Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಾಯಕ್ಕೀಡಾಗಿ ಪಾದಾರ್ಪಣೆ ಪಂದ್ಯದಿಂದ ಹೊರನಡೆದ ಶಾರ್ದೂಲ್ ಠಾಕೂರ್

IND v/s WI : ಶಾರ್ದೂಲ್ ಠಾಕೂರ್ ಗೆ ಮತ್ತೆ ಕಾಡಿದ ಗಾಯದ ಸಮಸ್ಯೆ | Oneindia Kannada
Groin strain forces debutant Shardul Thakur off the field

ಹೈದರಾಬಾದ್, ಅಕ್ಟೋಬರ್ 12: ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ vs ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್ ನಲ್ಲಿ ಶಾರ್ದೂಲ್ ಠಾಕೂರ್ ಅಂತಾರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಗಾಯದ ಕಾರಣದಿಂದಾಗಿ ಅವರು ಮೈದಾನದಿಂದ ಹೊರ ನಡೆಯುವಂತಾಗಿದೆ.

ಶುಕ್ರವಾರ (ಅಕ್ಟೋಬರ್ 12) ವಿಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ನ ಮೊದಲ ದಿನದ ಪಂದ್ಯಾಟಕ್ಕಾಗಿ ಮೈದಾನಕ್ಕಿಳಿದಿದ್ದ ಶಾರ್ದೂಲ್, ಭಾರತ ಫೀಲ್ಡಿಂಗ್ ಗೆ ಇಳಿಸಲ್ಪಟ್ಟಿದ್ದರಿಂದ ಒಂದು ಓವರ್ ಸಹಿತ ನಾಲ್ಕು (ಹತ್ತು) ಎಸೆತಗಳನ್ನು ಪೂರೈಸಿದರು. ಮತ್ತೆ ತೊಡೆ ನೋವಿನ ಕಾರಣ ಆಟವಾಡಲಾಗಲಿಲ್ಲ.

ಏಷ್ಯಾ ಕಪ್ ಪಂದ್ಯದ ವೇಳೆಯೂ ಇದೇ ಗಾಯದಿಂದಾಗಿ ಠಾಕೂರ್ ಪಂದ್ಯದಿಂದ ಹೊರಗುಳಿಯುವಂತಾಗಿತ್ತು. ದುಬೈನಲ್ಲಿ ನಡೆದಿದ್ದ ಏಷ್ಯಾ ಕಪ್ ಹಾಂಕಾಂಗ್ ಎದುರಿನ ಪಂದ್ಯದಲ್ಲಿ ವಿಕೆಟ್ ಪಡೆಯದೆ ನಾಲ್ಕು ಓವರ್ ಎಸೆದಿದ್ದ ಠಾಕೂರ್ ಬಲ ತೊಡೆ ಭಾಗದ ನೋವಿನಿಂದಾಗಿ ಮೈದಾನದಿಂದ ಹೊರ ನಡೆದಿದ್ದರು.

'ಗಾಯಕ್ಕೀಡಾಗಿರುವ ಶಾರ್ದೂಲ್ ಸ್ಕ್ಯಾನಿಂಗ್ ಗಾಗಿ ತೆರಳಿದ್ದಾರೆ. ಇವತ್ತಿನ ಪಂದ್ಯದಲ್ಲಿ ಅವರು ಪಾಲ್ಗೊಳ್ಳುವುದಿಲ್ಲ. ಸ್ಕ್ಯಾಂನಿಂಗ್ ಫಲಿತಾಂಶದ ಬಳಿಕ ಇನ್ನುಳಿದ ಪಂದ್ಯಗಳಲ್ಲಿ ಠಾಕೂರ್ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದನ್ನು ತಂಡ ನಿರ್ವಹಣಾ ಸಮಿತಿ ತಿಳಿಸಲಿದೆ' ತಂಡ ಹೇಳಿಕೆ ನೀಡಿದೆ.

Story first published: Friday, October 12, 2018, 15:46 [IST]
Other articles published on Oct 12, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+