ಮತ್ತೆ ಹಿಟ್ ವಿಕೆಟ್ ಆದ ಸಾಯಿ ಸುದರ್ಶನ್
ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಸತತ ಎರಡು ಪಂದ್ಯಗಳಲ್ಲಿ ಬೇಡವಾದ ರೀತಿಯಲ್ಲಿ ಔಟ್ ಆಗಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಹಿಟ್ ವಿಕೆಟ್‌ಗೆ ಬಲಿಯಾಗಿದ್ದ ಸಾಯಿ ಸುದರ್ಶನ್, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲೂ ಕಾಪಿ ಪೇಸ್ಟ್ ರೂಪದಲ್ಲಿ ಔಟ್ ಆದರು.
ರಾಜಸ್ಥಾನ್ ರಾಯಲ್ಸ್ ನೀಡಿದ 215 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಪವರ್ ಪ್ಲೇನಲ್ಲಿ 69 ರನ್ ಸೇರಿಸಿ ವಿಕೆಟ್ ಬೀಳದಂತೆ ಕಾಯ್ದುಕೊಂಡ ಜೋಡಿ ಆರ್ಭಟಿಸಿತು.

ಮೊದಲ ವಿಕೆಟ್‌ಗೆ ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ಜೋಡಿ ಮೊದಲ ವಿಕೆಟ್‌ಗೆ 12.5 ಓವರ್‌ಗಳಲ್ಲಿ 167 ರನ್ ಸೇರಿಸಿತು. ಈ ವೇಳೆ ಭರವಸೆಯ ಆಟಗಾರ ಸಾಯಿ ಸುದರ್ಶನ್ ಇಲ್ಲದ ರೀತಿಯಲ್ಲಿ ಔಟ್ ಆಗಿ ನಿರಾಸೆಗೊಂಡರು.
ಮತ್ತೆ ಹಿಟ್ ವಿಕೆಟ್
13ನೇ ಇನಿಂಗ್ಸ್ ಬೌಲ್ ಮಾಡಿದ ಬ್ರಿಜೇಶ್ ಶರ್ಮಾ ಈ ಓವರ್‌ನ ಐದನೇ ಎಸೆತದಲ್ಲಿ ಫುಲ್ ಟಾಸ್ ಎಸೆತವನ್ನು ಬೌಂಡರಿ ಬಾರಿಸಿದರು. ಆಗ ಬ್ಯಾಟ್ ಕೈಯಿಂದ ಜಾರಿತು. ಮತ್ತೆ ಬ್ಯಾಟ್ ಸ್ಟಂಪ್ಸ್‌ಗೆ ಬಡೀಯಿತು. ಪರಿಣಾಮ ನಾಕೌಟ್ ಹಂತದ ಪಂದ್ಯಗಳಲ್ಲಿ ಸತತ ಎರಡೂ ಪಂದ್ಯಗಳಲ್ಲಿ ಹಿಟ್‌ವಿಕೆಟ್‌ಗೆ ಬಲಿಯಾದ ಬೇಡದ ದಾಖಲೆಯನ್ನು ತಮ್ಮದಾಗಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications