Glenn Maxwell: ಟೈಟಾನ್ಸ್ ವಿರುದ್ಧ ಸೊನ್ನೆ ಸುತ್ತಿದ ಗ್ಲೇನ್ ಮ್ಯಾಕ್ಸ್‌ವೆಲ್ ದಾಖಲೆ
ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ಮುಂದುವರೆಸಿದ್ದಾರೆ. 18ನೇ ಆವೃತ್ತಿಯ 5ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪರ, ಮೊದಲ ಪಂದ್ಯವನ್ನು ಆಡಿದ ಗ್ಲೇನ್ ಮ್ಯಾಕ್ಸ್‌ವೆಲ್ ಬೇಡದ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಮ್ಯಾಕ್ಸ್‌ವೆಲ್ ಗೋಲ್ಡನ್ ಡಕ್ ಆದ್ರು.
ಪಂದ್ಯದ 10.3 ಓವರ್‌ಗಳಲ್ಲಿ ಅಫ್ಘಾನಿಸ್ತಾನದ ಅಜ್ಮತುಲ್ಲಾ ಓಮರ್ಜಾಯಿ (16 ರನ್) ಅವರಿಗೆ ಸಾಯಿ ಕಿಶೋರ್ ತೋಡಿದ ಖೆಡ್ಡಾಗೆ ಬಲಿಯಾದ್ರು. ಇವರು ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಗ್ಲೇನ್ ಮ್ಯಾಕ್ಸ್‌ವೆಲ್ ಸಹ ಸಾಯಿ ಕಿಶೋರ್ ಅವರಿಗೆ ಔಟ್ ಆಗಿದ್ದಾರೆ. ಈ ಮೂಲಕ ತಾವಾಡಿದ ಮೊದಲ ಪಂದ್ಯದಲ್ಲಿ ಗ್ಲೇನ್ ಮ್ಯಾಕ್ಸ್‌ವೆಲ್ ಔಟ್ ಆದರು. ಈ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಸೊನ್ನೆ ಸುತ್ತಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

36 ವರ್ಷ ವಯಸ್ಸಿನ ಗ್ಲೇನ್ ಮ್ಯಾಕ್ಸ್‌ವೆಲ್ ಅಭ್ಯಾಸ ಪಂದ್ಯದಲ್ಲಿ ಭರವಸೆ ಮೂಡಿಸಿದ್ರು. ಆದರೆ ಈ ಫಾರ್ಮ್‌ನ್ನು ಐಪಿಎಲ್‌ನಲ್ಲಿ ಮುಂದುವರೆಸುವಲ್ಲಿ ವಿಫಲರಾದರು. ಸ್ಪಿನ್ ಬೌಲರ್ ಸಾಯಿ ಕಿಶೋರ್ ಅವರ ಬೌಲ್‌ನ್ನು ಸ್ವೀಪ್ ಶಾಟ್ ಬಾರಿಸಲು ಹೋಗಿ ವಿಕೆಟ್ ಒಪ್ಪಿಸಿದರು.
ಮ್ಯಾಕ್ಸ್‌ವೆಲ್ ಶೂನ್ಯ ಸಾಧನೆ
ಗುಜರಾತ್ ವಿರುದ್ಧ ಮ್ಯಾಕ್ಸ್‌ವೆಲ್ ಸೊನ್ನೆ ಸುತ್ತಿದ ಮ್ಯಾಕ್ಸ್‌ವೆಲ್, ರೋಹಿತ್ ಶರ್ಮಾ ಅವರ ದಾಖಲೆಯನ್ನು ಮೀರಿ ನಿಂತರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಸೊನ್ನೆ ಸುತ್ತಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಇವರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರನ್ನು ಆರ್‌ಸಿಬಿ ಹರಾಜಿನ ಅಂಗಳಕ್ಕೆ ಬಿಟ್ಟಿತ್ತು.
ಆರ್‌ಸಿಬಿಯಿಂದ ಕೈ ಬಿಟ್ಟ ಆಟಗಾರನನ್ನು 4.2 ಕೋಟಿ ನೀಡಿ ಪಂಜಾಬ್ ಕಿಂಗ್ಸ್ ಖರೀದಿಸಿತ್ತು. ಇದಕ್ಕೂ ಮೊದಲು 3 ಆವೃತ್ತಿಯನ್ನು ಪಂಜಾಬ್ ಪರ ಆಡಿ ಸೈ ಎನಿಸಿಕೊಂಡಿದ್ದರು. ಈ ಮೂಲಕ ಗ್ಲೇನ್ ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ಒಟ್ಟು 19ನೇ ಬಾರಿ ಶೂನ್ಯಕ್ಕೆ ಔಟ್ ಆದ ಸಾಧನೆ ಮಾಡಿದ್ದಾರೆ. ಇವರು ಐಪಿಎಲ್‌ನಲ್ಲಿ ಆಡಿದ 135 ಪಂದ್ಯಗಳಲ್ಲಿ 19 ಬಾರಿ ಸೊನ್ನೆಗೆ ಔಟ್ ಆಗಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಇದ್ದು ಇವರು 257 ಐಪಿಎಲ್ ಪಂದ್ಯಗಳಲ್ಲಿ 18 ಬಾರಿ ಸೊನ್ನೆ ಸುತ್ತಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ 258 ಪಂದ್ಯಗಳಲ್ಲಿ 18 ಬಾರಿ ಶೂನ್ಯ ಸಂಪಾದನೆ ಮಾಡಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 243 ರನ್ ಸಿಡಿಸಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ 42 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್ ನೆರವಿನಿಂದ ಅಜೇಯ 97 ರನ್ ಸಿಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications