Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

GT vs PBKS: ಪಂಜಾಬ್‌ ಕಿಂಗ್ಸ್‌ಗೆ ಸತತ ಎರಡನೇ ಸೋಲು; ಗುಜರಾತ್‌ ಟೈಟಾನ್ಸ್‌ಗೆ ಹ್ಯಾಟ್ರಿಕ್‌ ಜಯ

ಅಹಮದಾಬಾದ್: ಭರವಸೆಯ ಆಲ್‌ರೌಂಡರ್‌ ಜೇಸನ್‌ ಹೋಲ್ಡರ್‌ (24ಕ್ಕೆ 4) ಹಾಗೂ ಆರಂಭಿಕ ಸಾಯಿ ಸುದರ್ಶನ್‌ ಅವರು ಬಾರಿಸಿದ ಅರ್ಧಶತಕದ ಬಲದಿಂದ ಗುಜರಾತ್ ಟೈಟಾನ್ಸ್‌ 19ನೇ ಆವೃತ್ತಿ ಐಪಿಎಲ್‌ನ 46ನೇ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್‌ ಕಿಂಗ್ಸ್‌ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿತು. ಈ ಗೆಲುವಿನ ಮೂಲಕ ಗುಜರಾತ್ ಟೈಟಾನ್ಸ್ ಲೀಗ್‌ನಲ್ಲಿ 6ನೇ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ. ಇನ್ನು ಸತತ ಎರಡನೇ ಸೋಲು ಕಂಡರೂ ಪಂಜಾಬ್‌ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

164 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಕಳಪೆಯಾಗಿತ್ತು. ನಾಯಕ ಶುಭಮನ್‌ ಗಿಲ್‌ (5) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಆರಂಭಿಕ ಆಟಗಾರ ಸಾಯಿ ಸುದರ್ಶನ್‌ ಹಾಗೂ ಭರವಸೆಯ ಬ್ಯಾಟರ್‌ ಜೋಸ್‌ ಬಟ್ಲರ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ತಂಡಕ್ಕೆ ಅಗತ್ಯ ರನ್‌ಗಳನ್ನು ಕಲೆ ಹಾಕುತ್ತಾ ಸಾಗಿದರು. ಅಲ್ಲದೆ ಈ ಜೋಡಿ 40 ಎಸೆತಗಳಲ್ಲಿ 53 ರನ್‌ ಸೇರಿಸಿತು. ಈ ಹಂತದಲ್ಲಿ ಜೋಸ್‌ ಬಟ್ಲರ್‌ 26 ರನ್ ಬಾರಿಸಿದ್ದಾಗ ಕನ್ನಡಿಗ ವಿಜಯ್‌ ಕುಮಾರ್‌ ವೈಶಾಖ್ ತೋಡಿದ ಖೆಡ್ಡಾಗೆ ಬಲಿಯಾದರು.

GT vs PBKS

ಆರಂಭಿಕ ಆಟಗಾರ ಸಾಯಿ ಸುದರ್ಶನ್‌ 41 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 57 ರನ್‌ ಸಿಡಿಸಿ ವಿಜಯ್ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು. ನಿಶಾಂತ್ ಸಿಂಧು 15 ರನ್‌ ಬಾರಿಸಿ ಔಟ್ ಆದರು. ಕೊನೆಯ ವರೆಗೆ ಸಮಯೋಚಿತ ಬ್ಯಾಟಿಂಗ್ ನಡೆಸಿದ ವಾಷಿಂಗ್ಟನ್‌ ಸುಂದರ್‌ ಅಜೇಯ 40 ರನ್‌ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು. ಅಂತಿಮವಾಗಿ 19.5 ಓವರ್‌ಗಳಲ್ಲಿ 6 ವಿಕೆಟ್‌ಗೆ 167 ರನ್‌ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಗುಜರಾತ್‌ ಟೈಟಾನ್ಸ್‌ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಆರಂಭ ಕಳಪೆಯಾಗಿತ್ತು. ಭರವಸೆಯ ಬ್ಯಾಟರ್‌ ಪ್ರಿಯಾಂಶ್ ಆರ್ಯಾ (2) ಹಾಗೂ ಕೂಪರ್ ಕೊನೊಲಿ (0) ಅವರನ್ನು ಮೊದಲ ಓವರ್‌ನಲ್ಲೇ ಗುಜರಾತ್ ಟೈಟಾನ್ಸ್ ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್‌ ಖೆಡ್ಡಾ ತೋಡಿ ತಂಡ ಆರಂಭದಲ್ಲೇ ಮೇಲುಗೈ ಸಾಧಿಸಲು ನೆರವಾದರು. ಪ್ರಭ್‌ಸಿಮ್ರನ್‌ ಸಿಂಗ್ (15), ಶ್ರೇಯಸ್‌ ಅಯ್ಯರ್ (19) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಪಂಜಾಬ್‌ ಸಂಕಷ್ಟಕ್ಕೆ ಸಿಲುಕಿತು. ಕಿಂಗ್ಸ್‌ 8.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಸೂರ್ಯಾಂಶ್ ಅರ್ಧಶತಕ

ಈ ಹಂತದಲ್ಲಿ ತಂಡಕ್ಕೆ ಆಧಾರವಾಗಿದ್ದು ಭರವಸೆಯ ಬ್ಯಾಟರ್‌ ಮಾರ್ಕಸ್‌ ಸ್ಟಾಯ್ನಿಸ್‌ ಹಾಗೂ ಯುವ ಆಟಗಾರ ಸೂರ್ಯಾಂಶ್ ಶೆಡ್ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಗಿ 44 ಎಸೆತಗಳಲ್ಲಿ 79 ರನ್‌ ಸೇರಿಸಿತು. ಈ ವೇಳೆ ಸೊಗಸಾದ ಬ್ಯಾಟಿಂಗ್ ನಡೆಸಿದ ಸೂರ್ಯಾಂಶ್ ಶೆಡ್ಗೆ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ 57 ರನ್‌ ಸಿಡಿಸಿ ಔಟ್ ಆದರು. ಮಾರ್ಕಸ್‌ 40, ಮಾರ್ಕೊ ಜಾನ್ಸನ್‌ 20 ರನ್‌ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 163 ರನ್‌ ಸೇರಿಸಿತು.

ಟೈಟಾನ್ಸ್‌ ಪರ ಆಲ್‌ರೌಂಡರ್‌ ಜೇಸನ್‌ ಹೋಲ್ಡರ್‌ 4, ಮೊಹಮ್ಮದ್‌ ಸಿರಾಜ್‌, ಕಗಿಸೊ ರಬಡಾ ತಲಾ 2 ವಿಕೆಟ್‌ ಪಡೆದರು.

Story first published: Sunday, May 3, 2026, 23:49 [IST]
Other articles published on May 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+