Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

GT vs RR: ಮೊದಲ ಜಯದ ಹುಡುಕಾಟದಲ್ಲಿ ಗುಜರಾತ್‌

ಅಹಮದಾಬಾದ್‌: ಇಂಡಿಯನ್ ಪ್ರೀಮಿಯರ್ ಲೀಗ್‌ ( ಐಪಿಎಲ್) 19ನೇ ಆವೃತ್ತಿಯ 9ನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಶನಿವಾರ ಎರಡನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಅಂಕದ ಖಾತೆಯನ್ನು ಓಪನ್ ಮಾಡುವ ಆಸೆ ಜಿಟಿ ತಂಡದ್ದಾಗಿದೆ. ಇನ್ನು ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಕನಸು ರಾಜಸ್ಥಾನ್ ತಂಡದ್ದಾಗಿದೆ.

ರಾಜಸ್ಥಾನ ತಂಡ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಮಣಿಸಿತ್ತು. ಆದರೆ ಗುಜರಾತ್ ಟೈಟಾನ್ಸ್ ತಂಡ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋಲು ಕಂಡಿದೆ. ಹೀಗಾಗಿ ಈ ಪಂದ್ಯ ರೋಚಕತೆ ಹೆಚ್ಚಿಸಿದೆ. ಈಗಾಗಲೇ ಉಭಯ ತಂಡಗಳು ಐಪಿಎಲ್‌ನಲ್ಲಿ 8 ಬಾರಿ ಮುಖಾಮುಖಿಯಾಗಿದ್ದು 6ರಲ್ಲಿ ಗುಜರಾತ್, 2ರಲ್ಲಿ ರಾಯಲ್ಸ್‌ ಜಯ ಸಾಧಿಸಿದೆ.

GT vs RR

ಗುಜರಾತ್‌ ತಂಡ ಮೊದಲ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ. ತಂಡದ ಭರವಸೆಯ ಆರಂಭಿಕ ಆಟಗಾರ ಸಾಯಿ ಸುದರ್ಶನ್‌ ಮೊದಲ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರು ಎರಡನೇ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಬೇಕಿದೆ. ಇನ್ನು ನಾಯಕ ಶುಭಮನ್‌ ಗಿಲ್‌ ಹಾಗೂ ಜೋಸ್‌ ಬಟ್ಲರ್‌ ಪಂಜಾಬ್‌ ವಿರುದ್ಧ ಸಮಯೋಚಿತ ಆಟವನ್ನು ಆಡಿದರೂ ಸಹ ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಹೀಗಾಗಿ ಈ ಆಟಗಾರರು ಸಹ ಟಾಪ್‌ ಆರ್ಡರ್‌ನಲ್ಲಿ ಅಬ್ಬರಿಸಿ ತವರಿನ ಅಭಿಮಾನಿಗಳನ್ನು ರಂಜಿಸಬೇಕಿದೆ.

ಗೆಲುವಿನ ಕನಸು

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಗ್ಲೇನ್‌ ಫಿಲಿಪ್ಸ್‌, ವಾಷಿಂಗ್ಟನ್‌ ಸುಂದರ್‌, ಶಾರೂಕ್ ಖಾನ್‌ ಹಾಗೂ ರಾಹುಲ್ ತೆವಾಟಿಯಾ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಬೇಕಿದೆ ಅಂದಾಗ ಗೆಲುವಿನ ಕನಸು ನನಸಾಗುತ್ತದೆ.

GT vs RR

ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್‌ ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ರನ್‌ಗಳಿಗೆ ಕಡಿವಾಣ ಹಾಕಿದ್ದರು. ಹೀಗಾಗಿ ಇವರ ಮೇಲೂ ಒತ್ತಡವಿದೆ. ಕಗಿಸೊ ರಬಾಡ, ಅಶೋಕ್ ಶರ್ಮಾ ರನ್‌ಗಳಿಗೆ ಬ್ರೇಕ್‌ ಹಾಕಬೇಕಿದೆ. ರಾಶೀದ್ ಖಾನ್, ವಾಷಿಂಗ್ಟನ್‌ ಸುಂದರ್ ಸ್ಪಿನ್ ಜಾದು ನಡೆಸಬೇಕಿದೆ. ಕರ್ನಾಟಕದ ಸ್ಟಾರ್ ಆಟಗಾರ ಪ್ರಸಿದ್ಧ್ ಕೃಷ್ಣ ಪಂಜಾಬ್ ವಿರುದ್ಧ 3 ವಿಕೆಟ್‌ ಕಬಳಿಸಿ ಮಿಂಚಿದ್ದರು. ಇದೇ ರೀತಿಯ ದಾಳಿಯನ್ನು ಸಂಘಟಿಸುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಗೆಲುವಿನ ಕನಸು ನನಸಾಗುತ್ತದೆ.

ವೈಭವ್ ಆಕರ್ಷಣೆ

ರಾಜಸ್ಥಾನ್ ರಾಯಲ್ಸ್‌ ತಾನಾಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಬ್ಬರಿಸಿತ್ತು. ಯುವ ಆಟಗಾರ ವೈಭವ್ ಸೂರ್ಯವಂಶಿ ಸಿಎಸ್‌ಕೆ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದ್ದರು. ಇವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಇನ್ನು ಯಶಸ್ವಿ ಜೈಸ್ವಾಲ್‌, ಧ್ರುವ್ ಜುರೇಲ್‌ ಹಾಗೂ ನಾಯಕ ರಿಯಾನ್ ಪರಾಗ್ ಅವರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರೆ, ಮತ್ತೊಂದು ಗೆಲುವಿನ ಕನಸು ಸಾಕಾರವಾಗುತ್ತದೆ. ಬೌಲಿಂಗ್‌ನಲ್ಲಿ ಜೋಫ್ರಾ ಆರ್ಚರ್‌ ಹಾಗೂ ನಾಂಡ್ರಿ ಬರ್ಗರ್‌ ಭರ್ಜರಿ ಲಯದಲಿದ್ದಾರೆ. ಇವರಿಗೆ ಆಲ್‌ರೌಂಡರ್‌ ರವೀಂದ್ರ ಜಡೇಜಾ, ರವಿ ಬಿಷ್ಣೋಯಿ ಉತ್ತಮ ಸಾಥ್ ನೀಡಬೇಕಿದೆ.

ಪಂದ್ಯದ ಸಮಯ: ಸಂಜೆ 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌, ಜಿಯೋ ಹಾಟ್‌ ಸ್ಟಾರ್‌

ಎರಡನೇ ಗೆಲುವು ಯಾರಿಗೆ?

ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಮಧ್ಯಾಹ್ನ 3.30ಕ್ಕೆ ನಡೆಯಲಿದ್ದು, ಪಂದ್ಯಕ್ಕೆ ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣ ಸಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಎರಡನೇ ಗೆಲುವಿನ ನಗೆ ಬೀರಲು ಎರಡೂ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ.

Story first published: Friday, April 3, 2026, 18:55 [IST]
Other articles published on Apr 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+