GT vs RR Dream 11: ಯಾವ ಆಟಗಾರರನ್ನು ತಂಡದಲ್ಲಿ ಇರಿಸಿಕೊಳ್ಳಬೇಕು? ಯಾರಿಗೆ ಕ್ಯಾಪ್ಟನ್ ಪಟ್ಟ?
ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕ ಘಟ್ಟದತ್ತ ಮುಖ ಮಾಡಿದೆ. ಈ ಲೀಗ್‌ನ 23ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಸ್ಟಾರ್ ಆಟಗಾರರು ಅಂಗಳಕ್ಕೆ ಪ್ರವೇಶಿಸಲಿದ್ದಾರೆ. ಇನ್ನು ಎರಡೂ ತಂಡಗಳಲ್ಲಿ ವಿಶ್ವ ವಿಖ್ಯಾತ ಆಟಗಾರರು ಇದ್ದಾರೆ. ಈ ವೇಳೆ ಫ್ಯಾಂಟಸಿ ಟೀಮ್ ಮಾಡುವವರು ಯಾವ ಹನ್ನೊಂದು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಚಿಂತೆಯಲ್ಲಿ ಇರುತ್ತಾರೆ.
ಡ್ರೀಮ್ ಇಲೆವೆನ್ ತಂಡವನ್ನು ಮಾಡಲು ಆಸಕ್ತಿ ಹೊಂದಿರುವವರು ದಿನವೂ ಯಾರನ್ನು ತಂಡದಲ್ಲಿ ಇರಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿ ಇರುತ್ತಾರೆ. ಪ್ರಸಕ್ತ ವರ್ಷದ ಫಾರ್ಮ್ ಆಧಾರಿಸಿ ಹಲವರು ಸ್ಟಾರ್ ಆಟಗಾರರಿಗೆ ಮಣೆ ಹಾಕುತ್ತಾರೆ. ಇನ್ನು ಜಿಟಿ ಪ್ರಸಕ್ತ ಲೀಗ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ ಮೂರು ಜಯ, 1 ಸೋಲು ಕಂಡಿದ್ದು 6 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್ ಲೀಗ್‌ನಲ್ಲಿ 2 ಜಯ ದಾಖಲಿಸಿದೆ.

ನಾಯಕ, ಉಪನಾಯಕ ಯಾರು?
ಉಭಯ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು ನಾಯಕ ಹಾಗೂ ಉಪನಾಯಕರನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಗುಜರಾತ್ ಪರ ಜೋಸ್ ಬಟ್ಲರ್ ಅವರಿಗೆ ನಾಯಕ ಸ್ಥಾನ ನೀಡಿದರೆ ಬೆಸ್ಟ್. ಉಪನಾಯಕನ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಹಾಗೂ ಸಾಯಿ ಸುದರ್ಶನ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ಭಾರೀ ಬೆಸ್ಟ್.
ವಿಕೆಟ್ ಕೀಪರ್ಸ್ ಯಾರು?
18ನೇ ಆವೃತ್ತಿಯ ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಆರ್ಭಟ ನಡೆಸಿ, ವಿಕೆಟ್ ಹಿಂದೆಯೂ ಚಾಣಕ್ಯ ತನ ಪ್ರದರ್ಶಿಸುವ ಆಟಗಾರರಲ್ಲಿ ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಜೋಸ್ ಬಟ್ಲರ್ ಈ ಬಾರಿ ಸಖತ್ ಫ್ಲೋದಲ್ಲಿ ಇದ್ದಾರೆ. ಇವರನ್ನು ವಿಕೆಟ್ ಕೀಪರ್ ಆಯ್ಕೆಯಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಇನ್ನು ಸಂಜು ಸ್ಯಾಮ್ಸನ್ ಸಹ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಬಲ್ಲ ಆಟಗಾರ.
ಬ್ಯಾಟರ್ಸ್: ಗುಜರಾತ್ ಟೈಟನ್ಸ್ ತಂಡದ ಆರಂಭಿಕರಾದ ಶುಭಮನ್ ಗಿಲ್, ಸಾಯಿ ಸುದರ್ಶನ್ ಅವರನ್ನು ತಂಡದಲ್ಲಿ ಇರಿಸಿಕೊಳ್ಳುವುದು ಬೆಸ್ಟ್. ಈ ಬಿಗ್ ಪ್ಲೇಯರ್‌ಗಳು ಉತ್ತಮವಾಗಿ ಆಡುತ್ತಿದ್ದಾರೆ. ಇವರಿಗೆ ಮಣೆ ಹಾಕುವುದು ಬೆಸ್ಟ್. ಇನ್ನು ರಾಜಸ್ಥಾನ ಪರ ಆರಂಭಿಕ ಯಶಸ್ವಿ ಜೈಸ್ವಾಲ್ ಹಿಂದಿನ ಪಂದ್ಯದಲ್ಲಿ ಲಯಕ್ಕೆ ಮರಳಿದ್ದರಿಂದ ಇವರನ್ನು ತಂಡದಲ್ಲಿ ಇರಿಸಿಕೊಳ್ಳುವುದು ಉತ್ತಮ.

ಆಲ್‌ರೌಂಡರ್ಸ್: ರಾಜಸ್ಥಾನ ಪರ ರಿಯಾನ್ ಪರಾಗ್ ಹಾಗೂ ವನಿಂದು ಹಸರಂಗ್ ತಂಡಕ್ಕೆ ತಮ್ಮ ಅನುಭವ ಧಾರೆ ಎರೆಯುತ್ತಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದಲ್ಲಿ ಆಡುವ ಅವಕಾಶವನ್ನು ಪಡೆದ ವಾಷಿಂಗ್ಟನ್ ಸುಂದರ್ ಅವರ ಬ್ಯಾಟಿಂಗ್ ನೋಡಿದರೆ ಅವರ ಆಯ್ಕೆ ಮಾಡುವುದು ಬೆಸ್ಟ್.
ಬೌಲರ್ಸ್: ರಾಜಸ್ಥಾನ ಪರ ಬೌಲರ್ ಆಗಿ ಜೋಫ್ರಾ ಆರ್ಚರ್ ಅವರನ್ನು ಇರಿಸಿಕೊಳ್ಳುವುದು ಬೆಸ್ಟ್. ಇನ್ನು ಗುಜರಾತ್ ಪರ ಅಮೋಘ ಬೌಲಿಂಗ್ ಸ್ಪೆಲ್ ನಡೆಸುತ್ತಿರುವ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ಅವರ ಪ್ರಸಕ್ತ ಪ್ರದರ್ಶನವನ್ನು ನೀಡಿ ಇವರಿಗೆ ಮಣೆ ಹಾಕವುದು ಉತ್ತಮ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications