ಕ್ರಿಕೆಟ್ ಜೀವನವೇ ಅಂತ್ಯವಾಗುತ್ತಿತ್ತು : ಗಾಯಗೊಂಡ ಘಟನೆಯನ್ನು ವಿವರಿಸಿದ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕಾಲಿನ ಗಾಯಕ್ಕೆ ಕಾರಣವಾದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 2022ರ ಟಿ20 ವಿಶ್ವಕಪ್ ನಂತರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸ್ನೇಹಿತನನ್ನು ಬೆನ್ನಟ್ಟುವ ಸಮಯದಲ್ಲಿ ಎಡಗಾಲು ಮುರಿದುಕೊಂಡಿದ್ದರು. ಘಟನೆಯ ನಂತರದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದರೂ, ಬಿಗ್ ಬ್ಯಾಷ್ ಲೀಗ್‌ನ ನಡೆಯುತ್ತಿರುವ ಆವೃತ್ತಿಯಿಂದ ಆಲ್‌ರೌಂಡರ್‌ನನ್ನು ಹೊರಗಿಡಲಾಯಿತು.
ಅಂದಿನಿಂದ ಕೂಡ ಮ್ಯಾಕ್ಸ್‌ವೆಲ್ ವಿಶ್ರಾಂತಿ ಪಡೆಯುತ್ತಿದ್ದು, ಸಂಪೂರ್ಣವಾಗಿ ಫಿಟ್ ಆಗಲು ಇನ್ನೂ ಎರಡು ಮೂರು ತಿಂಗಳು ಸಮಯ ಬೇಕು ಎನ್ನಲಾಗಿದೆ. ಅಂದು ನಡೆದ ಘಟನೆಯ ಸಂಪೂರ್ಣ ಮಾಹಿತಿಯನ್ನು ಮ್ಯಾಕ್ಸ್‌ವೆಲ್ ಹಂಚಿಕೊಂಡಿದ್ದಾರೆ. ಸ್ವಲ್ಪ ಯಾಮಾರಿದ್ದರೂ ಕಾಲು ಮುರಿದುಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.
ಸ್ನೇಹಿತ ಆಕಸ್ಮಿಕವಾಗಿ ಜಾರಿ ಮ್ಯಾಕ್ಸ್‌ವೆಲ್ ಕಾಲಿನ ಮೇಲೆ ಬಿದ್ದಿದ್ದಾರೆ, ಅವರ ದೇಹದ ಸಂಪೂರ್ಣ ಭಾರ ಮ್ಯಾಕ್ಸ್‌ವೆಲ್ ಕಾಲಿನ ಮೇಲೆ ಬಿದ್ದ ಕಾರಣ, ಎಡಗಾಲು ಮುರಿತಕ್ಕೆ ಕಾರಣವಾಯಿತು. ಒಂದು ವೇಳೆ ಇದು ಸ್ವಲ್ಪ ತೀವ್ರವಾಗಿದ್ದರೂ ನನ್ನ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸುತ್ತಿತ್ತು ಎಂದು ಮ್ಯಾಕ್ಸ್‌ವೆಲ್ ಫಾಕ್ಸ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
"ನಾನು ಬಹುಶಃ ನನ್ನ ಪಾದವನ್ನು ಕಳೆದುಕೊಳ್ಳುವ ಅವಕಾಶ ಇತ್ತು. ಆ ಘಟನೆ ತುಂಬಾ ಭಯಾನಕವಾಗಿತ್ತು. ಈಗ ನನಗೆ ನಡೆದಾಡಲು ಕೂಡ ಕಷ್ಟವಾಗುತ್ತಿದೆ. ನಡೆಯುವುದನ್ನು ಪ್ರಾರಂಭಿಸಬೇಕಿದೆ" ಎಂದು ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ.

ಸಂಪೂರ್ಣ ವಿಶ್ರಾಂತಿಯಲ್ಲಿರುವ ಮ್ಯಾಕ್ಸ್‌ವೆಲ್
ಅಂದಿನ ಘಟನೆಯಲ್ಲಿ ಮ್ಯಾಕ್ಸ್‌ವೆಲ್ ಕಾಲಿನ ಫೈಬುಲಾ ಮುರಿತವಾಗಿದೆ, ಪಾದದ ಹಲವಾರು ಅಸ್ಥಿರಜ್ಜುಗಳಲ್ಲಿ ಛಿದ್ರಗೊಂಡಿರುವುದನ್ನು ಗುರುತಿಸಲಾಗಿದೆ. ಶಸ್ತ್ರ ಚಿಕಿತ್ಸೆಯ ನಂತರ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ. ಊರುಗೋಲಿನ ಸಹಾಯದಿಂದ ಅವರು ನಡೆದಾಡುತ್ತಿದ್ದಾರೆ.
ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೂ ಮ್ಯಾಕ್ಸ್‌ವೆಲ್ ಬಿಗ್ ಬ್ಯಾಷ್ ಲೀಗ್‌ಗಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸಾರ ತಂಡದಲ್ಲಿರುವ ಅವರು ಅನಿಸಿಕೆ, ಅಭಿಪ್ರಾಯ ಹಂಚಿಕೊಳ್ಳುತ್ತಾರೆ.
AUS Vs SA 2nd Test: 100ನೇ ಟೆಸ್ಟ್ ಪಂದ್ಯದಲ್ಲಿ 200 ರನ್ ಗಳಿಸಿ ಇತಿಹಾಸ ನಿರ್ಮಿಸಿದ ಡೇವಿಡ್ ವಾರ್ನರ್

ಐಪಿಎಲ್ ವೇಳೆಗೆ ಪೂರ್ತಿ ಫಿಟ್
2023ರ ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ ನಡೆಯುವ ಏಕದಿನ ಸರಣಿ ವೇಳೆಗೆ ಫಿಟ್ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಂತರ ಆಸ್ಟ್ರೇಲಿಯಾ ಭಾರತದ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಮಾರ್ಚ್ 17 ರಂದು ಮೊದಲನೇ ಏಕದಿನ ಪಂದ್ಯ ನಡೆಯಲಿದೆ.
ಭಾರತದ ವಿರುದ್ಧದ ಏಕದಿನ ಸರಣಿಯ ನಂತರ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಮ್ಯಾಕ್ಸ್‌ವೆಲ್ ಆಡಲಿದ್ದಾರೆ. ಆಲ್‌ರೌಂಡರ್ ಮ್ಯಾಕ್ಸ್‌ವೆಲ್ ಆರ್ ಸಿಬಿ ತಂಡದ ಪ್ರಮುಖ ಆಟಗಾರ, ಅವರು ಗಾಯಗೊಂಡಿದ್ದರೂ ಕೂಡ ಅವರನ್ನು ತಂಡದಿಂದ ಬಿಡುಗಡೆ ಮಾಡಿಲ್ಲ, ಐಪಿಎಲ್ ವೇಳೆಗೆ ಅವರು ಸಂಪೂರ್ಣವಾಗಿ ಗುಣಮುಖರಾಗಲಿದ್ದಾರೆ ಎಂದು ಆರ್ ಸಿಬಿ ಸಿಬ್ಬಂದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪತ್ನಿಯ ಬೆಂಬಲಕ್ಕೆ ಧನ್ಯವಾದ ಎಂದ ಮ್ಯಾಕ್ಸ್‌ವೆಲ್
"ನನ್ನ ಪತ್ನಿ ನನಗೆ ನಂಬಲಾಗದಷ್ಟು ಬೆಂಬಲ ನೀಡುತ್ತಿದ್ದಾಳೆ. ಒಂದೂವರೆ ತಿಂಗಳಿನಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ಈ ನೋವಿನಿಂದ ಬೇಗ ಹೊರಬರಲು ಅವರು ಸಹಾಯ ಮಾಡಿದ್ದಾರೆ" ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
"ಈಗ ಸ್ವಲ್ಪ ಆರಾಮದಾಯಕವಾಗಿ ನಡೆಯಲು ಆರಂಭಿಸುತ್ತಿದ್ದೇನೆ. ಇನ್ನೂ ಕೆಲವು ದಿನಗಳಲ್ಲಿ ಊರುಗೋಲಿನ ಅವಶ್ಯಕತೆ ಇಲ್ಲದೆ ಓಡಾಡುತ್ತೇನೆ. ಆದಷ್ಟು ಬೇಗನೆ ಚೇತರಿಸಿಕೊಳ್ಳುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.
ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ಪರ ಕೊನೆಯ ಬಾರಿಗೆ ಆಡಿಲೇಡ್ ಓವಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಅಂತಿಮ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ಆಡಿದರು. ಆಸ್ಟ್ರೇಲಿಯಾ 2022ರ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications