Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Turning Point: ಗುಜರಾತ್‌ ವಿರುದ್ಧ ರಾಜಸ್ಥಾನ ಸೋಲಲು ಕಾರಣವಾಗಿದ್ದೇ ಆ ಕ್ಯಾಚ್‌

ಗುಜರಾತ್‌ ಟೈಟನ್ಸ್ ತವರಿನಲ್ಲಿ ಜಯದ ಓಟವನ್ನ ಮುಂದುವರೆಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ನೀಡಿ ಅಬ್ಬರಿಸಿದೆ. ಈ ಮೂಲಕ ಪ್ರಸಕ್ತ ಐಪಿಎಲ್‌ನಲ್ಲಿ ಬ್ಯಾಕ್ ಟು ಬ್ಯಾಕ್‌ ನಾಲ್ಕು ಪಂದ್ಯಗನ್ನು ಗೆದ್ದ ಹಿರಿಮೆಗೆ ಪಾತ್ರವಾಗಿದೆ. ಈ ವೇಳೆ ತಂಡದ ಜಯದಲ್ಲಿ ಹಲವರು ತಮ್ಮದೇ ಆದ ರೀತಿಯಲ್ಲಿ ಕಾಣಿಕೆ ನೀಡಿದ್ದಾರೆ. ಈ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರು ಸಾಯಿ ಸುದರ್ಶನ್‌.

ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 217 ರನ್‌ ಸೇರಿಸಿತು. ಈ ವೇಳೆ ಬ್ಯಾಟಿಂಗ್‌ನಲ್ಲಿ ಜೋಸ್ ಬಟ್ಲರ್, ಶಾರೂಖ್ ಖಾನ್‌ ಚಿಕ್ಕ ಚಿಕ್ಕ ಇನಿಂಗ್ಸ್‌ಗಳ ಮೂಲಕ ದೊಡ್ಡ ಮೊತ್ತ ಸೇರಿಸುವಲ್ಲಿ ಶ್ರಮಿಸಿದರು. ಆದರೆ ಆರಂಭಿಕ ಸಾಯಿ ಸುದರ್ಶನ್‌ ಆರ್ಭಟಿಸಿದರು. ಪ್ರಸಕ್ತ ಐಪಿಎಲ್‌ ಲೀಗ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್‌ 82 ರನ್‌ ಬಾರಿಸಿ ಔಟ್ ಆದರು. ಇವರ ಆಟಕ್ಕೆ ಪಂದ್ಯ ಶ್ರೇಷ್ಠ ಗರಿ ಸಹ ಸಂದಿತು.

GT vs RR IPL 2025 Sai Kishore s Catch Turns the Match as Gujarat Beats Rajasthan

ಭರವಸೆಯ ಆಟಗಾರರು ಫ್ಲಾಪ್‌

ರಾಜಸ್ಥಾನ ಸವಾಲಿನ ಮೊತ್ತವನ್ನು ಹಿಂಬಾಲಿಸುವಾಗ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನೇ ನೆನಪು ಹಾರಿತು. ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್, ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರಾಣಾ, ಧ್ರುವ್ ಜುರೇಲ್‌ ಪಟಪಟನೆ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದ್ರು. ಆದರೆ ಆರಂಭಿಕ ಸಂಜು ಸ್ಯಾಮ್ಸನ್‌ ಮಾತ್ರ 13 ಓವರ್‌ಗಳ ವರೆಗೆ ಗೆಲುವಿನ ಆಸೆಯನ್ನು ತಂಡದ ಪರ ಚಿಗುರಿಸಿದ್ದರು.

ಒಂದು ಹಂತದಲ್ಲಿ ರಾಜಸ್ಥಾನ ರಾಯಲ್ಸ್ 12 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 115 ರನ್‌ ಗಳಿಸಿತ್ತು. ಅಲ್ಲದೆ 9.58ರ ಸರಾಸರಿಯಲ್ಲಿ ರನ್‌ಗಳನ್ನು ಕಲೆ ಹಾಕುತ್ತಲೇ ಸಾಗಿತ್ತು. ಆದರೆ ಅಗತ್ಯ ರನ್‌ ರೇಟ್‌ 12.87 ಆಗಿತ್ತು. ಈ ರನ್‌ ರೇಟ್‌ ತಗ್ಗಿಸಲು ಸಂಜು ಸ್ಯಾಮ್ಸನ್‌ ಮುಂದಾಗಿದ್ದರು. ಇವರಿಗೆ ಶಿಮ್ರೋನ್ ಹೆಟ್ಮೆಯರ್ ಸಹ ಸಾಥ್ ನೀಡುತ್ತಿದ್ದರು. ಈ ಹಂತದಲ್ಲಿ ರಾಜಸ್ಥಾನಕ್ಕೆ 48 ಎಸೆತಗಳಲ್ಲಿ 103 ರನ್‌ ಅವಶ್ಯಕತೆ ಇತ್ತು.

GT vs RR IPL 2025 Sai Kishore s Catch Turns the Match as Gujarat Beats Rajasthan

ಪಂದ್ಯಕ್ಕೆ ತಿರುವ ಸಿಕ್ಕಿದ್ದೇ ಇಲ್ಲಿ

ಬೆಳೆಯುತ್ತಿರುವ ರನ್‌ ರೇಟ್‌ ತಗ್ಗಿಸಲು ಬಿಗ್ ಶಾಟ್ ಹೊಡೆಯುವುದನ್ನು ಬಿಟ್ಟರೆ ಬೇರೆ ಯಾವುದೇ ಮಾರ್ಗವೂ ಇರಲಿಲ್ಲ. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಗುಜರಾತ್‌ ಪರ್ಫೆಕ್ಟ್‌ ಫಿಲ್ಡ್‌ ಸೆಟ್ ಮಾಡಿತು. ಅಷ್ಟೋತ್ತಿಗಾಲೇ ಸೆಟ್‌ ಆಗಿದ್ದ ಸಂಜು ತಮ್ಮ ಇನಿಂಗ್ಸ್‌ನ 28ನೇ ಎಸೆತವನ್ನು ಎದುರಿಸುವಲ್ಲಿ ವಿಫಲರಾದರು. ಪ್ರಸಿದ್ಧ ಕೃಷ್ಣಾ ಗಂಟೆಗೆ 139.1 ಕಿಲೋ ಮೀಟರ್‌ನಲ್ಲಿ ಎಸೆದ ಎಸೆತ ಸಂಜು ಅವರನ್ನು ಕೆರಳಿಸಿತು. ಶಾರ್ಟ್‌ ಥರ್ಡ್‌ ಮ್ಯಾನ್‌ ನತ್ತ ಇದನ್ನು ತಳ್ಳಿ ನಾಲ್ಕು ರನ್‌ ಬಾರಿಸುವ ಇರಾದೆ ಅವರದ್ದಾಗಿತ್ತು. ಆದರೆ 30 ಯಾರ್ಡ್ ಸರ್ಕಲ್‌ನಲ್ಲಿ ನಿಂತಿದ್ದ ಸಾಯಿ ಕಿಶೋರ್ ಅವರ ಆಸೆಗೆ ವಿಲನ್ ಆದ್ರು. ಪರಿಣಾಮ ಪ್ರಸಿದ್ಧ ಮಾಡಿದ ರಣ ತಂತ್ರ ವರ್ಕ್‌ಔಟ್ ಆಯಿತು.

ಸಂಜು ಸ್ಯಾಮ್ಸನ್‌ ವಿಕೆಟ್ ಬೀಳುತ್ತಿದ್ದಂತೆ ರಾಜಸ್ಥಾನ ಬ್ಯಾಟರ್‌ಗಳು ಬಂದು ಹೋಗುವ ತಮ್ಮ ಸಂಪ್ರದಾಯವನ್ನು ಮುಗಿಸಿದರು. ಪರಿಣಾಮ ರಾಜಸ್ಥಾನದ ಹ್ಯಾಟ್ರಿಕ್ ಗೆಲುವಿನ ಆಸೆಗೆ ಬ್ರೇಕ್ ಬಿದ್ದಿತು.

Story first published: Thursday, April 10, 2025, 0:55 [IST]
Other articles published on Apr 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+