For Quick Alerts
ALLOW NOTIFICATIONS  
For Daily Alerts
 

GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ

ಬುಧವಾರ, ಏಪ್ರಿಲ್ 17ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 32ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿತು.

ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿಗಳು ಪ್ರದರ್ಶನದಲ್ಲಿ ಪ್ರಾಬಲ್ಯ ಸಾಧಿಸಿದರು. ಗುಜರಾತ್ ಟೈಟನ್ಸ್ ತಂಡವನ್ನು ಕೇವಲ 89 ರನ್‌ಗಳಿಗೆ ಆಲೌಟ್ ಮಾಡಲು ನೆರವಾದರು.

GT vs DC Gujarat Titans skipper Shubman Gill blames Batters for crushing lost Against Delhi Capitals

ಆರಂಭಿಕರಾದ ಶುಭ್ಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಪವರ್‌ಪ್ಲೇನಲ್ಲಿ ಕಳಪೆಯಾಗಿ ಔಟಾದರು. ಇದರಿಂದ ತವರಿನ ಅಂಗಳದಲ್ಲೇ ಗುಜರಾತ್ ಟೈಟನ್ಸ್ ತಂಡವು ನಂತರ ಚೇತರಿಸಿಕೊಳ್ಳಲು ವಿಫಲವಾಯಿತು.

ಗುಜರಾತ್ ಟೈಟನ್ಸ್ ಕೇವಲ 17.3 ಓವರ್‌ಗಳಲ್ಲಿ ಸರ್ವಪತನ ಕಂಡಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಲ್ಲಿ ಸಾಯಿ ಸುದರ್ಶನ್ ಮಾತ್ರ ಎರಡಂಕಿ ಮೊತ್ತ ದಾಟಿದರು. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತೆವಾಟಿಯಾ 10 ರನ್ ಮತ್ತು ಕೆಳಕ್ರಮಾಂಕದಲ್ಲಿ ರಶೀದ್ ಖಾನ್ 31 ರನ್ ತಂಡದ ಪರ ಗರಿಷ್ಠ ಮೊತ್ತ ಗಳಿಸಿದ ಆಟಗಾರನಾದರು.

ಪಂದ್ಯದ ನಂತರದ ಪ್ರಶಸ್ತಿ ಪ್ರಸ್ತುತಿ ಸಮಾರಂಭದಲ್ಲಿ ತಂಡದ ಭೀಕರ ಬ್ಯಾಟಿಂಗ್ ಕುರಿತು ಮಾತನಾಟಿದ ಗುಜರಾತ್ ಟೈಟನ್ಸ್ ಶುಭ್ಮನ್ ಗಿಲ್, ಪಿಚ್ ತಂಡದ ಪತನದಲ್ಲಿ ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದು ದೃಢಪಡಿಸಿದರು.

GT vs DC Gujarat Titans skipper Shubman Gill blames Batters for crushing lost Against Delhi Capitals

'ಅತ್ಯಂತ ಕಳಪೆ' ಬ್ಯಾಟಿಂಗ್‌ಗಾಗಿ ತನ್ನನ್ನು ಮತ್ತು ತಂಡದ ಇತರ ಬ್ಯಾಟರ್‌ಗಳನ್ನು ಶುಭ್ಮನ್ ಗಿಲ್ ದೂಷಿಸಿದರು ಮತ್ತು ತಂಡವು ಸೋಲಿನಿಂದ ಬೇಗನೆ ಹೊರಬರುವ ಅಗತ್ಯವಿದೆ ಎಂದು ಹೇಳಿದರು.

"ನಮ್ಮ ಬ್ಯಾಟಿಂಗ್ ಪ್ರದರ್ಶನವು ತುಂಬಾ ಸರಾಸರಿಯಾಗಿತ್ತು, ಆದರೆ ನಾವು ಮುಂದುವರಿಯಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ನಾವು ಉತ್ತಮ ಆಟವನ್ನು ಹೊಂದಿದ್ದರೂ ಸಹ, ಈ ಪಂದ್ಯದಿಂದ ಮುಂದುವರಿಯುವುದು ಮತ್ತು ಮುಂದಿನ ಪಂದ್ಯಕ್ಕೂ ಅದೇ ಮನಸ್ಥಿತಿಯನ್ನು ಕಾಪಾಡಿಕೊಳ್ಳುವುದು ನಮಗೆ ಮುಖ್ಯವಾಗಿದೆ".

"ನಾವು ಮತ್ತೆ ಪುನರಾಗಮನ ಮಾಡಲು ಪ್ರಯತ್ನಿಸಬೇಕಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಪಿಚ್ ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ತಂಡವು ಔಟಾದ ರೀತಿಯನ್ನು ನೋಡಿದರೆ, ನಾನು ಔಟಾದ ರೀತಿಗೂ, ವೃದ್ಧಿಮಾನ್ ಸಹಾ ಔಟ್ ಆದ ರೀತಿಗೂ ಪಿಚ್‌ಗೆ ಯಾವುದೇ ಸಂಬಂಧವಿಲ್ಲ. ಸಾಯಿ ಸುದರ್ಶನ್ ರನೌಟ್ ಆದರು. ಹಾಗಾಗಿ ಪಿಚ್‌ನಲ್ಲಿ ಯಾವುದೇ ತಪ್ಪಿಲ್ಲ. ಇದು ಕೇವಲ ಕೆಟ್ಟ ಬ್ಯಾಟಿಂಗ್ ಪ್ರದರ್ಶನ ಮತ್ತು ಕಳಪೆ ಶಾಟ್ ಆಯ್ಕೆ ಎಂದು ನಾನು ಹೇಳುತ್ತೇನೆ," ಎಂದು ಶುಭ್ಮನ್ ಗಿಲ್ ಹತಾಶೆ ವ್ಯಕ್ತಪಡಿಸಿದರು.

ಗುಜರಾತ್ ಟೈಟನ್ಸ್ ಹಿಂದಿಕ್ಕಿದ ಡೆಲ್ಲಿ ಕ್ಯಾಪಿಟಲ್ಸ್

ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ನೆಟ್ ರನ್‌ರೇಟ್ ನಷ್ಟದ ನಂತರ, ಭಾರಿ ಹಿನ್ನಡೆ ಅನುಭವಿಸಿದರು. ಉಭಯ ತಂಡಗಳು 6 ಅಂಕಗಳನ್ನು ಹೊಂದಿದ್ದರೂ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ಭಾರೀ ಅಂತರದಿಂದ ಗೆದ್ದು ನೆಟ್‌ ರನ್‌ರೇಟ್ ಅನ್ನು ಉತ್ತಮಪಡಿಸಿಕೊಂಡಿತು.

ಗುಜರಾತ್ ಟೈಟನ್ಸ್ ಸದ್ಯ 7 ಪಂದ್ಯಗಳಿಂದ 6 ಅಂಕಗಳೊಂದಿಗೆ ಐಪಿಎಲ್ 2024ರ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಇದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಷ್ಟೇ ಪಂದ್ಯ ಮತ್ತು ಅಂಕಗಳಿಂದ 6ನೇ ಸ್ಥಾನಕ್ಕೇರಿದೆ.

ಗುಜರಾತ್ ಟೈಟನ್ಸ್ ತಂಡ ತಮ್ಮ ಮುಂದಿನ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆಲ್ಲಬೇಕು ಎಂದು ಹೇಳುವ ಮೂಲಕ ನಾಯಕ ಶುಭ್ಮನ್ ಗಿಲ್ ತಮ್ಮ ಆಟಗಾರರಿಗೆ ಎಚ್ಚರಿಸಿದರು. ಇದರಿಂದಾಗಿ ಅವರು ಪ್ರತಿ ಐಪಿಎಲ್ ಆವೃತ್ತಿಯಲ್ಲಿ ಪ್ಲೇಆಫ್ ತಲುಪುವ ದಾಖಲೆಯನ್ನು ಉಳಿಸಿಕೊಳ್ಳಬಹುದು.

ಗುಜರಾತ್ ಟೈಟನ್ಸ್ ತಮ್ಮ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಏಪ್ರಿಲ್ 21ರಂದು ತವರಿನ ಹೊರಗೆ ಆಡಲಿದೆ. ಪಂಜಾಬ್ ಕಿಂಗ್ಸ್ ಈಗಾಗಲೇ ಈ ಋತುವಿನಲ್ಲಿ ಒಮ್ಮೆ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿದೆ.

Story first published: Thursday, April 18, 2024, 9:30 [IST]
Other articles published on Apr 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+