GT vs RR: ಫೈನಲ್‌ಗಾಗಿ ಬಿಗ್ ಫೈಟ್; ನೇರಪ್ರಸಾರ, ಸಮಯ, ಪ್ಲೇಯಿಂಗ್ ಇಲೆವೆನ್, ಪಿಚ್ ವರದಿ ಮಾಹಿತಿ
ನ್ಯೂ ಚಂಡೀಗಢ: 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ರೋಚಕ ಘಟ್ಟದತ್ತ ಮುಖಮಾಡಿದೆ. ಶುಕ್ರವಾರ ಈ ಲೀಗ್ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಮೇ 31 ರಂದು ನಡೆಯಲಿರುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಆಡಲಿದೆ.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 92 ರನ್‌ಗಳ ಸೋಲು ಕಂಡಿದ್ದ ಟೈಟಾನ್ಸ್, ಹಿಂದಿನ ಪಂದ್ಯದಲ್ಲಿ ಆಗಿದ್ದ ನ್ಯೂನತೆಗಳನ್ನು ಮೆಟ್ಟಿನಿಂತು ಆಡುವ ಕನಸು ಕಾಣುತ್ತಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಅಬ್ಬರಿಸಿದ ರಾಜಸ್ಥಾನ್ ರಾಯಲ್ಸ್ ಗೆಲುವಿನ ಟ್ರ್ಯಾಕ್ ಮುಂದುವರಿಸುವ ಪ್ಲ್ಯಾನ್ ಮಾಡಿಕೊಂಡಿದೆ.

ಉಭಯ ತಂಡಗಳು ಮೇಲ್ನೋಟಕ್ಕೆ ಸಮಬಲದಂತೆ ಕಾಣುತ್ತವೆ. ಉಭಯ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಟಾಪ್ ಆರ್ಡರ್ ಆಧಾರ. ಇನ್ನು ವೇಗದ ಬೌಲಿಂಗ್‌ನಲ್ಲಿ ಅನುಭವಿಗಳು ಬಲ ತುಂಬಿದ್ದಾರೆ. ಶುಕ್ರವಾರ ಯಾರು ಜಯದ ಕೇಕೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪಿಚ್ ಯಾರಿಗೆ ನೆರವು ನೀಡಬಹುದು?
ಮುಲ್ಲಾನ್‌ಪುರದ ಮೈದಾನವು ಬ್ಯಾಟಿಂಗ್‌ಗೆ ಅತ್ಯಂತ ಸೂಕ್ತ. ಈ ಪಿಚ್ ಮೇಲೆ 211 ರನ್ ಸರಾಸರಿ ಸ್ಕೋರ್ ಆಗಿದೆ. ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡಲು ಇಷ್ಟಪಡಬಹುದು. ಈ ಪಿಚ್‌ನಲ್ಲಿ ವೇಗಿಗಳು ಹಾಗೂ ಸ್ಪಿನ್ನರ್‌ಗಳು ಸ್ವಲ್ಪ ನೆರವು ಪಡೆಯಬಹುದು.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ?
ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಗ್ಲೆನ್ ಫಿಲಿಪ್ಸ್, ಜೋಸ್ ಬಟ್ಲರ್, ರಾಹುಲ್ ತೇವಾಟಿಯಾ, ವಾಷಿಂಗ್ಟನ್ ಸುಂದರ್, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಅಶೋಕ್ ಶರ್ಮಾ, ತುಷಾರ್ ದೇಶಪಾಂಡೆ.
ಗುಜರಾತ್ ತಂಡದ ಪರ ರನ್ ಹಾಗೂ ವಿಕೆಟ್‌ನಲ್ಲಿ ಅಬ್ಬರಿಸಿದ ಆಟಗಾರರು ಯಾರು?
ಸಾಯಿ ಸುದರ್ಶನ್, 15 ಪಂದ್ಯ, 652 ರನ್
ಶುಭಮನ್ ಗಿಲ್, 14 ಪಂದ್ಯ, 618 ರನ್
ಜೋಸ್ ಬಟ್ಲರ್, 15 ಪಂದ್ಯ, 498 ರನ್
ಕಗಿಸೋ ರಬಾಡ, 15 ಪಂದ್ಯ, 26 ವಿಕೆಟ್
ರಶೀದ್ ಖಾನ್ 15 ಪಂದ್ಯ, 19 ವಿಕೆಟ್
ಮೊಹಮ್ಮದ್ ಸಿರಾಜ್, 15 ಪಂದ್ಯ, 17 ವಿಕೆಟ್
ರಾಜಸ್ಥಾನ್ ರಾಯಲ್ಸ್ ಯಾವೆಲ್ಲಾ ಆಟಗಾರರಿಗೆ ಅವಕಾಶ ನೀಡಬಹುದು?
ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿ ಬಿಷ್ಣೋಯ್, ಜೋಫ್ರಾ ಆರ್ಚರ್, ಸಂದೀಪ್ ಶರ್ಮಾ, ನಾಂದ್ರೆ ಬರ್ಗರ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್.
ಇವರೇ ರಾಜಸ್ಥಾನ್ ತಂಡಕ್ಕೆ ಬಲ ತುಂಬಿದ ಆಟಗಾರರು
ವೈಭವ್ ಸೂರ್ಯವಂಶಿ, 15 ಪಂದ್ಯ, 680 ರನ್
ಧ್ರುವ್ ಜುರೇಲ್, 15 ಪಂದ್ಯ, 508 ರನ್
ಯಶಸ್ವಿ ಜೈಸ್ವಾಲ್, 15 ಪಂದ್ಯ, 426 ರನ್
ಜೋಫ್ರಾ ಆರ್ಚರ್, 15 ಪಂದ್ಯ, 24 ವಿಕೆಟ್
ನಾಂದ್ರೆ ಬರ್ಗರ್, 12 ಪಂದ್ಯ, 13 ವಿಕೆಟ್
ಬ್ರಿಜೇಷ್ ಶರ್ಮಾ, 12 ಪಂದ್ಯ, 13 ವಿಕೆಟ್
ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಎಲ್ಲಿ ನೋಡಬಹುದು?
ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಣ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್‌ನಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್ ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.
ಜಿಟಿ ಹಾಗೂ ಆರ್‌ಆರ್ ನಡುವಣ ಪಂದ್ಯ ನಡೆಯುವುದು ಯಾವಾಗ?
ಎರಡನೇ ಕ್ವಾಲಿಫೈಯರ್ ಸಂಜೆ 7.30ಕ್ಕೆ ಆರಂಭವಾಗಲಿದೆ. ಪಂದ್ಯ ಆರಂಭಕ್ಕೆ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

