Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಿಲ್‌, ಇಶಾನ್‌ ಶತಕದ ಆಟ; ಅಫ್ಘಾನ್‌ ವಿರುದ್ಧ ಟೀಮ್ ಇಂಡಿಯಾ ಗೆಲುವಿನ ಓಟ

ಲಕ್ನೋ: ನಾಯಕ ಶುಭಮನ್‌ ಗಿಲ್ ಹಾಗೂ ಭರವಸೆಯ ಆಟಗಾರ ಇಶಾನ್‌ ಕಿಶನ್‌ ಅವರು ಬಾರಿಸಡಿದ ಶತಕದ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ 170 ರನ್‌ಗಳಿಂದ ಅಫ್ಘಾನಿಸ್ತಾನನ್ನು ಮಣಿಸಿದೆ. ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಉಳಿದಂತೆಯೇ ಗಿಲ್‌ ಪಡೆ ಸರಣಿ ಗೆಲುವಿನ ನಗೆ ಬೀರಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಆರಂಭಿಕರಾಗಿ ಆಡುವ ಅವಕಾಶ ಪಡೆದ ಯಶಸ್ವಿ ಜೈಸ್ವಾಲ್‌ ಅವರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ನಾಯಕ ಶುಭಮನ್‌ ಗಿಲ್‌ ಜೋಡಿ 67 ಎಸೆತಗಳಲ್ಲಿ 87 ರನ್‌ ಸೇರಿಸಿದರು. ಉತ್ತಮ ಲಯದಲ್ಲಿ ಕಂಡು ಬಂದಿದ್ದ ರೋಹಿತ್‌ ಶರ್ಮಾ 48 ರನ್‌ ಬಾರಿಸಿದ್ದಾಗ ರಶೀದ್ ಖಾನ್‌ಗೆ ವಿಕೆಟ್‌ ಒಪ್ಪಿಸಿದರು.

Gill And Kishan

ಇಶನ್‌, ಗಿಲ್‌ ದ್ವಿಶತಕದ ಜೊತೆಯಾಟ

ಮೂರನೇ ವಿಕೆಟ್‌ಗೆ ಇಶಾನ್‌ ಕಿಶನ್‌ ಹಾಗೂ ನಾಯಕ ಶುಭಮನ್‌ ಗಿಲ್‌ ಸೊಗಸಾದ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 141 ಎಸೆತಗಳಲ್ಲಿ 224 ರನ್‌ ಸೇರಿಸಿತು. ನಾಯಕ ಶುಭಮನ್ ಗಿಲ್‌ 22 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ 154 ರನ್‌ ಸೇರಿಸಿದರು. ಇಶಾನ್‌ ಕಿಶನ್‌ 79 ಎಸೆತಗಳಲ್ಲಿ 125 ರನ್‌ ಸೇರಿಸಿ ಮಿಂಚಿದರು. ಉಳಿದಂತೆ ಶ್ರೇಯಸ್ ಅಯ್ಯರ್ 26, ವಾಷಿಂಗ್ಟನ್‌ ಸುಂದರ್ 19 ರನ್‌ ಸಿಡಿಸಿದರು.

ಅಫ್ಘಾನಿಸ್ತಾನ್ ಪರ ನಂಗೆಯಾಲಿಯಾ ಖರೋಟೆ 4 ವಿಕೆಟ್‌ ಪಡೆದರು.

ಸವಾಲಿನ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಇಬ್ರಾಹಿಂ ಜರ್ಡನ್‌ ಹಾಗೂ ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ರಹಮಾನುಲ್ಲಾ ಗುರ್ಬಾಜ್ ಎರಡನೇ ಏಕದಿನ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ 52 ರನ್‌ ಸೇರಿಸಿತು. ರಹಮಾನುಲ್ಲಾ ಗುರ್ಬಾಜ್ 7 ಬೌಂಡರಿ, 1 ಸಿಕ್ಸರ್‌ ಸಹಿತ 41 ರನ್‌ ಸಿಡಿಸಿದರು. ಇಬ್ರಾಹಿಂ ಜರ್ಡನ್‌ 21 ರನ್‌ ಸೇರಿಸಿ ಔಟ್ ಆದರು.

ವೇಗಿಗಳ ಕಮಾಲ್ ದಾಳಿ

ಸೆಡಿಕುಲ್ಲಾ ಅತಲ್ ಹಾಗೂ ರಹಮತ್ ಶಾ ಜೋಡಿ 60 ರನ್‌ ಸೇರಿಸಿತು. ಸೆಡಿಕುಲ್ಲಾ ಅತಲ್ 42 ರನ್‌ ಸೇರಿಸಿದರು. ಮಧ್ಯಮ ಕ್ರಮಾಂಕದಲ್ಲಿ ರಹಮತ್ ಶಾ 89 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 79 ರನ್‌ ಬಾರಿಸಿದರು. ಕೆಳ ಕ್ರಮಾಂಕದಲ್ಲಿ ರಶೀದ್ ಖಾನ್ 12 ರನ್‌ ಸಿಡಿಸಿ ಔಟ್ ಆದರು. ಅಂತಿಮವಾಗಿ ಅಫ್ಘಾನ್‌ 44.3 ಓವರ್‌ಗಳಲ್ಲಿ 232 ರನ್‌ ಸೇರಿಸಿ ಆಲೌಟ್ ಆಯಿತು.

ಟೀಮ್ ಇಂಡಿಯಾದ ವೇಗಿ ಅರ್ಷದೀಪ್‌ ಸಿಂಗ್‌ , ಗುರ್ನೂರ್ ಬ್ರಾರ್ ತಲಾ 3 ವಿಕೆಟ್‌ ಕಬಳಿಸಿದರು. ಪದಾರ್ಪಣಾ ಪಂದ್ಯವನ್ನು ಆಡಿದ ಪ್ರಿನ್ಸ್‌ ಯಾದವ್ 2 ವಿಕೆಟ್‌ ಕಬಳಿಸಿ ಮಿಂಚಿದರು.

ಮೂರನೇ ಪಂದ್ಯ ಶನಿವಾರ ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆಯಲಿದೆ.

Story first published: Wednesday, June 17, 2026, 22:40 [IST]
Other articles published on Jun 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+