ಕ್ಯಾಚ್‌ಗಳನ್ನು ಬಿಟ್ಟುಕೈ ಸುಟ್ಟುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications