Glenn Maxwell: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್: ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಗ್ಲೆನ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಂಭೀರ ಗಾಯಕ್ಕೆ ತುತ್ತಾಗಿ ಸುದೀರ್ಘ ಕಾಲದಿಂದ ವಿಶ್ರಾಂತಿಯಲ್ಲಿದ್ದರು. ಕಳೆದ ನವೆಂಬರ್‌ನಲ್ಲಿ ಗಾಯಕ್ಕೆ ತುತ್ತಾಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಮೂರ್ನಾಲ್ಕು ತಿಂಗಳಿನಿಂದ ವಿಶ್ರಾಂತಿಯಲ್ಲಿದ್ದರು. ಇದೀಗ ಗ್ಲೆನ್ ಮ್ಯಾಕ್ಸ್‌ವೆಲ್ ಚೇತರಿಕೆ ಕಂಡಿದ್ದು ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ವಿಕ್ಟೋರಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಭಾಗಿಯಾಗಿದ್ದಾರೆ. ಈ ಸುದ್ದಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್‌ಮೆಂಟ್ ಹಾಗೂ ಅಭಿಮಾನಿಗಳಿಗೂ ಖುಷಿ ನೀಡಿದೆ.
ಕಳೆದ ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತದಿಂದ ಆಸ್ಟ್ರೇಲಿಯಾ ತಂಡ ಬಿದ್ದಿತ್ತು. ಅದಾದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಗೆಳೆಯನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಬಿದ್ದು ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಮೂರುವರೆ ತಿಂಗಳುಗಳ ಕಾಲ ವಿಶ್ರಾಂತಿಯಲ್ಲಿದ್ದು ಚೇತರಿಕೆ ಕಂಡಿದ್ದಾರೆ.

ಸುದೀರ್ಘ ಪ್ರಯಾಣ ಎಂದ ಮ್ಯಾಕ್ಸ್‌ವೆಲ್
ಫಾಕ್ಸ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ಮ್ಯಾಕ್ಸ್‌ವೆಲ್ ಗಾಯದಿಂದ ಚೇತರಿಕೆ ಕಂಡಿರುವ ಹಾದು ಬಹಳ ಸುದೀರ್ಘವಾಗಿದೆ ಎಂದಿದ್ದಾರೆ. "ಕಳೆದ ಮೂರು ಮೂರೂವರೆ ತಿಂಗಳ ಪ್ರಯಾಣ ಬಹಳ ಸುದೀರ್ಘವಾಗಿದೆ. ಮುಂಜಾನೆಯ ಸೆಶನ್‌ಗಳು, ಜಿಮ್, ರಿಹ್ಯಾಬ್, ಪೂಲ್ ಸೆಶನ್, ಫಿಸಿಯೋ ಹೀಗೆ ಸಾಕಷ್ಟು ಸುದೀರ್ಘವಾಗಿತ್ತು. ಈಗ ನಾನು ಅದರ ಅಂತ್ಯಕ್ಕೆ ಬಂದು ನಿಂತಿದ್ದೇನೆ ಎಂದು ಭಾಸವಾಗುತ್ತಿದೆ. ಈಗ ನಾನು ಕ್ರಿಕೆಟ್ ಆಡಲು ಸಾಧ್ಯವಾಗಿರುವುದು ಹೆಮ್ಮೆ ಮೂಡಿಸುತ್ತಿದೆ.

ಫಿಟ್ ಆಗುವತ್ತ ಹೆಜ್ಜೆ ಎಂದ ಮ್ಯಾಕ್ಸ್‌ವೆಲ್
ಇನ್ನು ಈ ಸಂದರ್ಭದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಫಿಟ್‌ನೆಸ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ತಾನು ನಿಧಾನಕ್ಕೆ ವರ್ಕ್‌ಲೋಡ್ ಹೆಚ್ಚಿಸಿಕೊಳ್ಳುತ್ತಿರುವುದಾಗಿ ಹೇಳಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಸಂಪೂರ್ಣವಾಗಿ ಇನ್ನೂ ಫಿಟ್ ಆಗಿಲ್ಲ ಎಂದಿದ್ದಾರೆ. "ಈಗ ಬಹುಶಃ 80% ಫಿಟ್ ಆಗಿದ್ದೇನೆ. ಏಕದಿನ ಪಂದ್ಯವನ್ನಾಡಲು ನಾನು ಇನ್ನೂ ಕೂಡ ಸ್ವಲ್ಪ ಹಿಂದಿದ್ದು ಅದರತ್ತ ಪ್ರಯತ್ನ ನಡೆಸುತ್ತಿದ್ದೇನೆ. ನಾನು ಈಗ ಬೌಲಿಂಗ್ ಮಾಡುತ್ತಿಲ್ಲ. ನಿಧಾನಕ್ಕೆ ನನ್ನ ವರ್ಕ್‌ಲೋಡ್ ಹೆಚ್ಚಿಸಿಕೊಳ್ಳುತ್ತಿದ್ದೇನೆ" ಎಂದಿದ್ದಾರೆ ಗ್ಲೆನ್ ಮ್ಯಾಕ್ಸ್‌ವೆಲ್.

ಆರ್‌ಸಿಬಿಗೂ ನಿರಾಳತೆ
ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯಗೊಂಡಿದ್ದು ಆಸ್ಟ್ರೇಲಿಯಾ ತಂಡಕ್ಕೆ ಮಾತ್ರವೇ ಆಘಾತ ಉಂಟು ಮಾಡಿರಲಿಲ್ಲ. ಆರ್‌ಸಿಬಿ ತಂಡಕ್ಕೂ ಇದು ಕಳವಳವನ್ನುಂಟು ಮಾಡಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಎರಡ್ಮೂರು ಆವೃತ್ತಿಗಳಿಂದ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಆರ್‌ಸಿಬಿ ಪರವಾಗಿ ಕೆಲ ಅದ್ಭುತ ಇನ್ನಿಂಗ್ಸ್‌ಗಳನ್ನು ನೀಡಿದ್ದಾರೆ ಮ್ಯಾಕ್ಸ್‌ವೆಲ್. ಹೀಗಾಗಿ ಈ ಬಾರಿಯ ಐಪಿಎಲ್‌ಗೆ ಮ್ಯಾಕ್ಸ್‌ವೆಲ್ ಅಲಭ್ಯವಾದರೆ ಅದು ತಂಡಕ್ಕೆ ಭಾರೀ ಹಿನ್ನಡೆಯುಂಟು ಮಾಡುವ ಸಾಧ್ಯತೆಯಿತ್ತು. ಆದರ ಇದೀಗ ಅವರು ಚೇತರಿಕೆ ಕಂಡಿರುವುದು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹಾಗೂ ಅಭಿಮಾನಿಗಳಿಗೂ ನಿರಾಳತೆ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications