ಪುರುಷರ ಏಕದಿನಕ್ಕೆ ಮೊದಲ ಮಹಿಳಾ ರೆಫರಿಯಾಗಿ ಇತಿಹಾಸ ಬರೆದ ಲಕ್ಷ್ಮೀ!

ನವದೆಹಲಿ, ಡಿಸೆಂಬರ್ 6: ಪುರುಷರ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಚೊಚ್ಚಲ ಮೇಲ್ವಿಚಾರಣಾ ಮ್ಯಾಚ್ ರೆಫರಿಯಾಗಿ ಭಾರತದ ಜಿಎಸ್ ಲಕ್ಷ್ಮೀ ಇತಿಹಾಸ ನಿರ್ಮಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ (ಯುಎಇ)ಯಲ್ಲಿ ನಡೆಯಲಿರುವ ಐಸಿಸಿ ಪುರಷರ ಕ್ರಿಕೆಟ್ ವರ್ಲ್ಡ್‌ಕಪ್ ಲೀಗ್-2ನ ಆರಂಭಿಕ ಪಂದ್ಯದಲ್ಲಿ ಲಕ್ಷ್ಮೀ ರೆಫರೀ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಐಸಿಸಿ ಪ್ರಕಟಣೆಯ ಪ್ರಕಾರ, ಲಕ್ಷ್ಮೀ ಮೇಲ್ವಿಚಾರಣೆ ನಡೆಸಲಿರುವ ಪಂದ್ಯ ಡಿಸೆಂಬರ್ 8ರಂದು ಯುಎಇಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ ಟೂರ್ನಿ 2023ರಲ್ಲಿ ಭಾರತದಲ್ಲಿ ನಡೆಯಲುದ್ದೇಶಿಸಿದ್ದು, ಈ ಬೆಳವಣಿಗೆ ಮಹಿಳಾ ಅಧಿಕಾರಿಗಳಿಗೆ ಅವಕಾಶ ನೀಡುವುದಕ್ಕೆ ದಾರಿಯಾಗಲಿದೆ.
ಇದೇ ವರ್ಷ ಲಕ್ಷ್ಮೀ ಅವರಿಂದಾದ ಎರಡನೇ ಗಮನಾರ್ಹ ಸಾಧನೆಯಿದು. ಇದಕ್ಕೂ ಮೊದಲು, ಮೇನಲ್ಲಿ ಲಕ್ಷ್ಮೀ ಐಸಿಸಿ ಇಂಟರ್ ನ್ಯಾಷನಲ್ ಮ್ಯಾಚ್ ರೆಫರೀಗಳ ಸಮಿತಿಯಲ್ಲಿ ಕಾಣಿಸಿಕೊಂಡ ಮೊದಲ ಮಹಿಳೆಯಾಗಿ ಗುರುತಿಸಿಕೊಂಡಿದ್ದರು. 51ರ ಹರೆಯದ ಲಕ್ಷ್ಮಿ 2008-09ರಲ್ಲಿ ನಡೆದಿದ್ದ ಮಹಿಳಾ ದೇಸಿ ಕ್ರಿಕೆಟ್‌ನಲ್ಲಿ ರೆಫರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು.
'ತುಂಬಾ ಖುಷಿ ನೀಡಿದೆ. ಇಂಥ ಯಾವುದಾದರೂ ಚೊಚ್ಚಲ ನಿವಾಬ್ದಾರಿ ದೊರೆತಾಗ ಮನಸ್ಸಿಗೆ ಹೆಮ್ಮೆ ಅನ್ನಿಸುತ್ತೆ. ಐಸಿಸಿಯ ದೊಡ್ಡ ಪಂದ್ಯವೊಂದಕ್ಕೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿರುವುದು ಶ್ರೇಷ್ಠ ಭಾವನೆ ಮೂಡಿಸಿದೆ,' ಎಂದು ಲಕ್ಷ್ಮಿ ಖುಷಿ ಹಂಚಿಕೊಂಡಿದ್ದಾರೆ. ಲಕ್ಷ್ಮೀ ಇಲ್ಲೀವರೆಗೆ 3 ಮಹಿಳಾ ಏಕದಿನಕ್ಕೆ, ಪುರುಷರ 16 ಟಿ20ಐಗೆ, ಮಹಿಳಾ 7 ಟಿ20ಐ ಪಂದ್ಯಗಳಿಗೆ ರೆಫರಿಯಾಗಿ ಕಾರ್ಯ ನಿರ್ವಹಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications