Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗುಜರಾತ್ ಟೈಟಾನ್ಸ್ ತಂಡದ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ; ತಪ್ಪಿದ ಅನಾಹುತ

ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್) ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಆರ್‌ಸಿಬಿ ಸ್ಥಿರ ಪ್ರದರ್ಶನ ನೀಡಿ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಗುಜರಾತ್ ಟೈಟಾನ್ಸ್ ಆಸೆ ನುಚ್ಚುನೂರಾಗಿದೆ. ಈ ಪಂದ್ಯದ ಬಳಿಕ ಆಟಗಾರರು ತಮ್ಮ ತಮ್ಮ ತಂಡದ ಬಸ್‌ ಹತ್ತಿ ಹೋಟೆಲ್‌ ರೂಮ್‌ ಕಡೆಗೆ ಹೊರಟಾಗ ನಡೆದ ಆ ಒಂದು ಘಟನೆ ಎಲ್ಲರಲ್ಲೂ ಕೆಲ ಕಾಲ ಆತಂಕ ಮೂಡಿಸಿತ್ತು.

ಗುಜರಾತ್ ಟೈಟಾನ್ಸ್ ಬಸ್ ಹೋಟೆಲ್‌ಗೆ ಹಿಂತಿರುಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುಜರಾತ್ ತಂಡದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಶಾರ್ಟ್ ಸರ್ಕ್ಯೂಟ್ ಎಂದು ನಂಬಲಾಗಿದೆ. ವರದಿಗಳ ಪ್ರಕಾರ, ಆಟಗಾರರನ್ನು ಮೊದಲು ಬಸ್‌ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಆಟಗಾರರು ಹೋಟೆಲ್‌ಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಎಲ್ಲಾ ಆಟಗಾರರನ್ನು ಸುರಕ್ಷಿತವಾಗಿ ಬಸ್‌ನಿಂದ ಇಳಿಸಿ ಮತ್ತೊಂದು ವಾಹನದಲ್ಲಿ ಕಳುಹಿಸಲಾಗಿದ್ದು, ಆಟಗಾರರು ಸುಮಾರು ಒಂದು ಗಂಟೆ ರಸ್ತೆಯಲ್ಲೇ ಇರಬೇಕಾಯಿತು.

GT Team Bus

ರಸ್ತೆಯ ಮಧ್ಯದಲ್ಲಿ ಆಟಗಾರರು ನಿಂತಿರುವುದನ್ನು ಕಂಡು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಯ ಇಕ್ಕೆಲುಗಳಲ್ಲಿ ನಿಂತು ಆಟಗಾರರನ್ನು ನೋಡಲು ಆರಂಭಿಸಿದರು. ಪೊಲೀಸರು ಆಟಗಾರರ ಸುತ್ತಲೂ ಕಾವಲು ಕಾಯುತ್ತಿದ್ದರು. ಮೊಹಮ್ಮದ್ ಸಿರಾಜ್ ಅವರು ರಸ್ತೆಯಲ್ಲಿ ಕುಳಿತಿದ್ದ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಗುಜರಾತ್ ತಂಡದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಶಾರ್ಟ್ ಸರ್ಕ್ಯೂಟ್ ಎಂದು ನಂಬಲಾಗಿದೆ. ಅಭಿಮಾನಿಗಳಿಂದ ಆಟಗಾರರಿಗೆ ತೊಂದರೆಯಾಗದಂತೆ ತಡೆಯಲು ಬಸ್‌ನೊಂದಿಗೆ ಬಂದ ಪೊಲೀಸ್ ಸಿಬ್ಬಂದಿ ಆಟಗಾರರ ಸುತ್ತಲೂ ನಿಂತಿದ್ದರು. ಆದರೂ ದಾರಿಹೋಕರು ಫೋಟೋ ಹಾಗೂ ವಿಡಿಯೋಗಳನ್ನು ಮಾಡಿದರು. ಪೊಲೀಸರು ಈ ವೇಳೆ ಅಭಿಮಾನಿಗಳನ್ನು ಹೆಚ್ಚು ಹೊತ್ತು ನಿಲ್ಲಲು ಬಿಡಲೇ ಇಲ್ಲ.

ಇಶಾಂತ್ ಶರ್ಮಾ ಮತ್ತು ಸಾಯಿ ಕಿಶೋರ್ ರಸ್ತೆಯಲ್ಲಿ ಕುಳಿತಿರುವ ಫೋಟೋವನ್ನು ಮೊಹಮ್ಮದ್ ಸಿರಾಜ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಪಂದ್ಯದ ಫಲಿತಾಂಶ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಸ್ಟಾರ್ ಆಟಗಾರರಾದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್‌ ಅವರ ವಿಕೆಟ್‌ ಬೇಗನೆ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಈ ಹಂತದಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ವಾಷಿಂಗ್ಟನ್‌ ಸುಂದರ್ ಮನಮೋಹಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಪರಿಣಾಮ ಜಿಟಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155 ರನ್‌ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 161 ರನ್‌ ಕಲೆ ಹಾಕಿ ಭರ್ಜರಿ ಜಯ ದಾಖಲಿಸಿತು.

Story first published: Monday, June 1, 2026, 11:47 [IST]
Other articles published on Jun 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+