Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

GT vs KKR: ಗಿಲ್‌ ಆರ್ಭಟ, ಗುಜರಾತ್‌ಗೆ 5 ವಿಕಟ್ ಜಯ; ಕೆಕೆಆರ್‌ಗೆ 5ನೇ ಸೋಲು

ನಾಯಕ ಶುಭಮನ್‌ ಗಿಲ್‌ (86) ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಕಗಿಸೊ ರಬಾಡ ಬಿಗುವಿನ ದಾಳಿಯ ನೆರವಿನಿಂದ ಗುಜರಾತ್ ಟೈಟಾನ್ಸ್‌ 19ನೇ ಆವೃತ್ತಿ ಐಪಿಎಲ್‌ 25ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ (ಕೆಕೆಆರ್) ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ, ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಗುಜರಾತ್ ಟೈಟಾನ್ಸ್‌ ಆಡಿದ 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಕಂಡಿದ್ದು, 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಕೋಲ್ಕತ್ತ ನೈಟ್‌ ರೈಡರ್ಸ್‌ ಲೀಗ್‌ನಲ್ಲಿ ಸತತ ಆರನೇ ಸೋಲನ್ನು ಕಂಡಿದೆ. ಈ ಮೂಲಕ ಕೆಕೆಆರ್‌ ಗೆಲುವಿನ ಹಪಹಪಿ ಮುಂದಿನ ಪಂದ್ಯಕ್ಕೆ ಶಿಫ್ಟ್‌ ಆಗಿದೆ.

GT vs KKR

181 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಶುಭಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್ ಜೋಡಿ ಮೊದಲ ವಿಕೆಟ್‌ಗೆ 57 ರನ್‌ ಜೊತೆಯಾಟದ ಕಾಣಿಕೆ ನೀಡಿತು. ಈ ಹಂತದಲ್ಲಿ 22 ರನ್‌ ಬಾರಿಸಿದ್ದ ಸಾಯಿ ಸುದರ್ಶನ್‌ ಸುನಿಲ್ ನರೈನ್‌ ಅವರಿಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಭರವಸೆಯ ಬ್ಯಾಟರ್‌ ಜೋಸ್ ಬಟ್ಲರ್ (25) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ಎಡವಿದರು.

ಗಿಲ್ ಅಬ್ಬರ

ಮಧ್ಯಮ ಕ್ರಮಾಂಕದಲ್ಲಿ ಬಂದ ವಾಷಿಂಗ್ಟನ್‌ ಸುಂದರ್ (13), ಗ್ಲೆನ್ ಫಿಲಿಪ್ಸ್‌ (19) ನಾಯಕ ಶುಭಮನ್‌ ಗಿಲ್‌ಗೆ ಉತ್ತಮ ಸಾಥ್ ನೀಡುವಲ್ಲಿ ವಿಫಲರಾದರು. ನಾಯಕ ಗಿಲ್‌ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರು 50 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಾಯದಿಂದ 86 ರನ್‌ ಸಿಡಿಸಿ ವೈಭವ್ ಆರೋರಾಗೆ ವಿಕೆಟ್‌ ಒಪ್ಪಿಸಿದರು. ರಾಹುಲ್ ತೆವಾಟಿಯಾ (ಅಜೇಯ 7) ಹಾಗೂ ಶಾರೂಖ್ ಖಾನ್ (ಅಜೇಯ 3) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಜಿಟಿ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 181 ರನ್‌ ಸೇರಿಸಿ, ಜಯ ಸಾಧಿಸಿತು.

ಗ್ರೀನ್ ಏಕಾಂಗಿ ಹೋರಾಟ

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡದ ಆರಂಭ ಕಳಪೆಯಾಗಿತ್ತು. ನಾಯಕ ಅಜಿಂಕ್ಯ ರಹಾನೆ (0), ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅಂಗ್‌ಕ್ರಿಷ್‌ ರಘುವಂಶಿ (8) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಟಿಮ್ ಸಿಫರ್ಟ್‌ (18) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಪವರ್‌ ಪ್ಲೇನಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕ್ಯಾಮರೂನ್‌ ಗ್ರೀನ್‌ ಹಾಗೂ ರೋವ್‌ಮನ್ ಪೊವೆಲ್‌ ಜೋಡಿ ಭರ್ಜರಿ ಜೊತೆಯಾಟವನ್ನು ನೀಡುವಲ್ಲಿ ವಿಫಲರಾದರು. ಈ ಜೋಡಿ 55 ರನ್‌ ಕಾಣಿಕೆ ನೀಡಿತು. ಈ ಹಂತದಲ್ಲಿ ಪೊವೆಲ್ 27 ರನ್‌ ಸಿಡಿಸಿ ಔಟ್ ಆದರು.

GT vs KKR

ಐದನೇ ವಿಕೆಟ್‌ಗೆ ಅನುಕೂಲ್ ರಾಯ್, ಗ್ರೀನ್ ಜೋಡಿ ಸಹ 60 ರನ್‌ ಜೊತೆಯಾಟ ನೀಡಿತು. ಕೆಳ ಕ್ರಮಾಂಕದಲ್ಲಿ ಯಾವುದೇ ಬ್ಯಾಟರ್‌ ಸ್ಥಿರ ಪ್ರದರ್ಶನ ನೀಡಲಿಲ್ಲ. ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್‌ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ 79 ರನ್‌ ಸಿಡಿಸಿ ಔಟ್ ಆದರು, ಅಂತಿಮವಾಗಿ ಕೆಕೆಆರ್‌ 20 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲೌಟ್ ಆಯಿತು.

Story first published: Friday, April 17, 2026, 23:58 [IST]
Other articles published on Apr 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+