ವಾಯುಸೇನೆ ದಿನಾಚರಣೆಯಲ್ಲಿ ಕ್ಯಾಪ್ಟನ್ ಲುಕ್ ನಲ್ಲಿ ಸಚಿನ್
ಗಾಜಿಯಾಬಾದ್, ಅ.08: ದೇಶದ ಹೆಮ್ಮೆಯ ವೀರಯೋಧರ ಸಂಭ್ರಮಾಚರಣೆಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡಾ ಪಾಲ್ಗೊಂಡಿದ್ದಾರೆ. 83ನೇ ವಾಯುಸೇನಾ ದಿನಾಚರಣೆ ಕಾರ್ಯಕ್ರಮಕ್ಕೆ ಐಎಎಫ್ ಕ್ಯಾಪ್ಟನ್ ದಿರಿಸಿನಲ್ಲಿ ಸಚಿನ್ ಅವರು ಬಂದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಏರ್ ಫೋರ್ಸ್ ದಿನವನ್ನು ಉತ್ತರ ಪ್ರದೇಶದ ಗಾಜಿಯಾಬಾದಿನ ಹಿಂಡಾನ್ ಏರ್ ಬೇಸ್ ನಲ್ಲೇ ಆಚರಿಸಲಾಗುತ್ತಿದೆ. ಅಕ್ಟೋಬರ್ 8ರಂದು ಹಿಂಡಾನ್ ವಾಯುನೆಲೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರು ಉಪಸ್ಥಿತರಿದ್ದಾರೆ.[ಭಾರತ ಸೇನೆಗೆ ಸ್ವದೇಶಿ ವಿಮಾನ ತೇಜಸ್ ಬಲ]
ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದರೂ ಕ್ರಿಕೆಟ್ ಪ್ರಚಾರಕ್ಕಾಗಿ ಆಲ್ ಸ್ಟಾರ್ ಲೀಗ್ ಹುಟ್ಟು ಹಾಕಿ ಅಮೆರಿಕದಲ್ಲಿ ಕ್ರಿಕೆಟ್ ಹುಚ್ಚು ಹಬ್ಬಿಸಲು ಸಿದ್ಧರಾಗಿದ್ದಾರೆ. ಇದರ ಜೊತೆಗೆ ಫುಟ್ಬಾಲ್, ಕಬಡ್ಡಿ, ಬಾಡ್ಮಿಂಟನ್ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಸಂಸದರ ದತ್ತು ಯೋಜನೆಯಡಿಯಲ್ಲಿ ಆಂಧ್ರಪ್ರದೇಶದ ಕುಗ್ರಾಮವೊಂದಕ್ಕೆ ಆಧುನಿಕತೆಯ ಟಚ್ ನೀಡುತ್ತಿದ್ದಾರೆ.
ಐಎಎಫ್ ನಂಟು: ಭಾರತೀಯ ವಾಯುಸೇನೆಯ ಗೌರವಾನ್ವಿತ ಗ್ರೂಪ್ ಕ್ಯಾಪ್ಟನ್ ಆಗಿರುವ ಸಚಿನ್ ಅವರು 2014ರಲ್ಲಿ ಪತ್ನಿ ಅಂಜಲಿ ಜತೆಗೂಡಿ ಈ ವಾಯುನೆಲೆಗೆ ಭೇಟಿ ನೀಡಿದ್ದರು. [ಕಲಾಂಗೆ ನಮನ ಸಲ್ಲಿಸಿದ 96ರ ಹರೆಯದ ಮಾರ್ಷಲ್ ಗೊಂದು ಸಲಾಂ]

ಕ್ಯಾಪ್ಟನ್ ಸಚಿನ್ ಜೊತೆ ವಾಯುಸೇನೆ ಯೋಧರು
ಸಚಿನ್ ಅವರು ವಾಯುಸೇನೆಯ ಯೋಧರ ವೈಮಾನಿಕ ಪ್ರದರ್ಶನವನ್ನು ಕುತೂಹಲದಿಂದ ವೀಕ್ಷಿಸಿದರು.ವಾಯುಸೇನೆಯ ಈ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ನನ್ನ ಹೆಮ್ಮೆ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.

ಮಹಿಳಾ ಶಕ್ತಿ ಪಡೆದುಕೊಂಡ ವಾಯುಸೇನೆ
ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಯುದ್ಧವಿಮಾನಗಳ ಪೈಲಟ್ ಆಗುವ ಅವಕಾಶವನ್ನು ಮಹಿಳೆಯರಿಗೆ ನೀಡಲಾಗುವುದು, ಮಹಿಳಾ ಶಕ್ತಿಗೆ ಬೆಲೆ ನೀಡಲಾಗುವುದು ಎಂದು ವಾಯುಸೇನೆ ಹೇಳಿಕೊಂಡಿದೆ.

ಯುದ್ಧ ವಿಮಾನ ಪ್ರದರ್ಶನ
ಆಕಾಶ್ ಗಂಗಾ ಸ್ಕೈ ಡೈವರ್ಸ್ ತ್ರಿವರ್ಣ ಧ್ವಜ ಹಿಡಿದು ಆಗಸದಿಂದ ಕೆಳಕ್ಕೆ ಹಾರುವ ಮೂಲಕ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ. ಎಎನ್ 32 ಏರ್ ಕ್ರಾಫ್ಟ್ ಪ್ರದರ್ಶನ ನಂತರ ಎಂಐ-17 ವಿ5 ಹೆಲಿಕಾಪ್ಟರ್, ಸುಖೋಯ್ ಸು 30ಎಂಕೆಐ ಏರ್ ಕ್ರಾಫ್ಟ್, ಟೈಗತ್ ಮಾಥ್, ಸಿ17 ಗ್ಲೋಬ್ ಮಾಸ್ಟರ್ ಮುಂತಾದ ವಿಮಾನ ಪ್ರದರ್ಶನವನ್ನು ಸಚಿನ್ ಕಣ್ತುಂಬಿಸಿಕೊಂಡಿದ್ದಾರೆ.

ಕ್ಯಾಪ್ಟನ್ ಜೊತೆ ವಾಯುಸೇನೆ ಅಧಿಕಾರಿಗಳು
ಗಾಜಿಯಾಬಾದ್: ಐಎಎಫ್ ಗ್ರೂಪ್ ಕ್ಯಾಪ್ಟನ್ ಸಚಿನ್ ಜೊತೆ ವಾಯುಸೇನೆ ಅಧಿಕಾರಿಗಳು, ಯೋಧರು, ಪೈಲಟ್ ಗಳು. ಚಿತ್ರಕೃಪೆ: ಸಚಿನ್ ತೆಂಡೂಲ್ಕರ್ ಫೇಸ್ ಬುಕ್ ಪುಟ ಹಾಗೂ ಎಎನ್ ಐ
ಗಾಜಿಯಾಬಾದ್ ನಲ್ಲಿ ಸಚಿನ್
ಗಾಜಿಯಾಬಾದ್ ನಲ್ಲಿ ಸಚಿನ್ ಅವರು ವಾಯುಸೇನೆ ದಿನಾಚರಣೆಯ 83ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications