ಭಾರತದ ಸಾಧನೆಗೆ ಅಭಿನಂದನೆ ಸಲ್ಲಿಸಿದ ಹಸೆಮಣೆಯೇರಲು ಸಿದ್ಧವಾಗಿರುವ ವೇಗಿ ಬೂಮ್ರಾ

ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಮದುವೆಯ ಸಿದ್ಧತೆಯಲ್ಲಿ ತಲ್ಲೀನರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯವಾಗುವ ಮೂಲಕ ಮದುವೆಯ ತಯಾರಿಗಾಗಿ ತೆರಳಿದ್ದರು ಜಸ್ಪ್ರೀತ್ ಬೂಮ್ರಾ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಬೂಮ್ರಾ ವರಿಸಲಿರುವ ವಧು ಯಾರು ಎಂಬ ಚರ್ಚೆ ಭಾರೀ ಜೋರಾಗಿ ನಡೆಯುತ್ತಿದೆ.
ಈ ಮಧ್ಯೆ ಟೀಮ್ ಇಂಡಿಯಾ ಅಹ್ಮದಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆಲುವು ಸಾಧಿಸಿ 3-1 ಅಂತರದಿಂದ ಸರಣಿ ಗೆಲುವು ಸಾಧಿಸಿದೆ. ಇದರ ಜೊತೆಗೆ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿದೆ.
ಟೀಮ್ ಇಂಡಿಯಾದ ಈ ಸಾಧನೆಗೆ ವೇಗಿ ಜಸ್ಪ್ರೀತ್ ಬೂಮ್ರಾ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಜಸ್ಪ್ರೀತ್ ಬೂಮ್ರಾ ಪ್ರತಿಕ್ರಿಯೆಯನ್ನು ನೀಡಿದ್ದು ತಂಡದ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಈ ಮೂಲಕ ಕಠಿಣ ಪರಿಶ್ರಮಕ್ಕೆ ಬೆಲೆ ದೊರೆಯುತ್ತದೆ ಎಂದಿದ್ದಾರೆ.
"ತಂಡಕ್ಕೆ ಅಭಿನಂದನೆಗಳು.. ಸರಣಿಯ ಗೆಲುವಿಗಾಗಿ ಎಂತಾ ಸ್ಪೂರ್ತಿದಾಯಕ ಕಮ್‌ಬ್ಯಾಕ್. ಕಠಿಣ ಪರಿಶ್ರಮಕ್ಕೆ ಯಾವಾಗಲೂ ಪ್ರತಿಫಲ ಸಿಕ್ಕೇ ಸಿಗುತ್ತದೆ" ಎಂದು ಜಸ್ಪ್ರೀತ್ ಬೂಮ್ರಾ ಟ್ವಿಟ್ಟರ್‌ನಲ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
ಜಸ್ಪ್ರೀತ್ ಬೂಮ್ರಾ ಅವರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ದಕ್ಷಿಣ ಭಾರತದ ನಟಿ ಅನುಪಮಾ ಪರಮೇಶ್ವರನ್ ಹಾಗೂ ಕ್ರೀಡಾ ನಿರೂಪಕಿ ಮಾಡೆಲ್ ಸಂಜನಾ ಗಣೇಶನ್ ಇವರಿಬ್ಬರಲ್ಲಿ ಒಬ್ಬರು ಬೂಮ್ರಾ ಅವರ ಕೈ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಜಸ್ಪ್ರಿತ್ ಬೂಮ್ರಾ ಅಥವಾ ಅವರ ಕುಟುಂಬ ಈವರೆಗೂ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications