GT vs KKR: ಪಂದ್ಯಕ್ಕೆ ತಿರುವು ನೀಡಿದ್ದೇ ಈ ಅಂಶ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 25ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಹಾಗೂ ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳು ಕಾದಾಟ ನಡೆಸಿದವು. ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದರು.
ಕೆಕೆಆರ್ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್ 55 ಎಸೆತಗಳಲ್ಲಿ 79 ರನ್ ಸಿಡಿಸಿದರು. ಇವರಿಗೆ ರೋವ್‌ಮನ್ ಪೊವೆಲ್ (27) ಜೋಡಿ ಅರ್ಧಶತಕ ಜೊತೆಯಾಟ ನೀಡಿತು. ಈ ಪಂದ್ಯದಲ್ಲಿ ಕೆಕೆಆರ್ ಮಿಡ್ಲ್ ಆರ್ಡರ್‌ನಲ್ಲಿ ಕ್ಯಾಮರೂನ್ ಗ್ರೀನ್ ದೊಡ್ಡ ಹೊಡೆತಗಳ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಅಂತಿಮವಾಗಿ ಕೆಕೆಆರ್ 20 ಓವರ್‌ಗಳಲ್ಲಿ 180 ರನ್ ಸೇರಿಸಿತು.

ಕೆಕೆಆರ್ ತಂಡದ ಬೌಲರ್‌ಗಳಾದ ಕಾಗಿಸೊ ರಬಡಾ, ಮೊಹಮ್ಮದ್ ಸಿರಾಜ್, ಅಶೋಕ್ ಶರ್ಮಾ ಬಿಗುವಿನ ದಾಳಿ ನಡೆಸಿದರು. ಇವರು ಬಿಗುವಿನ ದಾಳಿ ನಡೆಸ ಡಾಟ್ ಎಸೆತಗಳನ್ನು ಮಾಡಿದರು. ಕಗಿಸೊ ರಬಾಡ ಟಿಮ್ ಸಿಫರ್ಟ್, ಅಂಗ್‌ಕ್ರಿಶ್ ರಘುವಂಶಿ ಅವರ ವಿಕೆಟ್ ಪಡೆದು ಮಿಂಚಿದರು. ವೇಗದ ಬೌಲರ್ ಮೊಹಮ್ಮದ್ ಸಿರಾಜ್ ನಾಯಕ ಅಜಿಂಕ್ಯ ರಹಾನೆ, ಸುನಿಲ್ ನರೈನ್ ಅವರ ವಿಕೆಟ್ ಪಡೆದು ಅಬ್ಬರಿಸಿದರು.
ಕೆಕೆಆರ್ ಪಂದ್ಯ ಸೋಲಲು ಇದುವೇ ಕಾರಣ?
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಇನ್ನಿಂಗ್ಸ್ ಆಮೆಗತಿಯಲ್ಲಿ ಸಾಗಿದರೂ, ಮಧ್ಯದ ಓವರ್‌ಗಳಲ್ಲಿ ಕ್ಯಾಮರೂನ್ ಗ್ರೀನ್ ರನ್‌ಗಳನ್ನು ಕಲೆ ಹಾಕಿ ತಂಡಕ್ಕೆ ಆಧಾರವಾದರು. ಕೊನೆಯ 4 ಓವರ್‌ಗಳಲ್ಲಿ 23 ರನ್ ಸೇರಿಸಿ 4 ವಿಕೆಟ್ ಕಳೆದುಕೊಂಡಿತು. ಕೆಕೆಆರ್ ತಂಡ 32 ರನ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡಿತು. ಕೋಲ್ಕತ್ತಾ 20 ಓವರ್‌ಗಳಲ್ಲಿ ಕೆಕೆಆರ್ ಬ್ಯಾಟರ್‌ಗಳು ಬರೊಬ್ಬರಿ 57 ಡಾಟ್ ಬಾಲ್‌ಗಳನ್ನು ಆಡುವ ಮೂಲಕ ನಿರಾಸೆ ಅನುಭವಿಸಿದರು.

ಕ್ಯಾಮರೂನ್ ಗ್ರೀನ್ ಅವರ ಅದ್ಭುತ ಪ್ರಯತ್ನದ ಹೊರತಾಗಿಯೂ, ಬ್ಯಾಟ್ಸ್‌ಮನ್‌ಗಳು ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಕೊನೆಯ ಓವರ್‌ನಲ್ಲಿ ರಶೀದ್ ಖಾನ್ ಸಹ ಬಿಗುವಿನ ದಾಳಿ ನಡೆಸಿದರು. ಅಲ್ಲದೆ ಕೊನೆಯ ಎಸೆತದಲ್ಲಿ ಕ್ಯಾಮರೂನ್ ಗ್ರೀನ್ ಅವರಿಗೆ ಖೆಡ್ಡಾ ತೋಡಿದರು. ಅಂತಿಮವಾಗಿ ಕೆಕೆಆರ್ 20.0 ಓವರ್‌ಗಳಲ್ಲಿ ನಿಖರವಾಗಿ 180 ರನ್‌ಗಳಿಗೆ ಆಲೌಟ್ ಆಯಿತು.
ಪಂದ್ಯದ ಫಲಿತಾಂಶ
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್): 20 ಓವರ್‌ಗಳಲ್ಲಿ 180 ರನ್‌ಗೆ ಆಲೌಟ್; ಕ್ಯಾಮರೂನ್ ಗ್ರೀನ್ 79 (55), ರೋವ್‌ಮನ್ ಪೊವೆಲ್ 27 (20). ಕಗಿಸೋ ರಬಾಡ 3/29, ಮೊಹಮ್ಮದ್ ಸಿರಾಜ್ 2/23,
ಗುಜರಾತ್ ಟೈಟಾನ್ಸ್ (ಜಿಟಿ): 19.4 ಓವರ್‌ಗೆ 5 ವಿಕೆಟ್‌ಗೆ 181; ಶುಭಮನ್ ಗಿಲ್ 86 (50), ಜೋಸ್ ಬಟ್ಲರ್ 25 (15), ಸಾಯಿ ಸುದರ್ಶನ್ 22 (18). ವರುಣ್ ಚಕ್ರವರ್ತಿ 2/34.
ಪಂದ್ಯದ ಫಲಿತಾಂಶ: ಗುಜರಾತ್ ಟೈಟಾನ್ಸ್‌ಗೆ 5 ವಿಕೆಟ್ ಜಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications