For Quick Alerts
ALLOW NOTIFICATIONS  
For Daily Alerts
 

ಸಚಿನ್‌, ಗವಾಸ್ಕರ್‌ ದಾಖಲೆಯನ್ನು ಅಳಿಸಲು ವಿರಾಟ್‌ಗೆ ಗೋಲ್ಡನ್‌ ಚಾನ್ಸ್‌

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ತವರಿನಲ್ಲಿ ಅಬ್ಬರಿಸೂವ ಮೂಲಕ ಅನೇಕ ದಿಗ್ಗಜ ಆಟಗಾರರ ದಾಖಲೆಯನ್ನು ಅಳಿಸಿ ಹಾಕುವ ಸೂಚನೆ ನೀಡಿದ್ದಾರೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್‌ ಸರಣಿಯಲ್ಲಿ ವಿರಾಟ್ ಕೊಹ್ಲಿ ಸ್ಥಿರ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದ್ದರು. ಅಲ್ಲದೆ 14 ತಿಂಗಳ ಬಳಿಕ ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಪರ ಕಣಕ್ಕೆ ಇಳಿದಿರುವ ವಿರಾಟ್‌ ಅಟ್ಯಾಕಿಂಗ್ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ.

ಜನವರಿಯಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್‌ಗಳ ಸರಣಿಯಲ್ಲಿ ಟೀಂ ಇಂಡಿಯಾದ ನಂಬರ್ ಒನ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹಲವು ದೊಡ್ಡ ದಾಖಲೆ ಬರೆಯುವ ಅವಕಾಶವನ್ನು ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ 2000 ರನ್ ಪೂರೈಸಲು ವಿರಾಟ್ ಕೊಹ್ಲಿ ಕೇವಲ 9 ರನ್‌ಗಳ ಅಂತರದಲ್ಲಿದ್ದಾರೆ. ವಿರಾಟ್ ಕೊಹ್ಲಿ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ತೋರಿದ ಫಾರ್ಮ್ ಅನ್ನು ನೋಡಿದರೆ, ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಅನೇಕ ರೆಕಾರ್ಡ್‌ಗಳಿಗೆ ತಮ್ಮ ಹೆಸರನ್ನು ನಮೂದಿಸಬಹುದು ಎಂದು ಅಂದಾಜಿಸಲಾಗುತ್ತಿದೆ.

Golden chance for Virat to erase Sachin, Gavaskar record

ವಿರಾಟ್ ಕೊಹ್ಲಿ ಹೊರತು ಪಡಿಸಿದರೆ, ಇದಕ್ಕೂ ಮೊದಲು, ಭಾರತ ಮತ್ತು ಇಂಗ್ಲೆಂಡ್‌ನ ಕೇವಲ ನಾಲ್ವರು ಆಟಗಾರರು ಮಾತ್ರ ಟೆಸ್ಟ್ ಕ್ರಿಕೆಟ್‌ನಲ್ಲ 2000 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ, ಅವರು 53 ಇನ್ನಿಂಗ್ಸ್‌ಗಳಲ್ಲಿ 2535 ರನ್ ಗಳಿಸಿದ್ದಾರೆ. ಭಾರತದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜೋ ರೂಟ್ ಅಗ್ರಸ್ಥಾನದಲ್ಲಿದ್ದಾರೆ. ಜೋ ರೂಟ್ ಭಾರತದ ವಿರುದ್ಧ 45 ಇನ್ನಿಂಗ್ಸ್‌ಗಳಲ್ಲಿ 2526 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿಗೆ ಸೂವರ್ಣ ಅವಕಾಶ

ಈ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಹೆಸರು ಎರಡನೇ ಸ್ಥಾನದಲ್ಲಿದೆ. ಸುನಿಲ್ ಗವಾಸ್ಕರ್ 67 ಇನ್ನಿಂಗ್ಸ್‌ಗಳಲ್ಲಿ 2483 ರನ್ ಗಳಿಸಿದ್ದಾರೆ. ಇಂಗ್ಲೆಂಡ್‌ನಿಂದ ಈ ಪಟ್ಟಿಯಲ್ಲಿ ಎರಡನೇ ಹೆಸರು ಮಾಜಿ ನಾಯಕ ಅಲಸ್ಟೈರ್ ಕುಕ್ ಅವರದ್ದು. ಕುಕ್ 54 ಇನ್ನಿಂಗ್ಸ್‌ಗಳಲ್ಲಿ 2431 ರನ್ ಗಳಿಸಿದ್ದಾರೆ. ಇದೀಗ ಈ ಪಟ್ಟಿಗೆ ವಿರಾಟ್ ಕೊಹ್ಲಿ ಹೆಸರೂ ಸೇರ್ಪಡೆಯಾಗಲಿದೆ. ವಿರಾಟ್ ಕೊಹ್ಲಿ ಇದುವರೆಗೆ 50 ಇನ್ನಿಂಗ್ಸ್‌ಗಳಲ್ಲಿ 1991 ರನ್ ಗಳಿಸಿದ್ದಾರೆ.

Golden chance for Virat to erase Sachin, Gavaskar record

ಇದಲ್ಲದೇ ವಿರಾಟ್ ಕೊಹ್ಲಿಗೆ ಇನ್ನೂ ಒಂದು ವಿಷಯದಲ್ಲಿ ಸುನಿಲ್ ಗವಾಸ್ಕರ್ ಅವರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ. ತವರು ನೆಲದಲ್ಲಿ ಆಡುತ್ತಿರುವಾಗ ಸುನಿಲ್ ಗವಾಸ್ಕರ್ ಇಂಗ್ಲೆಂಡ್ ವಿರುದ್ಧ 1331 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ ಭಾರತದ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ 1015 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿಗೆ ಈ ಸರಣಿಯಲ್ಲಿ ಸುನಿಲ್ ಗವಾಸ್ಕರ್ ಅವರ ಎರಡು ದೊಡ್ಡ ದಾಖಲೆಗಳನ್ನು ಮುರಿಯುವ ಅವಕಾಶವಿದೆ. ಇಷ್ಟೇ ಅಲ್ಲ, ವಿರಾಟ್ ಕೊಹ್ಲಿ ಅವರ ಅಮೋಘ ಫಾರ್ಮ್ ಮುಂದುವರಿದರೆ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಬಹುದು.

ತವರಿನಲ್ಲಿ ವಿರಾಟ್ ದಾಖಲೆ

ತವರಿನಲ್ಲಿ ವಿರಾಟ್ ಕೊಹ್ಲಿ ದಾಖಲೆ ಉತ್ತಮವಾಗಿವೆ. ವಿರಾಟ್ ತವರಿನಲ್ಲಿ ಆಡಿದ 50 ಪಂದ್ಯಗಳ 77 ಇನ್ನಿಂಗ್ಸ್‌ಗಳಲ್ಲಿ 4144 ರನ್ ಸಿಡಿಸಿದ್ದಾರೆ. ಇದರಲ್ಲಿ 14 ಶತಕ ಹಾಗೂ 12 ಅರ್ಧಶತಕಗಳೂ ಸೇರಿವೆ. ಇವರ ಫಾರ್ಮ್‌ ಭರ್ಜರಿಯಾಗಿದ್ದರೆ ಇವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕಗಳ ವಿಚಾರದಲ್ಲೂ ಸುನಿಲ್ ಗವಾಸ್ಕರ್ ದಾಖಲೆಯನ್ನು ಮುರಿಯಬಹುದು.

Story first published: Tuesday, January 16, 2024, 8:08 [IST]
Other articles published on Jan 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+