ಭಾನುವಾರ, ಮಾರ್ಚ್ 24ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 5ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತಮ್ಮ ಆರಂಭಿಕ ಪಂದ್ಯದಲ್ಲಿ ಸ್ಪರ್ಧಿಸಿದ್ದರಿಂದ ರೋಚಕತೆ ಹೆಚ್ಚಿತ್ತು.
ಆದಾಗ್ಯೂ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಮಾಜಿ ಚಾಂಪಿಯನ್ ಗುಜರಾತ್ ಟೈಟನ್ಸ್ 6 ರನ್‌ಗಳ ರೋಚಕ ಗೆಲುವು ಸಾಧಿಸಿತು ಮತ್ತು ತಮ್ಮ ನಿರ್ಗಮಿತ ಆಟಗಾರ ಹಾರ್ದಿಕ್ ಪಾಂಡ್ಯಗೆ ಸರಿಯಾದ ಠಕ್ಕರ್ ನೀಡಿತು.

ಪಂದ್ಯ ಮುಂದುವರೆದಂತೆ, ಹಾರ್ದಿಕ್ ಪಾಂಡ್ಯ ಒಂದು ಕ್ಷಣ ಎದ್ದು ಕಾಣುತ್ತಿದ್ದರು. ತಮ್ಮ ಫೀಲ್ಡಿಂಗ್ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಪ್ರತಿ ಎಸೆತಕ್ಕೂ ಮೈದಾನದಲ್ಲಿ ಫೀಲ್ಡ್ ಸೆಟ್ ಮಾಡುತ್ತಿದ್ದರು. ಇದು ಮುಂಬೈ ಇಂಡಿಯನ್ಸ್ ಹಿಂದಿನ ಮತ್ತು ಪ್ರಸ್ತುತ ಭಾರತೀಯ ನಾಯಕ ರೋಹಿತ್ ಶರ್ಮಾ ಅವರನ್ನು ಬಿಡಲಿಲ್ಲ.
ಹಾರ್ದಿಕ್ ಪಾಂಡ್ಯ ಅವರು ಮಾಜಿ ನಾಯಕ ರೋಹಿತ್ ಶರ್ಮಾಗೆ ಮೈದಾನದ ತುಂಬೆಲ್ಲಾ ಫೀಲ್ಡಿಂಗ್ ಮಾಡಿಸಿದರು. ಅಲ್ಲದೆ, ಲಾಂಗ್ ಆನ್‌ನಲ್ಲಿ ಫೀಲ್ಡಿಂಗ್ ಮಾಡಲು ಬೆರಳು ತೋರಿ ನಿರ್ದೇಶಿಸಿದರು.

ಹಾರ್ದಿಕ್ ಪಾಂಡ್ಯ ಹಲವು ಬಾರಿ ರೋಹಿತ್ ಶರ್ಮಾ ಅವರ ಫೀಲ್ಡಿಂಗ್ ಬದಲಿಸಿದರು. ಮೊದಲು ಸ್ಲಿಪ್, ನಂತರ ಲಾಂಗ್ ಆನ್, ಒಮ್ಮೆ ಲೆಗ್ ಸೈಡ್, ಮತ್ತೊಮ್ಮೆ ಮಿಡ್ ವಿಕೆಟ್ನತ್ತ ನಿಲ್ಲಿಸಿದರು. ಹೀಗೆ ರೋಹಿತ್ ಶರ್ಮಾ ಅವರನ್ನು ಮೈದಾನದ ಮೂಲೆ ಮೂಲೆಯಲ್ಲಿ ಓಡಾಡುವಂತೆ ಮಾಡಿದರು.
ಅಂತಿಮ ಓವರ್ಗಳ ವೇಳೆ 30-ಯಾರ್ಡ್ ಸರ್ಕಲ್ನಿಂದ ಮತ್ತೊಮ್ಮೆ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾರನ್ನು ಲಾಂಗ್ ಆನ್ನತ್ತ ಕಳುಹಿಸಿದರು. ಲಾಂಗ್ ಆನ್ನತ್ತ ತೆರಳುವಂತೆ ರೋಹಿತ್ ಶರ್ಮಾಗೆ ಬೆರಳು ತೋರಿಸಿ ಸನ್ನೆ ಮಾಡಿ ಸೂಚಿಸಿದಾಗ, ಗೊಂದಲದಿಂದ ನಾನಾ? ಎಂದು ಕೇಳುತ್ತಿರುವುದು ಕೂಡ ಕಂಡುಬಂತು. ಹೌದು ನೀನೇ, ಬೌಂಡರಿ ಲೈನ್‌ನತ್ತ ಹೋಗು ಎಂದು ಹಾರ್ದಿಕ್ ಪಾಂಡ್ಯ ಕೈಸನ್ನೆ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಮುಂಬೈ ಇಂಡಿಯನ್ಸ್ ಆಗಲಿ ಅಥವಾ ಭಾರತ ತಂಡಕ್ಕಾಗಲಿ ರೋಹಿತ್ ಶರ್ಮಾ 30-ಯಾರ್ಡ್ ವೃತ್ತದೊಳಗೆ ಫೀಲ್ಡಿಂಗ್ ಮಾಡುತ್ತಿದ್ದರಿಂದ, ಅವರನ್ನು ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡಿಸುವ ಕ್ರಮವು ಅನೇಕರನ್ನು ಆಶ್ಚರ್ಯಗೊಳಿಸಿತು.
ಆದರೂ, ರೋಹಿತ್ ಶರ್ಮಾ ಅವರು ನಾಯಕ ಹಾರ್ದಿಕ್ ಪಾಂಡ್ಯ ಆದೇಶ ಪಾಲಿಸಿದರು. ಹಿಂಜರಿಕೆಯೊಂದಿಗೆ, ಅಂತಿಮವಾಗಿ ತನ್ನನ್ನು ಬೌಂಡರಿ ಗೆರೆ ಬಳಿ ನಿಂತರು ಮತ್ತು ಒಂದು ಉತ್ತಮ ಕ್ಯಾಚ್ ಸಹ ಪಡೆದರು.
ಈ ಘಟನೆಯು ಆರಂಭದಲ್ಲಿ ವೀಕ್ಷಕರು ಮತ್ತು ಅಭಿಮಾನಿಗಳ ಗಮನಕ್ಕೆ ಬರಲಿಲ್ಲ. ಆದರೆ ಎಕ್ಸ್ (ಟ್ವಿಟ್ಟರ್) ನಲ್ಲಿ ಇಬ್ಬರು ಆಟಗಾರರ ನಡುವಿನ ಡೈನಾಮಿಕ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಡೈನಾಮಿಕ್ಸ್‌ಗೆ ಪರಿಣಾಮಗಳನ್ನು ಚರ್ಚಿಸಿದರು.
ನಾಯಕತ್ವದ ಅಧಿಕಾರದ ಈ ಪ್ರದರ್ಶನದಿಂದ ಎರಡು ಫ್ರಾಂಚೈಸಿಗಳ ನಡುವಿನ ಆನ್-ಫೀಲ್ಡ್ ಪೈಪೋಟಿಯು ತೀವ್ರಗೊಂಡಿತು. ಈಗಾಗಲೇ ಉದ್ವಿಗ್ನ ಪರಿಸ್ಥಿತಿಗೆ ಹೆಚ್ಚುವರಿಯಾಗಿ ಹೊಸ ಪದರವನ್ನು ಸೇರಿಸಿತು. ನೂತನ ನಾಯಕ ಹಾರ್ದಿಕ್ ಪಾಂಡ್ಯರನ್ನು ರೋಹಿತ್ ಶರ್ಮಾ ಮತ್ತು ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168 ರನ್‌ಗಳನ್ನು ಕಲೆಹಾಕಿತು.
ಇನ್ನು 169 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್‌ಗಳನ್ನು ಮಾತ್ರ ಗಳಿಸಿ 6 ವಿಕೆಟ್‌ಗಳ ವಿರೋಚಿತ ಸೋಲು ಅನುಭವಿಸಿತು.