ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಎಲ್ಲ ತಂಡಗಳು ಭರದ ಸಿದ್ಧತೆಗಳನ್ನು ನಡೆಸಿವೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಸಹ ಹರಾಜಿನಲ್ಲಿ ಕೆಲವು ಸ್ಟಾರ್ ಆಟಗಾರರಿಗೆ ಮಣೆ ಹಾಕಿದೆ. ಆದರೆ ಟೀಮ್ ಮ್ಯಾನೇಜ್ಮೆಂಟ್ ತೆಗೆದುಕೊಂಡ ನಿರ್ಧಾರ ನಿಶ್ಚಿತವಾಗಿ ಫ್ಯಾನ್ಸ್‌ಗೆ ಬೇಸರವಾಗಿದೆ.
ಆಟಗಾರರ ಆಯ್ಕೆಯ ವಿಷಯದಲ್ಲಿ ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳದೇ ಇರುವುದು ಬೇಸರ ತರಿಸಿದೆ. ಯುವ ಸ್ಟಾರ್ ಆಲ್‌ರೌಂಡರ್‌ಗಳನ್ನು ಬಿಟ್ಟು ಬೌಲರ್‌ಗಳಿಗೆ ಮಣೆ ಹಾಕಿರುವುದು ಬೇಸರ ಹೆಚ್ಚಾಗುವಂತೆ ಮಾಡಿದೆ.

ಈ ಮೂಲಕ ಆರ್‌ಸಿಬಿ ಸ್ಥಳೀಯ ಪ್ರತಿಭೆಗಳಿಗೆ ಬೆಲೆ ಇಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಈ ಮಧ್ಯೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಚಲನ ಚಿತ್ರ ಕಪ್ ನಡೆಯಿತು. ಈ ಪಂದ್ಯದ ವೇಳೆ ಅಭಿಮಾನಿಗಳಿಗೆ ಖುಷ್ ಆಗುವಂತಹ ಪ್ರದರ್ಶನವನ್ನು ಚಿತ್ರ ನಟ ಗಣೇಶ್ ನೀಡಿದರು.
ಈ ಟೂರ್ನಿಯಲ್ಲಿ ಸ್ಟಾರ್ ನಟರು ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಕ್ರಿಕೆಟ್ ಆಟಗಾರರು ಸಹ ಆಡುತ್ತಾರೆ. ಎಲ್ಲ ತಂಡಗಳು ಸಹ ಒಬ್ಬ ಅಂತಾರಾಷ್ಟ್ರೀಯ ಆಟಗಾರನನ್ನು ತನ್ನ ತಂಡದಲ್ಲಿ ಸ್ಥಾನ ನೀಡುತ್ತವೆ. ಅದರಂತೆ ದುನಿಯಾ ವಿಜಿ ಅವರ ತಂಡ ವಿಜಯನಗರ್ ಪೆಟ್ರಿಯಾರ್ಟ್ಸ್ ಹರ್ಷ್ವಲ್ ಗಿಬ್ಸ್ ಗೆ ಸ್ಥಾನವನ್ನು ನೀಡಿತ್ತು. ಗಿಬ್ಸ್ ಗಾಯಕ್ಕೆ ತುತ್ತಾದಾಗ ಇವರ ಸ್ಥಾನಕ್ಕೆ ವಿಜಯ್ ಭರದ್ವಾಜ್ ಬಂದರು.

ಈ ವೇಳೆ ವಿಜಯ್ ಭರದ್ವಾಜ್ ಅವರು ಬ್ಯಾಟಿಂಗ್ ಮಾಡಲು ಬಂದರು. ಎದುರಾಳಿ ತಂಡದ ನಾಯಕ ಗಣೇಶ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಗಣೇಶ್ ಅವರ ಬೌಲಿಂಗ್‌ನ್ನು ವಿಜಯ್ ಸುಲಭವಾಗಿ ಎದುರಿಸುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಆಗಿದ್ದೇ ಬೇರೆ.
ಗಣೇಶ್ ಅವರ ಎಸೆತವನ್ನು ವಿಜಯ್ ಭರದ್ವಾಜ್ ಆಡಲು ಹೋಗಿ ಬೋಲ್ಡ್ ಆದರು. ಇಷ್ಟೇ ತಡ ಅಭಿಮಾನಿಗಳು ಪುಲ್ ಖುಷ್ ಆದರು. ಅಲ್ಲದೆ ಗಣೇಶ್ ಆರ್‌ಸಿಬಿ ಪರ ಆಡಲಿ ಎಂದು ಸಮಾಜಿಕ ತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.
ಕರ್ನಾಟಕ ಚಲನಚಿತ್ರಕಪ್ ಸೀಸನ್ 4ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಗಂಗ ವಾರಿಯರ್ಸ್ ತಂಡ ಶಿವರಾಜ್ ಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಸೋಲಿಸಿ ವಿಜಯದ ನಗು ಬೀರಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಷ್ಟ್ರಕೂಟ ಪ್ಯಾಂಥರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದ ಕುಸಿತದ ಹೊರತಾಗಿಯೂ, ಅವಿನಾಶ್ ಅವರ ಪ್ರಭಾವಿ 40 (12) ಆಟದಿಂದ ಗಂಗಾ ವಾರಿಯರ್ಸ್ ಒಟ್ಟು 111/5 ಅನ್ನು ಯಶಸ್ವಿಯಾಗಿ ದಾಖಲಿಸಿತು.