Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮತ್ತೆ ಕ್ರಿಕೆಟ್ ಆಡುವ ಅವಕಾಶ ದೊರೆತಿದ್ದಕ್ಕೆ ಖುಷಿಯಾಗಿದೆ: ಧವನ್

Grateful for the opportunity to play cricket again says Shikhar Dhawan

ನವದೆಹಲಿ: ಕೊರೊನಾವೈರಸ್ ವಿಶ್ವದಾದ್ಯಂತ ಭೀತಿ ಹಬ್ಬಿಸಲಾರಂಭಿಸಿದ ಬಳಿಕ ನಡೆದ ಮೊದಲ ಭಾರತದ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್. ಅಲ್ಲೀವರೆಗೆ ಭಾರತದ ಕ್ರೀಡಾಜಗತ್ತು ಸ್ತಬ್ಧವಾಗಿತ್ತು. ಕೊರೊನಾ ಭೀತಿಯ ಮಧ್ಯೆಯೂ ಮತ್ತೆ ಕ್ರಿಕೆಟ್ ಆಡಲು ಅವಕಾಶ ಲಭಿಸಿದ್ದಕ್ಕೆ ಭಾರತ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಖುಷಿ ವ್ಯಕ್ತಪಡಿಸಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಭಾರತಕ್ಕೆ ಬದಲಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿತ್ತು. ಇದರಲ್ಲಿ ಶಿಖರ್ ಧವನ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ದುಬೈ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕಾದಾಡಿತ್ತು. ಇದರಲ್ಲಿ ಮುಂಬೈ ಗೆದ್ದಿತ್ತು.

ಮಂಗಳವಾರವಷ್ಟೇ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಆಡಲು ಅವಕಾಶ ಲಭಿಸಿದ್ದಕ್ಕೆ ಧವನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಲಿದೆ. ಈ ಪ್ರವಾಸ ಸರಣಿಯ ಏಕದಿನ ಮತ್ತು ಟಿ20ಐ ತಂಡದಲ್ಲಿ ಶಿಖರ್ ಧವನ್ ಹೆಸರಿಸಲ್ಪಟ್ಟಿದ್ದಾರೆ.

'ನನ್ನ ತಂಡದಲ್ಲಿ ಅದ್ಭುತ ಜನರ ಬಣ ಇದ್ದಿದ್ದರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಈ ಐಪಿಎಲ್ ಹೊಸ ಅನುಭವ ನೀಡಿತು. ಇಲ್ಲಿ ಬಂದು ಮತ್ತೆ ಕ್ರಿಕೆಟ್ ಆಡುವ ಅವಕಾಶ ಲಭಿಸಿದ್ದಕ್ಕಾಗಿ ಖುಷಿಯಾಗಿದೆ,' ಎಂದು ಶಿಖರ್ ಧವನ್ ಹೇಳಿದ್ದಾರೆ.

Story first published: Wednesday, November 11, 2020, 22:42 [IST]
Other articles published on Nov 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+