
ಟಾಸ್ ಗೆದ್ದಿದ್ದ ಭಾರತ ಬ್ಯಾಟಿಂಗ್
ಅಂದಹಾಗೆ, ಆ ಮೊದಲ ಏಕದಿನ ಪಂದ್ಯ ಐವತ್ತು ಓವರ್ ಗಳದ್ದಾಗಿರಲಿಲ್ಲ. ಆಗೆಲ್ಲಾ ಏಕದಿನ ಪಂದ್ಯವೆಂದರೆ 40 ಓವರ್ ಗಳು ಮಾತ್ರ. ಆ ಮಾದರಿಯ ಆ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ಆರಂಭಿಕ ಆಟಗಾರ ಚೇತನ್ ಚೌಹಾನ್ ಅವರನ್ನು ಬೇಗನೇ ಕಳೆದುಕೊಂಡಿತ್ತು.

ಆಗ ಆಸರೆಯಾಗಿದ್ದು ಸುರಿಂದರ್ ಹಾಗೂ ವೆಂಗ್ ಸರ್ಕಾರ್
ಚೌಹಾನ್ ಹಿಂದೆಯೇ, ಅಂಶುಮನ್ ಗಾಯಕ್ವಾಡ್, ಜಿ. ವಿಶ್ವನಾಥ್ ಬೇಗನೇ ವಿಕೆಟ್ ಒಪ್ಪಿಸಿದ್ದರು. ಬೌಲರ್ ಗಳ ಪೈಕಿ ಕಪಿಲ್ ದೇವ್ ಬಿಟ್ಟರೆ ಯಾರೂ ಆಡಲಿಲ್ಲ. ಕಪಿಲ್ ಕೂಡಾ ಗಳಿಸಿದ್ದು ಕೇವಲ 16 ರನ್.
ಭಾರತೀಯ ಬ್ಯಾಟಿಂಗ್ ಹೀಗೆ ದುಃಸ್ಥಿತಿಯಲ್ಲಿದ್ದಾಗ ತಂಡಕ್ಕೆ ಆಸರೆಯಾದವರೇ ಸುರಿಂದರ್ ಅಮರ್ ನಾಥ್, ದಿಲೀಪ್ ವೆಂಗ್ ಸರ್ಕಾರ್[ಭಾರತ- ಪಾಕ್ ಕ್ರಿಕೆಟ್ ಕದನ ಟಾಪ್ 5 ಪಂದ್ಯಗಳು]

ಶಕ್ತಿ ತುಂಬಿತು ಅವರ ಅರ್ಧಶತಕ
ಆದರೆ, ತಂಡದ ಇನಿಂಗ್ಸ್ ಗೆ ಶಕ್ತಿ ತುಂಬಿದ್ದು ಮೊಹಿಂದರ್ ಅಮರ್ ನಾಥ್. ಮಧ್ಯಮ ಕ್ರಮಾಂಕದಲ್ಲಿ ಆಗಮಿಸಿ 61 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 51 ರನ್ ಗಳಿಸಿದ ಅವರು, ತಂಡದ ಮೊತ್ತ 170 ರನ್ ಗೆ ಬಂದು ನಿಲ್ಲಲು ಕಾರಣರಾದರು.

ಮಾಜಿದ್-ಜಹೀರ್ ಜುಗಲ್ ಬಂದಿ
ಭಾರತ ತಂಡ ನೀಡಿದ್ದ ಸವಾಲನ್ನು ಬೆನ್ನಟ್ಟಲು ಕ್ರೀಸ್ ಗೆ ಇಳಿದ ಪಾಕಿಸ್ತಾನವು, ಆರಂಭಿಕ ಮುದಸ್ಸರ್ ನಾಜರ್ ಅವರನ್ನು ಬೇಗನೇ ಕಳೆದುಕೊಂಡಿತಾದರೂ, ಮತ್ತೊಬ್ಬ ಆರಂಭಿಕ ಮಾಜಿದ್ ಖಾನ್ ಅವರ ಆಕರ್ಷಕ 50 ರನ್ ಹಾಗೂ ಮೂರನೇ ಕ್ರಮಾಂಕದ ಜಹೀರ್ ಅಬ್ಬಾಸ್ (26) ಅವರು 2ನೇ ವಿಕೆಟ್ ಗೆ 60 ರನ್ ಪೇರಿಸಿ ಭಾರತದ ಗೆಲುವಿಗೆ ಸಂಚಕಾರ ತಂದಿದ್ದರು.[ಭಾರತ-ಪಾಕ್ ಮುಖಾಮುಖಿ: ಇತಿಹಾಸ ಹೇಳುವ 5 ಮಹತ್ವದ ಅಂಶ]

ಜಹೀರ್-ಮುಷ್ತಾಕ್ ನಿರ್ಗಮನದ ನಂತರ ಕುಸಿದ ಪಾಕ್
ಪಾಕಿಸ್ತಾನದ ಆರಂಭಿಕ ಮುದ್ದಸ್ಸರ್ ಹಾಗೂ ಮೂರನೇ ಕ್ರಮಾಂಕದ ಮಾಜಿದ್ ಇಬ್ಬರೂ ಭಾರತ ತಂಡದ ಬೌಲರ್ ಗಳ ಸಹನೆ ಪರೀಕ್ಷೆ ಮಾಡುತ್ತಿದ್ದಾಗಲೇ ಈ ಪಂದ್ಯಕ್ಕೆ ತಿರುವು ತಂದುಕೊಟ್ಟಿದ್ದು ಮೊಹಿಂದರ್ ಅಮರ್ ನಾಥ್. ಮೊದಲಿಗೆ ಜಹೀರ್ ಅಬ್ಬಾಸ್ ಅವರನ್ನು ಪೆವಿಲಿಯನ್ ಗೆ ಅಟ್ಟಿದ ಅವರು, ಆನಂತರ ಮುಷ್ತಾಕ್ ಅವರನ್ನು ಕ್ರೀಸ್ ನಿಂದ ಆಚೆ ನೂಕಿದರು.
ಅಲ್ಲಿಂದ ಮುಂದಕ್ಕೆ ಪಾಕಿಸ್ತಾನದ ಬ್ಯಾಟಿಂಗ್ ಲೈನಪ್ ಕುಸಿತ ಕಂಡಿತು. ಬಿಷನ್ ಸಿಂಗ್ ಬೇಡಿ 2 ವಿಕೆಟ್ (ಜವೇದ್ ಮಿಯಾಂದಾದ್ - 6 ರನ್, ಹಸನ್ ಜಮಿಲ್ - 16 ರನ್) ಗಳಿಸಿದರೆ, ಕಪಿಲ್ ದೇವ್ 1 ವಿಕೆಟ್ (ಇಮ್ರಾನ್ ಖಾನ್ - 2 ರನ್) ಗಳಿಸಿದರು. ಅಂತಿಮವಾಗಿ, ಪಾಕಿಸ್ತಾನ 40 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಕೇವಲ 4 ರನ್ ಗಳಿಂದ ಸೋಲು ಕಂಡಿತ್ತು.
ಬ್ಯಾಟಿಂಗ್ ನಲ್ಲಿ ಅರ್ಧಶತಕ ಗಳಿಸಿದ್ದಲ್ಲದೆ, ಬೌಲಿಂಗ್ ನಲ್ಲಿಯೂ 2 ಪ್ರಮುಖ ವಿಕೆಟ್ ಕಬಳಿಸಿ ಪಂದ್ಯಕ್ಕೆ ತಿರುವು ತಂದ ಕಾರಣಕ್ಕಾಗಿ ಅಮರ್ ನಾಥ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.[ಮಿಯಾಂದಾದ್ ಹೊಡೆದ ಲಾಸ್ಟ್ ಬಾಲ್ ಸಿಕ್ಸ್, ವಿಲನ್ ಆದ ಚೇತನ್ ಶರ್ಮಾ]


Click it and Unblock the Notifications