ಬೌಲರ್ ಗಳಿಗೆ ದೇವರ ಸಹಾಯ ಬೇಕೆಂದ ಕ್ರಿಕೆಟ್ ದೇವರು
ದುಬೈ, ಫೆ. 11: ಈ ಬಾರಿಯ ವಿಶ್ವಕಪ್ ನಲ್ಲಿ ಬೌಲರ್ ಗಳಿಗೆ ದೇವರ ಸಹಾಯ ಅಗತ್ಯ! ಹೀಗೆಂದು ಹೇಳಿದ್ದು ಸ್ವತಃ ಕ್ರಿಕೆಟ್ ದೇವರು.
ಹೊಸ ಫೀಲ್ಡಿಂಗ್ ನಿಯಮಗಳ ಹಿನ್ನೆಲೆಯಲ್ಲಿ ಬೌಲರ್ ಗಳು ಸಂಕಷ್ಟ ಎದುರಿಸಬೇಕಾಗಿ ಬಂದಿದೆ ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಅಂದು ಕಪಿಲ್ ಸಿಡಿಯದಿದ್ದರೆ ವಿಶ್ವಕಪ್ ದಕ್ಕುತ್ತಿರಲಿಲ್ಲ]

ವಿಶ್ವಕಪ್ ಹೊಸ ಫೀಲ್ಡಿಂಗ್ ನಿಯಮಾವಳಿಗೆ ಬದ್ಧವಾಗಿ ನಡೆಯಲಿದೆ. ಕೇವಲ ನಾಲ್ಕು ಜನ ಮಾತ್ರ 30 ಯಾರ್ಡ್ ಹೊರಗಡೆ ಇರಬಹುದು. ಇದು ಬ್ಯಾಟ್ಸಮನ್ ಗಳಿಗೆ ನೆರವಾಗುವುದರಲ್ಲಿ ಅನುಮಾನವಿಲ್ಲ ಎಂದು ಮಾಸ್ಟರ್ ಹೇಳಿದ್ದಾರೆ.
ನನ್ನ ಸುದೀರ್ಘ ಬ್ಯಾಟಿಂಗ್ ಪ್ರಯಾಣದಲ್ಲೇ ಇಂಥ ನಿಯಮಾವಳಿ ನೋಡಿಲ್ಲ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ನಡೆಯಲಿರಯವ ಪಂದ್ಯಾವಳಿ ಬೌಲರ್ ಗಳನ್ನು ಕಾಡಲಿದೆ ಎಂದು ಏಕದಿನ ಕ್ರಿಕೆಟ್ ರನ್ ಸರದಾರ ಐಸಿಸಿ ವೆಬ್ ಸೈಟ್ ಗೆ ಬರೆದ ಅಂಕಣವೊಂದರಲ್ಲಿ ಹೇಳಿದ್ದಾರೆ.[ಕೊನೆ ವಿಶ್ವಕಪ್ ಆಡಲಿರುವ ಟಾಪ್ 10 ಸ್ಟಾರ್ ಕ್ರಿಕೆಟರ್ಸ್]
ಬೌಲರ ಗಳ ನಿಜವಾದ ತಾಕತ್ತು ಇಲ್ಲಿ ಪ್ರದರ್ಶನವಾಗಲಿದೆ. ಕ್ರೀಸ್ ನಲ್ಲಿರುವ ಎರಡು ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಆರಂಭಿಸಿದರೆ ಬೌಲರ್ ಗಳ ಕತೆ ಮುಗಿದಂತೆಯೇ. ಹೊಸ ನೀತಿ ಯಾವ ಪರಿಣಾಮ ಉಂಟುಮಾಡುತ್ತದೆ ಎಂಬುದಕ್ಕೆ ವಿಶ್ವಕಪ್ ಉತ್ತರ ಹೇಳಲಿದೆ ಎಂದು ಆರು ವಿಶ್ವಕಪ್ ಆಡಿರುವ ದಾಖಲೆ ಹೊಂದಿರುವ ಸಚಿನ್ ಹೇಳಿದ್ದಾರೆ.
Story first published: Wednesday, January 3, 2018, 10:12 [IST]
Other articles published on Jan 3, 2018
Read in English: God help the WC bowlers, says Sachin
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications